ನವದೆಹಲಿ: ಖ್ಯಾತ ಟಿವಿ ನಟಿ ಹೀನಾ ಖಾನ್ ಬಹುಕಾಲದ ಗೆಳೆಯ ರಾಕಿ ಜೈಸ್ವಾಲ್ ಜತೆ ವಿವಾಹವಾಗಿದ್ದಾರೆ.

ಈ ಕುರಿತು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

‘ವಿಭಿನ್ನ ಜಗತ್ತಿನಿಂದ ನಾವು ಪ್ರೀತಿಯ ಲೋಕವನ್ನು ಸೃಷ್ಟಿಸಿದ್ದೇವೆ. ನಮ್ಮ ಭಿನ್ನಾಭಿಪ್ರಾಯಗಳು ಮರೆಯಾದವು, ನಮ್ಮ ಹೃದಯಗಳು ಒಂದಾಗಿದ್ದವು, ಜೀವನದ ಬಂಧವನ್ನು ಸೃಷ್ಟಿಸಿದವು. ನಾವು ನಮ್ಮ ಮನೆ, ನಮ್ಮ ಬೆಳಕು, ನಮ್ಮ ಭರವಸೆ, ಎಲ್ಲಾ ಅಡೆತಡೆಗಳನ್ನು ಮೀರಿದ್ದೇವೆ. ಸತಿ–ಪತಿಗಳಾದ ನಾವು ನಿಮ್ಮಿಂದ ಆಶೀರ್ವಾದವನ್ನು ಬಯಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

2024ರ ಜೂನ್ನಲ್ಲಿ ತಮಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಪತ್ತೆಯಾಗಿರುವುದಾಗಿ ಹೀನಾ ಹೇಳಿದ್ದರು. ಈ ಜೋಡಿ ಕಳೆದ 13 ವರ್ಷಗಳಿಂದ ರಿಲೇಷನ್ಶಿಪ್ನಲ್ಲಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.