ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bigg Boss 8: ಬಹುಮಾನದ ಮೊತ್ತದಲ್ಲಿ ಹೆಚ್ಚಳ, ಗೆದ್ದವರಿಗೆ ಸಿಗುವ ಮೊತ್ತವೆಷ್ಟು?

Last Updated 8 ಆಗಸ್ಟ್ 2021, 2:02 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ ಬಾಸ್ ಗೆದ್ದವರಿಗೆ ಈ ಹಿಂದೆ ₹ 50 ಲಕ್ಷ ಬಹುಮಾನ ಸಿಗುತ್ತಿತ್ತು. ಆದರೆ, ಈ ಬಾರಿ ಬಹುಮಾನದ ಮೊತ್ತದಲ್ಲಿ ಕೊಂಚ ಏರಿಕೆ ಮಾಡಲಾಗಿದೆಎಂದು ಸುದೀಪ್ ಘೋಷಿಸಿದ್ದಾರೆ.

ಈ ಬಾರಿ ಗೆದ್ದವರಿಗೆ ಸಿಗುವ ನಗದು ಎಷ್ಟು?

ಬಿಗ್ ಬಾಸ್ ಸೀಸನ್ 8ರ ವಿಜೇತ ಸ್ಪರ್ಧಿಗೆ ₹50 ಲಕ್ಷ ಬದಲಿಗೆ ₹ 53 ಲಕ್ಷ ನೀಡಲಾಗುತ್ತಿದೆ. ಹಾಗೆಯೇ, ಮೊದಲ ರನ್ನರ್‌ ಅಪ್‌ಗೆ ₹ 11 ಲಕ್ಷ, ಎರಡನೇ ರನ್ನರ್‌ ಅಪ್‌ಗೆ ₹ 6 ಲಕ್ಷ, ಮೂರನೇ ರನ್ನರ್ ಅಪ್‌ಗೆ ₹ 3.5 ಲಕ್ಷ ಮತ್ತು ನಾಲ್ಕನೇ ರನ್ನರ್‌ ಅಪ್‌ಗೆ ₹ 2.5 ಲಕ್ಷ ಸಿಗಲಿದೆ.

ಈ ಬಾರಿ ಫಿನಾಲೆಗೆ ಬಂದ ಯಾರನ್ನೂ ಬರಿಗೈಲಿ ಕಳುಹಿಸಬಾರದೆಂದು ಬಿಗ್ ಬಾಸ್ ಈ ನಿರ್ಧಾರ ಮಾಡಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.

ಸದ್ಯ, ನಾಲ್ಕನೇ ರನ್ನರ್ ಅಪ್‌ ಆಗಿರುವ ಪ್ರಶಾಂತ್ ಸಂಬರಗಿಗೆ 2.5 ಲಕ್ಷ ಮತ್ತು 3ನೇ ರನ್ನರ್ ಅಪ್‌ ವೈಷ್ಣವಿಗೆ 3.5 ಲಕ್ಷ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT