ಬೆಂಗಳೂರು: ಮನೋರಂಜನಾ ವಾಹಿನಿ ಜೀ಼ ಕನ್ನಡ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದೆ. ವಿಭಿನ್ನ ಲೋಗೋ ಬಿಡುಗಡೆ ಮಾಡಿರುವ ವಾಹಿನಿಯು ಇದು ಜೀ಼ ಕನ್ನಡದ ಹೊಸ ಅಧ್ಯಾಯ! ಎಂದು ಹೇಳಿಕೊಂಡಿದೆ. ಇದಕ್ಕಾಗಿ ಕಿರುತೆರೆಯ ಕಲಾವಿದರೆಲ್ಲಾ ಸೇರಿಕೊಂಡು ಭಾವನಾತ್ಮಕ ಕಿರುಚಿತ್ರವನ್ನು ಕೂಡ ಮಾಡಿದ್ದಾರೆ.

ಜೀ಼ ಕನ್ನಡ ವಾಹಿನಿಯು ಕಳೆದ ತಿಂಗಳಲ್ಲಿ 45 ಮಿಲಿಯನ್ ವೀಕ್ಷಕರನ್ನು ತಲುಪಿದ್ದು, ಈಗ ‘ಸದಾ ನಿಮ್ಮೊಂದಿಗೆ’ಎಂಬ ಟ್ಯಾಗ್ ಲೈನ್ ಮೂಲಕ ಹೊಸತನದೊಂದಿಗೆ ನಿಮ್ಮ ಮುಂದೆ ಬರಲಿದೆ ಎಂದು ಹೇಳಿಕೊಂಡಿದೆ.

‘ಕೂಡಿ ಬಾಳಿದರೆ ಸ್ವರ್ಗ ಸುಖ’ಎಂಬ ಅಂಶವನ್ನು ಇಟ್ಟುಕೊಂಡು ಮಾಡಿರುವ ಈ ಅಭಿಯಾನವು ಎಲ್ಲರೂ ಜೊತೆಯಾಗಿ ಬೆಳೆಯೋಣ, ಜೊತೆಯಾಗಿ ಸಂಭ್ರಮಿಸೋಣ ಮತ್ತು ಜೊತೆಯಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಸುಂದರವಾಗಿ ತೋರಿಸಿಕೊಡುತ್ತದೆ ಎಂದು ಪ್ರೋಮೊದಲ್ಲಿದೆ.

ಜೀ಼ ಕನ್ನಡದ ‘ಬ್ರಾಂಡ್ ಫಿಲಂ’ನಲ್ಲಿ ಕನ್ನಡಿಗರ ವಿಶ್ವಾಸ, ಪ್ರೀತಿ, ಒಗ್ಗಟ್ಟು ಹಾಗು ಹಳೆಯ ಮತ್ತು ಶ್ರೇಷ್ಠವಾದ ಪರಂಪರೆಯನ್ನು ಬಿಂಬಿಸಲಾಗಿದ್ದು, ಮಂಡ್ಯದ ಕಣ್ಣುಕುಕ್ಕುವ ಪ್ರಕೃತಿ ಸೌಂದರ್ಯದ ನಡುವೆ ಸೆರೆಹಿಡಿಯಲಾದ ಈ ಕಿರುಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಮದುವೆಯ ದೃಶ್ಯಗಳು ಕಂಡುಬರುತ್ತವೆ. ಇಲ್ಲಿ ಕಾಣಿಸುವ ಪುರಾತನ ದೇವಸ್ಥಾನ , ರಂಗುರಂಗಾದ ರಂಗೋಲಿ, ಚಪ್ಪರ, ಅರಶಿನ ಶಾಸ್ತ್ರ ಸೇರಿ ಬಗೆ ಬಗೆಯ ಸಾಂಸ್ಕೃತಿಕ ಅಂಶಗಳು ಸೇರಿದ ಸುಂದರ ದೃಶ್ಯಕಾವ್ಯದಂತೆ ಮೂಡಿಬಂದಿದೆ.

‘ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’ಅಭಿಯಾನವು ನಾವು ನಮ್ಮ ವೀಕ್ಷಕರ ಜೊತೆಗೆ ಹೊಂದಿರುವ ಭಾವನೆಗಳ ಸಂಭ್ರಮಾಚರಣೆಯಾಗಿದೆ. ಜೀ಼ ಕನ್ನಡದ ಬ್ರಾಂಡ್ ಫಿಲಂ ಕರ್ನಾಟಕದ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುತ್ತದೆ. ಇದು ಬರೀ ರಿಬ್ರ್ಯಾಂಡಿಂಗ್ ಆಗಿರದೆ ವೀಕ್ಷಕರ ಜೊತೆಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಮಾಡಲಿದೆ" ಎಂದು ಜೀ಼ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಹೇಳಿದರು.

23ನೇ ಜೀ ಸಿನಿ ಅವಾರ್ಡ್ಸ್–2025ರ ಪ್ರಸಾರದ ಸಂದರ್ಭದಲ್ಲಿ ಈ ಅಭಿಯಾನವನ್ನು ಅನಾವರಣಗೊಳಿಸಲಾಯಿತು. ಎಲ್ಲಾ ಏಳು ಭಾಷೆಯಲ್ಲಿ ಈ ಅಭಿಯಾನವು ಏಕಕಾಲದಲ್ಲಿ ಶುರುವಾಗಿದೆ. ಒಂದೇ ಸಮಯದಲ್ಲಿ ಏಳು ವಿಭಿನ್ನ ಧ್ವನಿಗಳ ಮೂಲಕ ಒಂದೇ ಕಲ್ಪನೆಯನ್ನು ಅನುಭವಿಸುವ ವಿಭಿನ್ನ ಅವಕಾಶ ಪ್ರೇಕ್ಷಕರಿಗೆ ದೊರಕಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಧಾರಾವಾಹಿಗಳು, ನಾನ್ ಫಿಕ್ಷನ್ ಷೋಗಳಲ್ಲಿ ಅಭಿಯಾನದ ಮುಖ್ಯ ಧ್ಯೇಯವನ್ನು ಕಥೆ, ನಾಟಕಗಳ ಮೂಲಕ ವೀಕ್ಷಕರಿಗೆ ಇನ್ನಷ್ಟು ತಲುಪಿಸುವ ಪ್ರಯತ್ನ ಮಾಡಲಾಗುತ್ತದೆ.‘ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’ ಅಭಿಯಾನವು ಬರೀ ಕಂಟೆಂಟ್ ನೀಡುವ ಉದ್ದೇಶದಿಂದ ಕೂಡಿರದೇ ಒಗ್ಗಟ್ಟು, ಮೌಲ್ಯಗಳು, ಸಾಂಸ್ಕೃತಿಕ ಹಾಗೂ ಕನ್ನಡನಾಡಿನ ಪರಂಪರೆಯನ್ನು ಎತ್ತಿಹಿಡಿಯುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.