ಬಿಡದಿ (ರಾಮನಗರ): ಕನ್ನಡದ ಜನಪ್ರಿಯ ರಿಯಾಲಿಟಿ ಷೋ ‘ಬಿಗ್ ಬಾಸ್’ನ 12ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಒಂದು ಕಡೆ ಕ್ಷಣಗಣನೆ ಆರಂಭವಾಗಿದ್ದರೆ, ಮತ್ತೊಂದೆಡೆ ಷೋ ನಡೆಯುತ್ತಿರುವ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೊ ಎದುರು ಸ್ಪರ್ಧಿ ಗಿಲ್ಲಿ ಮತ್ತು ಕಾವ್ಯ ಅವರ ಕಟೌಟ್ ರಾರಾಜಿಸುತ್ತಿದೆ.

ಮಧ್ಯಾಹ್ನದಿಂದಲೇ ಗಿಲ್ಲಿ ಅಭಿಮಾನಿಗಳು ಸ್ಟುಡಿಯೊದತ್ತ ಜಮಾಯಿಸಿದರು. ‘ಗಿಲ್ಲಿ ಗಿಲ್ಲಿ’ ಎಂದು ಘೋಷಣೆ ಕೂಗುತ್ತಾ ತಮ್ಮ ನೆಚ್ಚಿನ ಸ್ಪರ್ಧಿಯ ಗೆಲುವಿಗೆ ಹಾರೈಸಿದರು. ಗಿಲ್ಲಿ ಕಟೌಟ್ಗೆ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿದರು. ಅಂತಿಮ ಫಲಿತಾಂಶಕ್ಕೆ ಕಾತರದಿಂದ ಕಾದು ಕುಳಿತರು.

ಸಂಜೆ ಶುರುವಾಗಲಿರುವ ಷೋನ ಗ್ರ್ಯಾಂಡ್ ಫಿನಾಲೆಗೆ ಮುಂಚೆಯೇ ಸ್ಟುಡಿಯೊದತ್ತ ಅಭಿಮಾನಿಗಳು ಜಮಾಯಿಸುತ್ತಿರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಸ್ಟುಡಿಯೊದ ಮೂರೂ ಪ್ರವೇಶದ್ವಾರಗಳ ಬಳಿ ಬಂದೋಬಸ್ತ್ಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಜನರನ್ನು ನಿಯಂತ್ರಿಸಲು ಬ್ಯಾರಿಕೇಡ್ಗಳನ್ನು ಅಳವಡಿಸಿ, ಅಲ್ಲಲ್ಲಿ ಪೊಲೀಸ್ ಕಾವಲು ಹಾಕಲಾಗಿದೆ.

ವಿಶೇಷ ಪೂಜೆ: ಸ್ಪರ್ಧಿ ಗಿಲ್ಲಿ ಅವರ ಗೆಲುವಿಗಾಗಿ ಮಾಗಡಿ ಪಟ್ಟಣದಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ಓಂ ಶಕ್ತಿ ಮಾಲಾಧರಿಗಳು ವಿಶೇಷ ಪೂಜೆ ಮಾಡಿದರು. ನಂತರ ದೇವಾಲಯದ ಹೊರಗೆ ಗಿಲ್ಲಿ ಫೋಟೊ ಹಿಡಿದು ಜೈಕಾರ ಹಾಕಿದರು.
.Bigg Boss 12: ಅಶ್ವಿನಿ ಗೌಡಗೆ ಕ್ಷಮೆ ಕೇಳಿದ ಗಿಲ್ಲಿ ನಟ.BBK 12: ‘ಮನಿ’ಗೂ ಅಭಿಮಾನಿಗೂ ಏನು ವ್ಯತ್ಯಾಸ? ಫ್ಯಾನ್ಸ್ ಮುಂದೆ ಗಿಲ್ಲಿ ಅಬ್ಬರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.