ಭಾನುವಾರ, ಜೂನ್ 13, 2021
25 °C

ಬೇರ್‌ ಗ್ರಿಲ್‌ ಜೊತೆ ‘ಇನ್‌ ಟು ದಿ ವೈಲ್ಡ್‌’ನಲ್ಲಿ ಅಕ್ಷಯ್‌: ಪ್ರೋಮೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಖ್ಯಾತ ಚಾರಣಿಗ ಬೇರ್ ಗ್ರಿಲ್ಸ್‌ ಅವರೊಂದಿಗೆ ‘ಇನ್‌ ಟು ದಿ ವೈಲ್ಡ್’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ವತಃ ಅಕ್ಷಯ್‌ ಕುಮಾರ್‌ ಶುಕ್ರವಾರ, ಟ್ವಿಟರ್‌ನಲ್ಲಿ ಈ ಸುದ್ದಿ ತಿಳಿಸಿದ್ದಾರೆ.

ನಟ ಅಕ್ಷಯ್ ಕುಮಾರ್ ಅತಿಥಿಯಾಗಿ ಕಾಣಿಸಿಕೊಂಡಿರುವ ಇಂಟು ದಿ ವೈಲ್ಡ್ ಎಪಿಸೋಡ್‌ ಸೆಪ್ಟೆಂಬರ್ 11 ರಂದು ಡಿಸ್ಕವರಿ + (ಪ್ಲಸ್‌) ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಬೇರ್‌ ಗ್ರಿಲ್ಸ್‌ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ನಟ ರಜನಿಕಾಂತ್ ಅವರನ್ನು ಒಳಗೊಂಡ ಸಾಹಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ನೀವು ನನ್ನನ್ನು ಹುಚ್ಚನೆಂದುಕೊಂಡಿದ್ದೀರಾ... ಆದರೆ, ಹುಚ್ಚ ಮಾತ್ರ ಕಾಡಿಗೆ ಹೋಗುತ್ತಾನೆ,’ ಎಂಬ ಶೀರ್ಷಿಕೆಯೊಂದಿಗೆ ಅವರು ಕಾರ್ಯಕ್ರಮದ ಪ್ರೋಮವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು