ಭಾನುವಾರ, ಆಗಸ್ಟ್ 14, 2022
25 °C

Bigg Boss 8: ಕೇಳಲು ಅಸಾಧ್ಯವಾದ ಅಸಭ್ಯ ಪದ ಬಳಕೆ| ಪ್ರಶಾಂತ್– ಚಕ್ರವರ್ತಿ ಕುಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿಯಲು ಕೆಲವೇ ವಾರಗಳು ಬಾಕಿ ಉಳಿದಿರುವಂತೆ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಇದರ ನಡುವೆ ಕಿತ್ತಾಟ, ಕೂಗಾಟ ಮತ್ತು ಅಸಭ್ಯ ಪದಗಳ ಬಳಕೆ ಕೂಡ ಆಗುತ್ತಿದೆ.

ಒಬ್ಬ ಅಪ್ಪ–ಅಮ್ಮನಿಗೆ ಹುಟ್ಟಿದ್ದೀನಿ: ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ದಿನದಿಂದಲೇ ವಿವಾದಗಳ ಮೂಲಕ ಸುದ್ದಿ ಮಾಡುತ್ತಿರುವ ಚಕ್ರವರ್ತಿ ಚಂದ್ರಚೂಡ್ ಎರಡನೇ ಇನಿಂಗ್ಸ್‌ನ 6ನೇ ದಿನ ಮತ್ತಷ್ಟು ರೊಚ್ಚಿಗೆದ್ದಿರುವುದು ಪ್ರೊಮೋ(ಜುಲೈ 8ರ ಎಪಿಸೋಡ್)ದಲ್ಲಿ ಬಹಿರಂಗವಾಗಿದೆ. ವೈಷ್ಣವಿಗೆ ಸಲಹೆ ನೀಡಿದ ವಿಚಾರವಾಗಿ ಚಕ್ರವರ್ತಿ ಮತ್ತು ಪ್ರಶಾಂತ್ ಸಂಬರಗಿ ನಡುವೆ ಜೋರು ಜೋರು ಮಾತುಕತೆ ನಡೆದು ಅಸಭ್ಯ ಪದಗಳ ಬಳಕೆಯೂ ನಡೆದಿದೆ. ಈ ವಿಚಾರವನ್ನು ಹಲ್ಕಟ್ ರೀತಿ ಮಾಡಿದೆ ಎಂದು ಪ್ರಶಾಂತ್ ಹೇಳಿದ್ದಕ್ಕೆ ಸಿಡಿದ ಚಕ್ರವರ್ತಿ, ನೀನು ಹಲ್ಕಟ್, ನಾನು ಒಬ್ಬ ಅಪ್ಪ–ಅಮ್ಮನಿಗೆ ಹುಟ್ಟಿದ್ದೇನೆ ಎಂದು ಎಗರಾಡಿದರು. ಗುಟ್ಟು ಕಾಪಾಡಲು ಆಗದಿದ್ದರೆ ಪರ್ಸನಲ್ ಆಗಿ ಏಕೆ ಮಾತನಾಡುತ್ತೀಯಾ? ಎಂದು ಕೂಗಾಡಿದ್ದಾರೆ.

ದಿವ್ಯಾ–ಅರವಿಂದ್ ಬಗ್ಗೆ ಪ್ರಶಾಂತ್ ತಪ್ಪಾಗಿ ಹೇಳಿದ್ರಾ?: ಪ್ರಶಾಂತ್ ಗುಟ್ಟು ಕಾಪಾಡಲಿಲ್ಲ ಎಂಬ ಸಿಟ್ಟಿನಲ್ಲಿ ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ್, ತಾಕತ್ತಿದ್ದರೆ ಕೆ.ಪಿ. ಅರವಿಂದ್ ಮತ್ತು ದಿವ್ಯಾ ಉರುಡುಗ ಬಗ್ಗೆ ನೀನು ಮಾತನಾಡಿದ್ದನ್ನು ಬಹಿರಂಗಪಡಿಸು ಎಂದು ಸವಾಲಾಕಿರುವುದು ಪ್ರೊಮೋದಲ್ಲಿದೆ.

ಮೋಸ ಮಾಡಿದ ಮಂಜು–ಉರುಡುಗ: ಮತ್ತೊಂದು ಪ್ರೊಮೊದಲ್ಲಿ ಪ್ರಶಾಂತ್ ಸಂಬರಗಿಯವರು ದಿವ್ಯಾ ಮೋಸ ಮಾಡಿದಳು, ಮಂಜು ಮೋಸ ಮಾಡಿದ ಎಂದು ಜೋರಾಗಿ ಕೂಗಿರುವುದು ಕಂಡು ಬಂದಿದೆ. ನೋಟ್ ಪ್ರಿಂಟ್ ಮಾಡುವ ಟಾಸ್ಕ್‌ನಲ್ಲಿ ಮೊದಲು ಬಂದ ಐವರಿಗೆ ಮಾತ್ರ ಏಪ್ರಾನ್ ಸಿಗುತ್ತದೆ. ಏಪ್ರಾನ್ ಇದ್ದವರು ಮಾತ್ರ ಸ್ಪರ್ಧೆ ಮಾಡಬಹುದು. ಈ ಪೈಪೋಟಿಯಲ್ಲಿ ಒಂದೇ ಏಪ್ರಾನ್‌ಗೆ ಪ್ರಶಾಂತ್ ಮತ್ತು ಮಂಜು ಪಾವಗಡ ನಡುವೆ ಪೈಪೋಟಿ ಏರ್ಪಡುತ್ತದೆ. ನಾನು ಮೊದಲು ಕೈಹಾಕಿದೆ ಎಂದು ಪ್ರಶಾಂತ್ ಹೇಳಿದರೆ, ನಾನು ಕೊರಳಿಗೆ ಹಾಕಿಕೊಂಡದ್ದನ್ನು ಯಾಕೆ ಎಳೆಯುತ್ತೀರಿ ಎಂದು ಮಂಜು ಕೇಳಿದರು. ಈ ಮಧ್ಯೆ, ನಾಯಕಿ ದಿವ್ಯಾ ಉರುಡುಗ ಮಂಜು ಪರವಾಗಿ ತೀರ್ಪಿತ್ತರು. ಇದರಿಂದ ಕೋಪಗೊಂಡ ಪ್ರಶಾಂತ್ ಸಂಬರಗಿ, ದಿವ್ಯಾ ಮೋಸ ಮಾಡಿದಳು. ಮಂಜು ಮೋಸ ಮಾಡಿದ ಎಂದು ಜೋರಾಗಿ ಕೂಗಿದ್ದಾರೆ.

     

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು