ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಳೆದ 20 ವರ್ಷಗಳಲ್ಲಿ 150 ಮದುವೆ ಸಂಬಂಧ ನಿರಾಕರಿಸಿದ್ದೇನೆ: ಮಿಕಾ ಸಿಂಗ್

Last Updated 29 ಮಾರ್ಚ್ 2022, 10:52 IST
ಅಕ್ಷರ ಗಾತ್ರ

ಬೆಂಗಳೂರು: ಗಾಯಕ ಮಿಕಾ ಸಿಂಗ್ ಅವರು, ಕಳೆದ 20 ವರ್ಷಗಳಲ್ಲಿ ಅಂದಾಜು 150 ಮದುವೆ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಕೆಲಸದ ಮೇಲೆ ಗಮನ ಕೇಂದ್ರೀಕರಿಸುವ ಸಲುವಾಗಿ ನಾನು ಮದುವೆ, ಸಂಸಾರದತ್ತ ಹೆಚ್ಚು ಆಸಕ್ತಿ ವಹಿಸಲಿಲ್ಲ. ಆದರೆ, ಈಗ ಮದುವೆಯಾಗುವ ಬಯಕೆ ಮೂಡಿದೆ ಎಂದು ಹೇಳಿದ್ದಾರೆ.

ಸ್ಟಾರ್ ಭಾರತ್ ಚಾನಲ್‌ನಲ್ಲಿ ಅವರು ‘ಸ್ವಯಂವರ್–ಮಿಕಾ ದಿ ವೋತಿ‘ ಕಾರ್ಯಕ್ರಮದ ಮೂಲಕ ಸೂಕ್ತ ವಧುವಿನ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ನನಗೆ ಅಂದು ಕೆಲಸವೇ ಮುಖ್ಯವಾಗಿತ್ತು. ಜತೆಗೆ ಹೊಸತನ್ನು ಕಲಿಯುವುದು ಕೂಡ ಅಗತ್ಯವಾಗಿತ್ತು. ಹೀಗಾಗಿ ಮದುವೆಯ ಬಗ್ಗೆ ಚಿಂತಿಸಿರಲಿಲ್ಲ ಎಂದು ಮಿಕಾ ತಿಳಿಸಿದ್ದಾರೆ.

ನಾನು ಪಾರ್ಟಿ ಮಾಡಲು ಬಯಸುತ್ತೇನೆ ಮತ್ತು ಹುಡುಗಿಯರ ಜತೆ ಸುತ್ತಾಡುತ್ತೇನೆ ಎಂದು ಜನರು ಅಂದುಕೊಂಡಿರಬಹುದು. ಆದರೆ, ವಾಸ್ತವದಲ್ಲಿ ಹಾಗಿಲ್ಲ, ನಾನು ನನ್ನ ಭವಿಷ್ಯ, ವೃತ್ತಿಯ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದ್ದೆ. ನನ್ನ ಕುಟುಂಬಕ್ಕೂ ಅದು ತಿಳಿದಿದೆ. ನನಗೀಗ 44 ವರ್ಷ, ಹೀಗಾಗಿ ಸೂಕ್ತ ವಧು ಸಿಕ್ಕರೆ ಮದುವೆಯಾಗುತ್ತೇನೆ ಎಂದು ಮಿಕಾ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT