ಸೋಮವಾರ, ಜುಲೈ 4, 2022
24 °C

ನಾಗ ಚೈತನ್ಯರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ ಸಮಂತಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH FILE PHOTO

ಬೆಂಗಳೂರು: ದಕ್ಷಿಣ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಸಮಂತಾ ಮತ್ತು ನಾಗಚೈತನ್ಯ ಜೋಡಿ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು.

ಅದಾದ ಬಳಿಕ ಸಮಂತಾ ಅವರು, ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಹೆಸರಿನ ಜತೆಗಿದ್ದ 'ಅಕ್ಕಿನೇನಿ' ಹೆಸರನ್ನು ಅಳಿಸಿ ಹಾಕಿ, 'ಸಮಂತಾ ರುತ್ ಪ್ರಭು ಅಫೀಶಿಯಲ್' ಎಂದು ಬದಲಾಯಿಸಿಕೊಂಡಿದ್ದರು.

ಜತೆಗೇ, ವೈಯಕ್ತಿಕ ಜೀವನ ಮತ್ತು ಆಯ್ಕೆಗಳು ಹಾಗೂ ವಿಚ್ಛೇದನದ ಬಳಿಕ ಕೇಳಿಬಂದ ಚುಚ್ಚು ಮಾತುಗಳಿಗೂ ಸಮಂತಾ ನೇರವಾಗಿ ಉತ್ತರ ನೀಡಿ ಪೋಸ್ಟ್ ಮಾಡಿದ್ದರು.

ಈ ಬಾರಿ ಸಮಂತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ನಾಗ ಚೈತನ್ಯ ಅವರನ್ನು ಅನ್‌ಫಾಲೋ ಮಾಡಿದ್ದಾರೆ.

ಅಲ್ಲದೆ, ನಾಗಚೈತನ್ಯ ಜತೆಗಿರುವ ಫೋಟೊಗಳು ಮತ್ತು ಟ್ಯಾಗ್ ಮಾಡಲಾದ ಚಿತ್ರಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು