ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದನವನದ ನಟ, ಕಿರುತೆರೆ ಕಲಾವಿದ ಶಂಕರರಾವ್‌ ನಿಧನ

ಫಾಲೋ ಮಾಡಿ
Comments

ಚಂದನವನದ ಹಿರಿಯನಟ, ಕಿರುತೆರೆ ಕಲಾವಿದ ಶಂಕರ್‌ರಾವ್‌ (84) ಅವರು ಸೋಮವಾರ ನಿಧನರಾದರು. ಅವರು ಕೆಲಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಶಂಕರರಾವ್‌ ಮೂಲತಃ ತುಮಕೂರಿನವರು. ಬಾಲ್ಯದಲ್ಲಿ ನಟನೆಯ ಆಸಕ್ತಿ ಹೊಂದಿದ್ದ ಅವರು, ತೆಲುಗು ಚಿತ್ರಗಳನ್ನು ನೋಡಿ ಸಿನಿಮಾ ಕ್ಷೇತ್ರದ ಮೇಲೆ ಆಸಕ್ತಿ ಬೆಳೆಸಿಕೊಂಡರು.

1956ರಲ್ಲಿ ಬೆಂಗಳೂರಿಗೆ ಬಂದ ಅವರು. ‘ಗೆಳೆಯರ ಬಳಗ’ ಎಂಬ ರಂಗತಂಡ ಕಟ್ಟಿ ಅದರ ಮೂಲಕ ನಾಟಕ ಪ್ರದರ್ಶನ ಮಾಡುತ್ತಿದ್ದರು. ‘ನಟರಂಗ’ ತಂಡದ ಜೊತೆಗೂ ಶಂಕರ್ ರಾವ್ ಗುರುತಿಸಿಕೊಂಡಿದ್ದರು.

ನಾಟಕಗಳಲ್ಲಿ ಶಂಕರರಾವ್‌ ಅಭಿನಯ ನೋಡಿದ ನಿರ್ಮಾಪಕರೊಬ್ಬರು ‘ಯಾರ ಸಾಕ್ಷಿ’ ಸಿನಿಮಾದಲ್ಲಿ ಅವರಿಗೆ ಮೊದಲ ಅವಕಾಶ ನೀಡಿದರು. ನಂತರ ಶಂಕರ್ ರಾವ್ ಅವರಿಗೆ ಸಾಲು ಅವಕಾಶಗಳು ಸಿಕ್ಕಿದವು.
‘ಪಾಪಪಾಂಡು’ ಧಾರಾವಾಹಿಯ ಬಾಲ್ ರಾಜ್, ‘ಧ್ರುವ’ ಹಾಗೂ ‘ಅಪ್ಪು’ ಚಿತ್ರಗಳ ಉಪನ್ಯಾಸಕ, ‘ಬಿಸಿಬಿಸಿ’ ಚಿತ್ರದಲ್ಲಿ ರಸಿಕ ಮನಸ್ಸಿನ ತಾತ... ಹೀಗೆ ಹಲವು ಪಾತ್ರಗಳು ಚಿತ್ರರಸಿಕರ ಮನಗೆದ್ದಿದ್ದವು.

ಮಧ್ಯಾಹ್ನ ಬನಶಂಕರಿ ಚಿತಾಗಾರದಲ್ಲಿ ಶಂಕರ್ ರಾವ್ ಅವರ ಅಂತ್ಯಕ್ರಿಯೆ ನಡೆದಿದೆಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT