ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯ ಹೊರಗೂ ಮಾರಾಟ ಮಾಡಲು ಅವಕಾಶ ನೀಡುವ, ಕೃಷಿಯಲ್ಲಿ ಕಾರ್ಪೊರೇಟ್ ಕಂಪನಿಗಳ ಹೂಡಿಕೆಗೂ ಅವಕಾಶ ನೀಡುವ ನೂತನ ಕೃಷಿ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು 2020ರ ಜೂನ್ನಲ್ಲಿ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸಿತು. 2020ರ ಸೆಪ್ಟೆಂಬರ್ನಲ್ಲಿ ಈ ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಪಡೆದು, ರಾಷ್ಟ್ರಪತಿಗಳ ಅಂಕಿತವನ್ನೂ ಪಡೆಯಲಾಯಿತು. ಈ ಕಾಯ್ದೆಗಳು ಕೃಷಿಗೆ, ರೈತರಿಗೆ ಮಾರಕ ಮತ್ತು ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಕೆಲವೇ ದಿನಗಳಲ್ಲಿ ರೈತ ಸಮುದಾಯವೇ ಈ ಕಾಯ್ದೆಗಳ ವಿರುದ್ಧ ಹೋರಾಟ ಆರಂಭಿಸಿತು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಪದ್ಧತಿಗೆ ಸಂಬಂಧಿಸಿದಂತೆ ನೂತನ ಮೂರೂ ಕಾಯ್ದೆಗಳಲ್ಲಿ ಉಲ್ಲೇಖವಿಲ್ಲ. ಬೆಂಬಲ ಬೆಲೆ ಪದ್ಧತಿಯನ್ನು ಈ ಕಾಯ್ದೆಗಳು ರದ್ದುಪಡಿಸುತ್ತವೆ ಎಂಬುದು ರೈತರ ಆಕ್ಷೇಪವಾಗಿತ್ತು. ಆದರೆ ಬೆಂಬಲ ಬೆಲೆ ಪದ್ಧತಿ ತೆಗೆಯುವುದಿಲ್ಲ ಎಂಬುದು ಸರ್ಕಾರದ ಸಮರ್ಥನೆಯಾಗಿತ್ತು. ಬೆಂಬಲ ಬೆಲೆ ಪದ್ಧತಿ ರದ್ದುಪಡಿಸುವುದಿಲ್ಲ ಎಂಬುದು ಕೇವಲ ಮೌಖಿಕ ಭರವಸೆಯಾಗಿದ್ದ ಕಾರಣ, ರೈತರು ಈ ಕಾಯ್ದೆಗಳ ವಿರುದ್ಧ ಬೀದಿಗಿಳಿದರು. 2020ರ ನವೆಂಬರ್ 25ರಂದು ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.

ಈ ಮೆರವಣಿಗೆಯನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿತು. ಪಂಜಾಬ್ನ ರೈತರು ಬಿಜೆಪಿ ಆಡಳಿತವಿರುವ ಹರಿಯಾಣ ಪ್ರವೇಶಿಸದಂತೆ ತಡೆ ಒಡ್ಡಲಾಯಿತು.
ಆದರೆ ಪೊಲೀಸರನ್ನು ಬದಿಗೊತ್ತಿ, ಅವರ ತಡೆಗೋಡೆಗಳನ್ನು ಮುರಿದು ರೈತರು ಮೆರವಣಿಗೆ ಮುಂದುವರಿಸಿದರು. ಕೊನೆಗೆ ರೈತರು ದೆಹಲಿ ಪ್ರವೇಶಿಸದಂತೆ ದೆಹಲಿ ಗಡಿಯನ್ನು, ದೆಹಲಿ ಪೊಲೀಸರು ಬಂದ್ ಮಾಡಿದರು. ಹೆದ್ದಾರಿಗಳಿಗೆ ಅಡ್ಡಲಾಗಿ ಪೊಲೀಸರು ಕಂದಕ ತೋಡಿದರು, ಮುಳ್ಳುಬೇಲಿ ಹಾಕಿದರು, ಕಾಂಕ್ರೀಟ್ ಗೋಡೆ ನಿರ್ಮಿಸಿದರು, ಮೊಳೆಯ ಬೇಲಿ ನೆಟ್ಟರು. ಆದರೆ ದೆಹಲಿ ಗಡಿಯಲ್ಲಿ ಬೀಡುಬಿಟ್ಟ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ಹುರಿಗೊಳಿಸಿದರು. ಕಿಸಾನ್ ಸಂಯುಕ್ತ ಮೋರ್ಚಾ ಹೆಸರಿನಲ್ಲಿ ನಡೆದ ಈ ಹೋರಾಟದಲ್ಲಿ ಹಲವು ರೈತ ಸಂಘಟನೆಗಳು ಭಾಗಿಯಾದವು.

ರೈತರ ಜತೆ ಸರ್ಕಾರವು ಹಲವು ಸುತ್ತಿನ ಮಾತುಕತೆ ನಡೆಸಿದರೂ ಅವೆಲ್ಲವೂ ವಿಫಲವಾದವು. ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ತಮ್ಮ ಪಟ್ಟನ್ನು ರೈತರು ಸಡಿಲಗೊಳಿಸಲಿಲ್ಲ. ಸರ್ಕಾರವೂ ಕಾಯ್ದೆಗಳನ್ನು ರದ್ದುಪಡಿಸಲಿಲ್ಲ. ಹೀಗಾಗಿ ಈವರೆಗೆ ನಡೆದ ಎಲ್ಲಾ ಮಾತುಕತೆಗಳು ವಿಫಲವಾಗಿವೆ. ಇದೇ ಗಣರಾಜ್ಯೋತ್ಸವದ ದಿನ ರೈತರು ದೆಹಲಿಗೆ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದರು. ಆ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆಯಿತು. ಹಲವರಿಗೆ ಗಾಯಗಳಾದವು. ಕೆಂಪುಕೋಟೆಯ ಮೇಲೆ ರೈತರು ಪ್ರತಿಭಟನಾ ಧ್ವಜಾರೋಹಣ ನಡೆಸಿದರು. ಇದು ರೈತರ ಹೋರಾಟಕ್ಕೆ ದೊಡ್ಡ ಹಿನ್ನಡೆಯಾದಂತಾಯಿತು.

ಆದರೆ ಉತ್ತರ ಪ್ರದೇಶದ ರಾಕೇಶ್ ಟಿಕಾಯತ್ ಅವರು ಮತ್ತೆ ರೈತ ಹೋರಾಟಕ್ಕೆ ಕರೆ ನೀಡಿದರು. ಅವರು ಇಟ್ಟ ಕಣ್ಣೀರಿಗೆ ಸೋತ ರೈತವರ್ಗ ಮತ್ತೆ ಹೋರಾಟಕ್ಕೆ ಧುಮುಕಿತು. ಪಂಜಾಬ್ ಮತ್ತು ಹರಿಯಾಣ ರೈತರಷ್ಟೇ ನಡೆಸುತ್ತಿದ್ದ ಈ
ಹೋರಾಟವು ರಾಜಸ್ಥಾನ, ಹಿಮಾಚಲ ಪ್ರದೇಶಮತ್ತು ಉತ್ತರ ಪ್ರದೇಶಕ್ಕೂ ಹರಡಿತು. ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ರೈತರು ಪಾಳಿಯ ಪ್ರಕಾರ ಭಾಗಿಯಾದರು. ಆ ಮೂಲಕ ಪ್ರತಿಭಟನೆಮತ್ತು ಕೃಷಿ ಚಟುವಟಿಕೆ ಎರಡನ್ನೂ ನಡೆಸಿದರು. ಈಗಲೂ ಪ್ರತಿಭಟನೆ ಇದೇ ಸ್ವರೂಪದಲ್ಲಿ ನಡೆಯುತ್ತಿದೆ. ಈ ಹೋರಾಟಕ್ಕೆ ಸೋಮವಾರಕ್ಕೆ10 ತಿಂಗಳು ತುಂಬಿದೆ.

ಕಾಯ್ದೆ ರದ್ದತಿಯೊಂದೇ ಧ್ಯೇಯ

ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾನೂನುಗಳ ಉದ್ದೇಶ ಕೃಷಿಯ ಖಾಸಗೀಕರಣವೇ ಹೊರತು ಬೇರೇನೂ ಅಲ್ಲ ಎಂಬುದು ಸಂಯುಕ್ತ ಕಿಸಾನ್ ಮೋರ್ಚಾ ವಾದ. ಈ ಕಾನೂನುಗಳ ಮೂಲಕ ಸಣ್ಣ ಹಾಗೂ ಮಧ್ಯಮ ರೈತರನ್ನು ನಾಮಾವಶೇಷ ಮಾಡುವುದು, ಅವರ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳ ಪಾಲು ಮಾಡುವುದು ಇದರ ಹಿಂದಿನ ಹುನ್ನಾರ ಎಂಬುದು ಅವರ ಆರೋಪ.

ಹೀಗಾಗಿ, ರೈತ ಹಿತವೊಂದೇ ಆದ್ಯತೆಯಾಗಿರಬೇಕು ಎಂದು ನಿರ್ಧರಿಸಿರುವ ರೈತ ಸಂಘಟನೆಗಳು, ಯಾವ ರಾಜಕೀಯ ಪಕ್ಷವೂ ತನ್ನ ಹೋರಾಟವನ್ನು ಹೈಜಾಕ್ ಮಾಡದಂತೆ ಎಚ್ಚರಿಕೆ ವಹಿಸಿದೆ. ಹೋರಾಟವನ್ನು ಬೆಂಬಲಿಸುವ ರಾಜಕೀಯ ಪಕ್ಷಗಳ ನಡೆಯನ್ನು ಸ್ವಾಗತಿಸಿದರೂ ಎಲ್ಲ ರಾಜಕೀಯ ಪಕ್ಷಗಳಿಂದ ಅಂತರವನ್ನೂ ಕಾಯ್ದುಕೊಂಡಿದೆ. ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ‘ಕಿಸಾನ್ ಸಂಸತ್’ ವೇದಿಕೆ ಕೂಡ ರೈತರಿಗಷ್ಟೇ ಮೀಸಲಾಗಿತ್ತು. ರೈತರ ಹೋರಾಟ ಬೆಂಬಲಿಸಿ ಜಾಥಾ ಬಂದಿದ್ದ ವಿರೋಧ ಪಕ್ಷಗಳ ಮುಖಂಡರೆಲ್ಲರೂ ಅಲ್ಲಿ ಕೇಳುಗರಷ್ಟೇ ಆಗಿದ್ದರು.

ರಾಜಕೀಯ ಪಕ್ಷಗಳ ಸಹವಾಸವು ತನ್ನ ಹೋರಾಟಕ್ಕೆ ತೊಡಕಾಗಬಹುದು ಎಂದು ತನ್ನದೇ ಆದ ಪಂಚಾಯತ್ಗಳನ್ನು ಸಮಾವೇಶ ಮಾಡಿ, ಹೋರಾಟ ಸಂಘಟಿಸುತ್ತಿದೆ.

‘ಕೇಂದ್ರ ಸರ್ಕಾರವು ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದು ಬಾಯಿಮಾತಿಗೆ ಮಾತ್ರ ಹೇಳುತ್ತಿದೆ. ಎಲ್ಲಿ? ಯಾವಾಗ ಎಂಬುದನ್ನೂ ಹೇಳಬೇಕಲ್ಲವೇ?’ ಎಂದು ಕೇಳುತ್ತಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ‘ರೈತರಿಗೆ ಯಾವುದೇ ಷರತ್ತು ಹಾಕದೇ ಚರ್ಚೆಗೆ ಕರೆಯಲಿ; ಬೇಕಿದ್ದರೆ ಅದಕ್ಕೆ ಹತ್ತು ವರ್ಷವಾದರೂ ಹಿಡಿಯಲಿ. ಅಲ್ಲಿಯವರೆಗೆ ನಾವು ಇಲ್ಲಿಂದ ಕದಲುವುದಿಲ್ಲ’ ಎನ್ನುತ್ತಿದ್ದಾರೆ.

ಹೀಗಾಗಿ, ಈ ಕಾಯ್ದೆಗಳನ್ನು ಹಿಂಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ; ಮುಂದೆ ಯಾವುದೇ ಪಕ್ಷದ ಸರ್ಕಾರ ಬಂದರೂ ಈಗ ತಂದಿರುವ ಕಾಯ್ದೆಗಳನ್ನು ರದ್ದು ಮಾಡಬೇಕು ಎಂಬುದು ಅವರ ಆಗ್ರಹ.

ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಮುಂದಿನ ವರ್ಷ ವಿಧಾನಸಭೆ ನಡೆಯಲಿರುವ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಸಜ್ಜಾಗಿದೆ.

ರೈತ ಹೋರಾಟವು ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಮನಗಂಡೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು, ರೈತರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯುವುದಾಗಿ ಹೇಳಿದೆ.

ಅಲ್ಲದೇ ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಗುರ್ಜರ್ ಹಾಗೂ ಜಾಟ್ ಸಮುದಾಯದವರ ಓಲೈಕೆಗಾಗಿ ನಾನಾ ಕಸರತ್ತು ನಡೆಸಿದೆ. ಜಾಟ್ ಸಮುದಾಯದ ದೊರೆ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಹೆಸರಿನಲ್ಲಿ ವಿಶ್ವವಿದ್ಯಾಲಯಕ್ಕೆ ಇತ್ತೀಚೆಗಷ್ಟೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಗುರ್ಜರ್ ದೊರೆ ಎನ್ನಲಾದ ಮಿಹಿರ್ ಭೋಜನ ಪ್ರತಿಮೆಯನ್ನೂ ಅನಾವರಣ ಮಾಡಿದೆ. ಆದರೆ, ಪ್ರತಿಮೆಯಲ್ಲಿ ‘ಗುರ್ಜರ್ ದೊರೆ’ ಎನ್ನುವುದನ್ನು ಉದ್ದೇಶಪೂರ್ವಕವಾಗಿಯೇ ಅಳಿಸಿಹಾಕಲಾಗಿದೆ ಎಂಬುದು, ಯೋಗಿ ಸರ್ಕಾರದ ವಿರುದ್ಧ ಗುರ್ಜರ್ ಸಮುದಾಯದ ಅತೃಪ್ತಿಗೂ ಮತ್ತೊಂದು ಕಿಡಿಗೂ ಕಾರಣವಾಗಿದೆ.

ಕಾಂಗ್ರೆಸ್, ವೈಎಸ್ಆರ್ ಕಾಂಗ್ರೆಸ್, ಬಿಎಸ್ಪಿ, ಆಮ್ಆದ್ಮಿ ಪಕ್ಷ, ತೆಲುಗುದೇಶಂ, ಅಕಾಲಿದಳ, ಆರ್ಜೆಡಿ, ಸಿಪಿಎಂ, ಸಿಪಿಐ ಸೇರಿದಂತೆ ಎಡಪಕ್ಷಗಳು ರೈತ ಹೋರಾಟಕ್ಕೆ ಬೆಂಬಲ ನೀಡಿವೆ.

ಗಟ್ಟಿಗೊಂಡ ನೆಲೆ

ಪ್ರತಿಭಟನೆ ಶುರುವಾಗಿ 10 ತಿಂಗಳು ಕಳೆದ ಬಳಿಕವೂ ಬಿಸಿ ಮಾತ್ರ ಹಾಗೆಯೇ ಇದೆ. ರೈತರು ದೇಶದಾದ್ಯಂತ ಹೊಂದಿರುವ ಸುಭದ್ರ ನೆಲೆ ಇದಕ್ಕೆ ಕಾರಣ.ಪಂಜಾಬ್ನಲ್ಲಿ ಶುರುವಾದ ಈ ಹೋರಾಟ ಈಗ ಗಟ್ಟಿಯಾದ ವಿಸ್ತೃತ ನೆಲೆ ಗಳಿಸಿಕೊಂಡಿದೆ. ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲದೇ, ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ರೈತರನ್ನು ಒಗ್ಗಟ್ಟಾಗಿಸಿದೆ. ಇಡೀ ದೇಶದ ರೈತರು ಈ ಪ್ರತಿಭಟನೆಗೆ ಬೆಂಬಲವಾಗಿ ನಿಂತಿದ್ದಾರೆ.

ಕಾಂಗ್ರೆಸ್, ಅಕಾಲಿದಳ, ಎಎಪಿ ಮೊದಲಾದ ಪಕ್ಷಗಳು ಮೊದಲ ದಿನದಿಂದಲೇ ರೈತರ ಬೆನ್ನಿಗಿವೆ. ಪಂಜಾಬ್,
ಕೇರಳ ಸೇರಿದಂತೆ ಕೆಲವು ರಾಜ್ಯಗಳು ವಿಧಾನಸಭೆಗಳಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸುವ ನಿರ್ಣಯ ಕೈಗೊಂಡು ರೈತರ ಕೈ ಬಲಪಡಿಸಿವೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಗಾಯಕಿ ರಿಹಾನಾ, ಪರಿಸರ ಕಾರ್ಯಕರ್ತೆ ಗ್ರೆಟಾ ಥುನ್ಬರ್ಗ್ ಅವರಂತಹ ಅಂತರರಾಷ್ಟ್ರೀಯ ಪ್ರಸಿದ್ಧ ವ್ಯಕ್ತಿಗಳು ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದರಿಂದ ಹೋರಾಟಕ್ಕೆ ಜಾಗತಿಕ ಮನ್ನಣೆಯೂ ಸಿಕ್ಕಿತು.

ದೆಹಲಿಯ ಸಿಂಘು, ಗಾಜಿಪುರ ಹಾಗೂ ಟಿಕ್ರಿ ಗಡಿಯಲ್ಲಿ ಟೆಂಟ್ ಹಾಕಿರುವ ನೂರಾರು ರೈತರಿಗೆ ಊಟ, ವಸತಿಯಂತಹ ಮೂಲ ಸೌಲಭ್ಯಗಳನ್ನು ಸಾವಿರಾರು ಸಂಘಟನೆಗಳು, ರಾಜಕೀಯ ಪಕ್ಷಗಳು, ವೈದ್ಯರು, ಸ್ವಯಂಸೇವಕರು ಒದಗಿಸುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆವರೆಗೂ ಧರಣಿ ಕೈಬಿಡುವುದಿಲ್ಲ ಎಂದು ರೈತ ನಾಯಕರು ಈಗಾಗಲೇ ಘೋಷಿಸಿದ್ದು, ಮುಂದಿನ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

ಬಿಜೆಪಿಯ ಟೀಕಾಪ್ರಹಾರ

ರೈತ ಹೋರಾಟಗಾರರು ಹಾಗೂ ಹೋರಾಟ ಆಯೋಜಿಸಿದ ಸಂಘಟನೆಗಳನ್ನು ಬಿಜೆಪಿಯು ಪ್ರತಿಭಟನೆಯ ಆರಂಭದ ದಿನದಿಂದಲೂ ವಿರೋಧಿಸುತ್ತಿದೆ. ಹೋರಾಟಗಾರರು ರೈತರೇ ಅಲ್ಲ ಎಂದು ಪ್ರತಿಪಾದಿಸಿದ ಬಿಜೆಪಿ, ಇದೊಂದು ‘ಪ್ರಾಯೋಜಿತ’ ಹೋರಾಟ ಎಂದು ಟೀಕಿಸುತ್ತಾ ಬಂದಿತು. ರೈತ ಹೋರಾಟವು ‘ಖಲಿಸ್ತಾನ’ದಿಂದ ಪ್ರೇರಣೆ ಪಡೆದಿದೆ ಎಂಬ ಆರೋಪವನ್ನೂ ಹೊರಿಸಲಾಯಿತು. ರೈತ ನಾಯಕ ರಾಕೇಶ್ ಟಿಕಾಯತ್ ಅವರನ್ನು ಬಿಜೆಪಿ ಸಂಸದಅಕ್ಷಯ್ ಲಾಲ್ ಗೊಂಡ್ ಅವರು ‘ಡಕಾಯಿತ’ ಎಂದು ಮೂದಲಿಸಿದ್ದಾರೆ.

ಬಿಜೆಪಿ ಸಂಸದ ವಿವೇಕ್ ನಾರಾಯಣ ಶೆಜ್ವಾಲ್ಕರ್ ಅವರು ರೈತರ ಹೋರಾಟವು ಸುಳ್ಳುಗಳು ಮತ್ತು ತಪ್ಪುಮಾಹಿತಿಗಳಿಂದ ಕೂಡಿದೆ ಎಂದಿದ್ದರು. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಪ್ರತಿಭಟನೆ ನಡೆಸುತ್ತಿರುವವರು ಮಧ್ಯವರ್ತಿಗಳೇ ವಿನಾ ನಿಜವಾದ ರೈತರಲ್ಲ ಎಂದು ಹೇಳಿದ್ದರು. ಕೋವಿಡ್ ಎರಡನೇ ಅಲೆಯ ವೇಳೆ ಆಮ್ಲಜನಕ ಟ್ಯಾಂಕರ್ ಸಾಗಣೆ ವಿಳಂಬವಾಗಲು ರೈತರ ಪ್ರತಿಭಟನೆ ಕಾರಣ ಎಂದು ಬಿಜೆಪಿ ಆರೋಪ ಹೊರಿಸಿತ್ತು.

ಕಾಯ್ದೆ ಜಾರಿಗೆ ಪಟ್ಟು ಹಿಡಿದಿರುವ ಬಿಜೆಪಿ ವಿರುದ್ಧ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಪ್ರಚಾರ ನಡೆಸಲು ರೈತ ಸಂಘಟನೆ ತೀರ್ಮಾನಿಸಿರುವುದು ಬಿಜೆಪಿಯನ್ನು ಸಿಟ್ಟಿಗೇಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.