ಹಲವು ಬಾರಿ ಬಿಗ್ ಬಾಸ್ ಮನೆಯ ಮೂಲ ನಿಯಮವನ್ನು ಉಲ್ಲಂಘಿಸಿದ ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಈಗ ದೊಡ್ಡ ಶಿಕ್ಷೆ ಸಿಕ್ಕಿದೆ. ಕಳೆದ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಎಚ್ಚರಿಕೆ ಕೊಟ್ಟಿದ್ದರೂ ಕೂಡ ಅಶ್ವಿನಿ ಗೌಡ ಹಾಗೂ ಜಾಹ್ನವಿ ಮತ್ತೆ ಬಿಗ್ಬಾಸ್ ಮನೆಯ ನಿಯಮವನ್ನು ಉಲ್ಲಂಘಿಸಿದ್ದಾರೆ.
.ಬಿಗ್ಬಾಸ್ ಇಡೀ ತಂಡಕ್ಕೆ ಕ್ಷಮೆಯಾಚಿಸಿದ ಅಶ್ವಿನಿ ಗೌಡ: ಕಾರಣ ಇಲ್ಲಿದೆ.ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ? ಅಶ್ವಿನಿ ಗೌಡ ಆರೋಪಕ್ಕೆ ಸುದೀಪ್ ಗರಂ.
ಕಳೆದ ವಾರ ಅಶ್ವಿನಿ ಗೌಡ ಹಾಗೂ ಜಾಹ್ನವಿ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಮೈಕ್ ಇಲ್ಲದೆ ಮಾತನಾಡಿದ್ದರು. ಈ ಸಂಬಂಧ ಕಿಚ್ಚ ಸುದೀಪ್ ಅವರು ಇಬ್ಬರಿಗೂ ತರಾಟೆ ತೆಗೆದುಕೊಂಡಿದ್ದಾರೆ. ಆದರೆ ಸುದೀಪ್ ಅವರು ಎಚ್ಚರಿಕೆ ಕೊಟ್ಟ ಕೆಲವೇ ಗಂಟೆಗಳಲ್ಲಿ ಅಶ್ವಿನಿ ಹಾಗೂ ಜಾಹ್ನವಿ ಮತ್ತೆ ಅದೇ ತಪ್ಪು ಮಾಡಿ ಬಿಗ್ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಭಾನುವಾರದ ಸಂಚಿಕೆ ಮುಗಿದ ಬಳಿಕ ಜಾಹ್ನವಿ ಹಾಗೂ ಅಶ್ವಿನಿ ಬಟ್ಟೆ ಬದಲಾಯಿಸುವ ಕೊಠಡಿಗೆ ತೆರಳಿದರು. ಈ ವೇಳೆ ಜಾಹ್ನವಿ ಹಾಗೂ ಅಶ್ವಿನಿ ಪಿಸು ಧ್ವನಿಯಲ್ಲಿ ಮಾತನಾಡಿದ್ದಾರೆ. ಆ ಕೂಡಲೇ ಬಿಗ್ಬಾಸ್ ಎಚ್ಚರಿಸಿ ಹೊರ ಬರುವಂತೆ ಸೂಚಿಸಿದರು. ಮರುದಿನ ಬಿಗ್ಬಾಸ್ ಎಲ್ಲರನ್ನೂ ಕರೆದು ಜಾಹ್ನವಿ ಹಾಗೂ ಅಶ್ವಿನಿ ಮಾಡಿದ ತಪ್ಪನ್ನು ಟಿವಿ ಮೂಲಕ ತೋರಿಸಿದರು.

ಮನೆಯ ಮೂಲ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಜಾಹ್ನವಿ ಹಾಗೂ ಅಶ್ವಿನಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದಾದ ಬಳಿಕ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ‘ಹುಕ್ ತೆಗೆಯುತ್ತಾ ಇದ್ದೆವು. ನಾವು ಬೇಕಂತಲೇ ಈ ರೀತಿ ಮಾಡಿಲ್ಲ’ ಎಂದು ಜಾಹ್ನವಿ ಹಾಗೂ ಅಶ್ವಿನಿ ಗೌಡ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.