‘ರಾಧಾ ಕಲ್ಯಾಣ’ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಚೈತ್ರ ರೈ ಅವರು ಸೀಮಂತದ ಸಂಭ್ರಮದಲ್ಲಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ADVERTISEMENT
ನಟಿ ಚೈತ್ರ ರೈ ಅವರು ಎರಡನೇ ಮಗುವನ್ನು ಬರಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಇವರು ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ವಿಷಾಕ ಪಾತ್ರದಲ್ಲಿ ನಟಿಸಿದ್ದರು.
ಚಿತ್ರ: ಇನ್‌ಸ್ಟಾಗ್ರಾಮ್
ಮಂಗಳೂರು ಮೂಲದ ನಟಿ ಕನ್ನಡದಲ್ಲಿ ಬೆರಳಿಣಿಕೆಯಷ್ಟು ಧಾರಾವಾಹಿಗಳನ್ನು ಮಾತ್ರ ಮಾಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಅದರಲ್ಲೂ ಹೆಚ್ಚಾಗಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಚೈತ್ರಾ ಅವರು ತೆಲುಗು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು.
ಚಿತ್ರ: ಇನ್‌ಸ್ಟಾಗ್ರಾಮ್
ಸದ್ಯ ನಟಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ನಟಿಯ ಮನೆಯಲ್ಲಿ ಸೀಮಂತ ಕಾರ್ಯಕ್ರಮ ನಡೆದಿದೆ.
ಚಿತ್ರ: ಇನ್‌ಸ್ಟಾಗ್ರಾಮ್
ನಟಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಂದರ ಕ್ಷಣದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಪೋಸ್ಟ್ ಜೊತೆಗೆ ‘ನನ್ನ ಜೀವನದ ಈ ಹಂತವು ಯಾವಾಗಲೂ ಅತ್ಯಂತ ಸುಂದರವಾದ ಅಧ್ಯಾಯವಾಗಿ ಉಳಿಯುತ್ತದೆ. ನನ್ನೊಳಗೆ ಒಂದು ಪುಟ್ಟ ಕಂದನನ್ನು ಹೊತ್ತುಕೊಂಡು, ಪ್ರತಿ ಸಣ್ಣ ಚಲನೆ, ಪ್ರತಿ ಒದೆತ, ಪ್ರತಿ ಕ್ಷಣದ ಮ್ಯಾಜಿಕ್ ಅನ್ನು ಅನುಭವಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ನಟಿಯ ತಾಯ್ತನದ ಸಂಭ್ರಮದ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ನಟಿಗೆ ಶುಭ ಹಾರೈಸಿದ್ದಾರೆ.