ಗುರುವಾರ , ಏಪ್ರಿಲ್ 9, 2020
19 °C

ಮುದ್ದುಲಕ್ಷ್ಮಿ - ಪ್ರೇಮಲೋಕ ಮಹಾಸಂಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಟಾರ್ ಸುವರ್ಣ ವಾಹಿನಿಯ ಎರಡು ಜನಪ್ರಿಯ ಧಾರಾವಾಹಿಗಳ ಮಹಾಸಂಗಮ ನಡೆಯಲಿದೆ. ‘ಮುದ್ದುಲಕ್ಷ್ಮಿ’ ಮತ್ತು ‘ಪ್ರೇಮಲೋಕ’ ಧಾರಾವಾಹಿಗಳ ಕಥೆ, ಕಲಾವಿದರು ಮತ್ತು ತಂತ್ರಜ್ಞರ ಸಮಾಗಮವಾಗಲಿದೆ.

ಮುದ್ದುಲಕ್ಷಿ ಮತ್ತು ಪ್ರೇಮಲೋಕದ ಮಹಾಸಂಗಮದಿಂದ ಕಿರುತೆರೆ ವೀಕ್ಷಕರಿಗೆ ಎರಡು ಧಾರಾವಾಹಿಗಳ ದುಪ್ಪಟ್ಟು ಮನರಂಜನೆ ಸವಿಯುವ ಅವಕಾಶ. ಮಹಾಸಂಗಮದ ಮೂಲಕ ವೀಕ್ಷಕರ ಕುತೂಹಲ ಮತ್ತು ಅಚ್ಚರಿ ಹೆಚ್ಚಿಸುವ ಪ್ರಯತ್ನ ವಾಹಿನಿಯದ್ದು. ಮಹಾಸಂಗಮದ ಸಂಚಿಕೆಗಳು ಜ.27ರಿಂದ ಫೆ.1ರವರೆಗೆ ರಾತ್ರಿ 7.30ರಿಂದ 8.30ರವರೆಗೆ ಪ್ರಸಾರವಾಗಲಿದೆ.

ಮಧುರ ದಾಂಪತ್ಯಕ್ಕೆ ಉದಾಹರಣೆಯಾಗಿದ್ದ ಮುದ್ದು ಲಕ್ಷ್ಮಿ ಹಾಗೂ ಧೃವಂತ್ ದಂಪತಿಗಳು ಬೇರೆಯಾಗಿ ಸಾಕಷ್ಟು ಸಮಯವಾಗಿದೆ. ಆದರೆ, ಬದುಕು ಗಂಡ -ಹೆಂಡತಿ ಇಬ್ಬರಿಗೂ ಈಗ ಮತ್ತೆ ಒಂದಾಗುವ ಅವಕಾಶ ಕಲ್ಪಿಸಿದೆ. ಆದರೆ, ಮತ್ತೊಮ್ಮ ಇವರಿಬ್ಬರ ಬದುಕಲ್ಲಿ ಮುಳ್ಳಾಗಲಿದ್ದಾಳೆ ಶಾರ್ವರಿ. ಮುದ್ದು ಲಕ್ಷ್ಮಿ ಹಾಗೂ ಧೃವಂತ್ ಒಂದಾಗಲಿದ್ದಾರೆ ಎಂಬ ಸತ್ಯ ಗೊತ್ತಾಗುತ್ತಿದ್ದ ಹಾಗೆ ಮುದ್ದುಲಕ್ಷ್ಮಿಯ ಮಗಳು ದೃಷ್ಟಿಯನ್ನು ಶಾರ್ವರಿ ಅಪಹರಿಸುತ್ತಾಳೆ. ಲಕ್ಷ್ಮಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಮುದ್ದು ಲಕ್ಷ್ಮಿ ಮತ್ತು ಧೃವಂತ್ ಒಂದಾಗದ ಹಾಗೆ ತಂತ್ರ ಮಾಡುತ್ತಾಳೆ. ಆದರೆ, ಅಪಹರಣವಾದ ದೃಷ್ಟಿ ‘ಪ್ರೇಮಲೋಕ’ದ ನಾಯಕ ಸೂರ್ಯನಿಗೆ ಸಿಗುತ್ತಾಳೆ. ದೃಷ್ಟಿಯನ್ನು ಮುದ್ದುಲಕ್ಷ್ಮಿಗೆ ವಾಪಾಸು ತಲುಪಿಸುವ ಪ್ರಯತ್ನ ಮಾಡಿ ತಾನೇ ದೊಡ್ಡ ಸಂಕಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾನೆ ಸೂರ್ಯ. ಅಂತಿಮವಾಗಿ ಶಾರ್ವರಿ ಶಕುನಿ ತಂತ್ರಗಾರಿಕೆ ಪ್ರಯೋಗ ಮಾಡಿ, ಎಲ್ಲಾ ಅಡೆತಡೆಗಳನ್ನು ದಾಟಿ ಮುದ್ದು ಬದುಕಿಗೆ ಮುಂಚಿಗಿಂತಲೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಾಳೆ.

ಹಾಗಾದರೆ ಮುದ್ದು ಲಕ್ಷ್ಮಿ ಹಾಗೂ ಧೃವಂತ್ ಒಂದಾಗುವ ದಾರಿ ಯಾವುದು? ಪ್ರೇಮಲೋಕದ ನಾಯಕ ಸೂರ್ಯ ಹಾಗೂ ನಾಯಕಿ ಪ್ರೇರಣಾ ಮುದ್ದುಲಕ್ಷ್ಮಿ ಬದುಕಿಗೆ ಹೇಗೆ ಸಹಾಯ ಮಾಡುತ್ತಾರೆ? ಸಹಾಯ ಮಾಡಲು ಹೊರಟ ಜೋಡಿ ಎದುರಿಸುವ ಸಂಕಟವೇನು? ಅಂತಿಮವಾಗಿ ಗೆಲುವು ಯಾರದ್ದು? ಈ ಎಲ್ಲಾ ಸಂಗತಿಗಳಿಗೆ ಒಂದು ವಾರ ಪ್ರಸಾರವಾಗುವ ಮಹಾಸಂಗಮದಲ್ಲಿ ಉತ್ತರ ಸಿಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು