ಬಿಗ್ಬಾಸ್ ಮನೆಗೆ ಜಂಟಿಯಾಗಿ ಪ್ರವೇಶಿಸಿದ್ದ ಮಲ್ಲಮ್ಮ ಆಚೆ ಬಂದಿದ್ದಾರೆ. ಕಳೆದ ಸಂಚಿಕೆಯಲ್ಲಿ (ಭಾನುವಾರ) ಎಲಿಮಿನೇಟ್ ಆಗಿ ಹೊರಬಂದಿದ್ದ ಮಲ್ಲಮ್ಮರನ್ನು ಮನೆಯ ಮಾಲೀಕರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

1 ತಿಂಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ಗಳ ಜೊತೆ ತಮ್ಮ ಮುಗ್ಧ ಮಾತುಗಳ ಮೂಲಕ ಮನರಂಜನೆ ನೀಡುತ್ತಿದ್ದ ಉತ್ತರ ಕರ್ನಾಟಕ ಮೂಲದ ‘ಮಾತಿನ ಮಲ್ಲಿ’ ಎಂದೇ ಖ್ಯಾತಿ ಪಡೆದುಕೊಂಡಿದ್ದ ಮಲ್ಲಮ್ಮ ವೀಕ್ಷಕರಿಂದ ಕಡಿಮೆ ವೋಟ್ ಪಡೆದು ಆಚೆ ಬಂದಿದ್ದಾರೆ.
.BBK12 | ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಕೈ ಮಾಡಿದ ರಿಷಾ: ಕಾರಣವೇನು?.ಬಿಗ್ಬಾಸ್ ಮನೆಯಿಂದ ಏಕಾಏಕಿ ಆಚೆಬಂದ್ರಾ ಮಲ್ಲಮ್ಮ? ಇಲ್ಲಿದೆ ಅಸಲಿಯತ್ತು.
ಬಿಗ್ಬಾಸ್ ಮನೆಯಿಂದ ವಿದಾಯ ಹೇಳಿದ ಮಲ್ಲಮ್ಮ ಮತ್ತೆ ತಮ್ಮ ಮಾಲೀಕರ ಮನೆಗೆ ವಾಪಸ್ ಆಗಿದ್ದಾರೆ. ಆಗ ಮಲ್ಲಮ್ಮ ಅವರ ಸ್ನೇಹಿತರು ಸೇರಿದಂತೆ ಸಾಕಷ್ಟು ಮಂದಿ ಸ್ವಾಗತಿಸಿದ್ದಾರೆ. ಕೇಕ್ ಕತ್ತರಿಸುವ ಮೂಲಕ ಬಿಗ್ಬಾಸ್ ಮನೆಯಲ್ಲಿ ಒಂದು ತಿಂಗಳು ಆಟ ಆಡಿದಕ್ಕೆ ಹೆಮ್ಮೆ ಆಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಡಿಯೊವನ್ನು ಮಲ್ಲಮ್ಮ ತಮ್ಮ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುತ್ತಿರುವ ನಟ ಮನೋಜ್ ಕುಮಾರ್ ಅವರು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಮತ್ತೆ ಸ್ವಾಗತ ಮುದ್ದು ಮಲ್ಲಮ್ಮ’ ಎಂದು ಬರೆದುಕೊಂಡು ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊ ನೋಡಿದ ಮಲ್ಲಮ್ಮ ಅನುಯಾಯಿಗಳು, ‘ಮಲ್ಲಮ್ಮ ನಾವೆಲ್ಲಾ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ’, ‘ನೀವು ಇನ್ನು ಇರಬೇಕಿತ್ತು’, ‘ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ ಮಲ್ಲಮ್ಮ’ ಎಂದು ಕಾಮೆಂಟ್ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.