ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ ‘ಆಹಾ ನಾಟಕೋತ್ಸವ’

Last Updated 9 ಜುಲೈ 2019, 19:45 IST
ಅಕ್ಷರ ಗಾತ್ರ

ಮಕ್ಕಳ ‘ಆಹಾ ನಾಟಕೋತ್ಸವ’ ಈ ಬಾರಿ ವಿಶೇಷ ನಾಟಕಗಳ ಜೊತೆ ಆರಂಭವಾಗಲಿದೆ.

ರಂಗಭೂಮಿಯ ಚಟುವಟಿಕೆಗಳು ಎಲ್ಲಾ ವರ್ಗದ ಜನರನ್ನು ತಲುಪಬೇಕು. ಬೆಂಗಳೂರಿನ ಮಕ್ಕಳು ನಾಟಕದ ಭಾಗವಾಗಬೇಕು ಎಂಬ ಕನಸಿನೊಂದಿಗೆರಂಗಶಂಕರದಲ್ಲಿ2009ರಲ್ಲಿ ಆಹಾ ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವ ಪ್ರಾರಂಭವಾಗಿತ್ತು.

ರಂಗಭೂಮಿಯ ವಿಸ್ಮಯಗಳನ್ನು ಮಕ್ಕಳು ಅರಿತುಕೊಳ್ಳಲು ಈ ಉತ್ಸವ ನೆರವಾಗಲಿದೆ. ಜರ್ಮನಿ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಪೋಲೆಂಡ್, ಇಟಲಿ, ಇಸ್ರೇಲ್‌, ಶ್ರೀಲಂಕಾ, ನೆದರ್‌ಲೆಂಡ್‌, ಸ್ವಿಟ್ಜರ್‌ಲೆಂಡ್‌ ಹಾಗೂ ಭಾರತೀಯ ನಾಟಕಗಳು ಈ ಉತ್ಸವದ ವಿಶೇಷ.

ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಉತ್ಸವದಲ್ಲಿ ವಿವಿಧ ನಾಟಕಗಳನ್ನು ನೋಡಲಿದ್ದಾರೆ. 20 ತಿಂಗಳ ಮಗುವಿನಿಂದ 16 ವರ್ಷದ ಮಕ್ಕಳಿಗಾಗಿಯೇ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಅಂತರರಾಷ್ಟ್ರೀಯ ನಾಟಕಗಳನ್ನು ಮಕ್ಕಳು ನೋಡಲಿದ್ದಾರೆ.

ಜುಲೈ 14ರಿಂದ 20ರವರೆಗೆ ನಾಟಕೋತ್ಸವ ನಡೆಯಲಿದೆ. ಬೊಂಬೆಯಾಟ ಪ್ರಕಾರವನ್ನು ಕೇಂದ್ರವಾಗಿಟ್ಟುಕೊಳ್ಳಲಾಗಿದೆ.

ಮೊದಲ ಬಾರಿಗೆ ಈ ಉತ್ಸವ ಬೆಂಗಳೂರು ಮಾತ್ರವಲ್ಲದೆ ಅಹಮದಾಬಾದ್‌ ಹಾಗೂ ಹೈದರಾಬಾದ್‌ನಲ್ಲಿಯೂ ಏಕ ಕಾಲದಲ್ಲಿ ನಡೆಯಲಿದೆ.

ನಾಟಕಗಳು: ಎಸ್‌.ಸುರೇಂದ್ರನಾಥ್‌ ನಿರ್ದೇಶನದ ‘ಓಲ್ಡ್‌ ಮ್ಯಾನ್‌ ಅಂಡ್‌ ದಿ ನೀ’ ನಾಟಕ ಜುಲೈ 14ರಂದು ಭಾನುವಾರ ಮಧ್ಯಾಹ್ನ 3.30ಕ್ಕೆ ಹಾಗೂ ಸಂಜೆ 7.30ಕ್ಕೆ ಎರಡು ಪ್ರದರ್ಶನ ನಡೆಯಲಿದೆ. ಇದು ಹೆಮಿಂಗ್ವೇ ಕಿರು ಕಾದಂಬರಿ ಆಧಾರಿತವಾಗಿದೆ. 40 ನಿಮಿಷ.

ಜುಲೈ 15ರಂದು ಸೋಮವಾರ, ಸಂಜೆ 7.30ಕ್ಕೆ ‘ಸ್ಕ್ವೈರೆಲ್‌ ಸ್ಟೋಲ್‌ ಮೈ ಅಂಡರ್‌ ಪ್ಯಾಂಟ್ಸ್‌’ ನಾಟಕ ಪ್ರದರ್ಶನಗೊಳ್ಳಲಿದೆ. ನಿರ್ದೇಶನ–ಡಾನ್‌ ಮಿಲ್‌ ಸ್ಟೆನ್‌, ರಚನೆ–ಬಾನಿ ಡಂಕನ್‌, ಸಂಗೀತ–ಬ್ರೆಂಡನ್‌ ಬರ್ನ್ಸ್‌ ಹಾಗೂ ಅಂಥನಿ ಲೆವಾ, 40 ನಿಮಿಷಗಳು, 4 ವರ್ಷ ಮೇಲ್ಪಟ್ಟವರಿಗೆ ಮಾತ್ರ.

ಜುಲೈ 16ರಂದು, ಮಂಗಳವಾರ, ಸಂಜೆ 7.30ಕ್ಕೆ ‘ಹ್ಯಾಪಿ ಬರ್ಥ್‌ಡೇ ಆರ್‌ ವಾಟ್ಸ್‌ ರಾಟಲಿಂಗ್‌ ಇನ್‌ ದಿ ಬಾಕ್ಸ್‌?, ರಚನೆ–ಎವಾ ಕೌಫ್ಮನ್‌, ಬಾಷೆಯಿಲ್ಲ, 40 ನಿಮಿಷ, 5 ವರ್ಷ ಮೇಲ್ಪಟ್ಟ ಮಕ್ಕಳಿಗೆ.

ಜುಲೈ 17ರಂದು, ಬುಧವಾರ, ಸಂಜೆ 7.30ಕ್ಕೆ ‘ಮೈ ಶಾಡೋ ಆ್ಯಂಡ್‌ ಮಿ’, ರಚನೆ–ಡ್ರೂ ಕಾಲ್‌ಬಿ, 45ನಿಮಿಷ, 4 ವರ್ಷ ಮೇಲ್ಪಟ್ಟವರಿಗೆ.

ಜುಲೈ 18, ಗುರುವಾರ, ‘ವೂಗಿ ಬೂಗಿ’ ನಿರ್ದೇಶನ–ಯೊಂಗ್‌ಕುನ್‌ ಯೋಮ್‌, ಭಾಷೆಯಿಲ್ಲ, 50 ನಿಮಿಷಗಳು, 4 ವರ್ಷ ಮೇಲ್ಪಟ್ಟ ಮಕ್ಕಳಿಗೆ.

ಜುಲೈ 19, ಶುಕ್ರವಾರ, ಸಂಜೆ 7.30ಕ್ಕೆ ‘ಬಾಡಿ ರಾಪ್ಸೊಡಿ’, 45 ನಿಮಿಷಗಳು, 5 ವರ್ಷ ಮೇಲ್ಪಟ್ಟವರಿಗೆ.

ಜುಲೈ 20, ಶನಿವಾರ, ಮಧ್ಯಾಹ್ನ 3.30, ಸಂಜೆ 7.30ಕ್ಕೆ, ‘ಕಾರ್ನಿವಲ್‌ ಆಫ್‌ ಟ್ರಾನ್ಸ್‌ ಫಿಗಾರೋ’, ನಿರ್ದೇಶನ–ಶಿವಾ ಗ್ರಿಂಗ್ಸ್‌, ಭಾಷೆಯಿಲ್ಲ, 45 ನಿಮಿಷಗಳು, 5 ವರ್ಷ ಮೇಲ್ಪಟ್ಟ ಮಕ್ಕಳಿಗೆ.

ಎಲ್ಲಾ ನಾಟಕಗಳು ರಂಗಶಂಕರದಲ್ಲಿ ನಡೆಯಲಿದೆ. ಟಿಕೆಟ್‌ಗಾಗಿ ರಂಗಶಂಕರ ಹಾಗೂ ಬುಕ್‌ಮೈಶೋ ನಲ್ಲಿ ಬುಕ್‌ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT