ಅಭಿವೃದ್ಧಿಯತ್ತ ದೃಷ್ಟಿ ನೆಟ್ಟಿರುವ ಜಗತ್ತು ಇಂಧನವನ್ನು ಗಣನೀಯ ಪ್ರಮಾಣದಲ್ಲಿ ಬಳಸುತ್ತಿದೆ. ವರ್ಷದಿಂದ ವರ್ಷಕ್ಕೆ ಇಂಧನಕ್ಕೆ, ಪ್ರಮುಖವಾಗಿ ವಿದ್ಯುತ್ಗೆ ಬೇಡಿಕೆ ಹೆಚ್ಚಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆ ನಿಯಂತ್ರಣಕ್ಕಾಗಿ ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳ ಬದಲಾಗಿ, ನವೀಕರಿಸಬಹುದಾದ ಇಂಧನ ಮೂಲಗಳ ಬಗ್ಗೆ ಜಗತ್ತಿನ ರಾಷ್ಟ್ರಗಳು ಒತ್ತು ನೀಡುತ್ತಿದ್ದರೂ ಪೂರ್ಣ ಪ್ರಮಾಣದ ಇಂಧನ ಬೇಡಿಕೆಯನ್ನು ಪೂರೈಸಲು ಈ ಮೂಲಗಳಿಗೆ ಸಾಧ್ಯವಾಗುತ್ತಿಲ್ಲ. ಬೇಡಿಕೆ ಸವಾಲನ್ನು ಎದುರಿಸಲು ಹಲವು ರಾಷ್ಟ್ರಗಳು ಕಲ್ಲಿದ್ದಲಿನ ಬಳಕೆ ಹೆಚ್ಚಿಸಿವೆ. ಅದರ ಬಳಕೆ ಪ್ರಮಾಣ ಶೇ 1ರಷ್ಟು ಜಾಸ್ತಿಯಾಗಿದೆ. ಯುರೋಪಿನ ಕೆಲವು ರಾಷ್ಟ್ರಗಳು ಕಲ್ಲಿದ್ದಲು ಘಟಕಗಳನ್ನು ಮತ್ತೆ ತೆರೆದಿವೆ. ಚೀನಾ ಮತ್ತು ಭಾರತ ಕೂಡ ವಿದ್ಯುತ್ಗಾಗಿ ಕಲ್ಲಿದ್ದಲನ್ನು ಭಾರಿ ಪ್ರಮಾಣದಲ್ಲಿ ಸುಡುತ್ತಿವೆ

ಆರ್ಥಿಕತೆ, ತಂತ್ರಜ್ಞಾನ, ಕೈಗಾರಿಕೆ, ಮೂಲಸೌಕರ್ಯ ಮೊದಲಾದ ಕ್ಷೇತ್ರಗಳಲ್ಲಿ ಅತ್ಯಂತ ವೇಗವಾಗಿ ದಾಪುಗಾಲಿಡುತ್ತಿರುವ ಜಗತ್ತಿನ ಬಹುತೇಕ ದೇಶಗಳ ಬೆಳವಣಿಗೆಗೆ ಇಂಧನ (ಎನರ್ಜಿ) ಸಾಕಾಗುತ್ತಿಲ್ಲ. ಅಭಿವೃದ್ಧಿಯ ವೇಗಕ್ಕೆ ಬಲ ನೀಡಬಲ್ಲ ವಿವಿಧ ಇಂಧನ ಮೂಲಗಳಿಗೆ ಬೇಡಿಕೆ ಹಿಂದೆಂದಿಗಿಂತಲೂ ಅಧಿಕವಾಗುತ್ತಿದೆ. 2024ರಲ್ಲಿ ಜಾಗತಿಕವಾಗಿ ಇಂಧನ ಉತ್ಪಾದನೆಗೆ ಶೇ 2.2ರಷ್ಟು ಬೇಡಿಕೆ ಹೆಚ್ಚಳವಾಗಿದೆ ಎಂದು ಅಂತರರಾಷ್ಟ್ರೀಯ ಇಂಧನ ಏಜೆನ್ಸಿ ತನ್ನ 2025ರ ವರದಿಯಲ್ಲಿ ಹೇಳಿದೆ. ಅದರ ಪ್ರಕಾರ, ಇಂಧನ ಬೇಡಿಕೆ 648 ಎಕ್ಸಾಜೂಲ್ಗಳಿಗೆ (EJ) ಏರಿಕೆಯಾಗಿದೆ. ಪಳೆಯುಳಿಕೆ ಇಂಧನ ಮೂಲಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ನವೀಕರಿಸಬಹುದಾದ ಸೌರ, ಪವನಶಕ್ತಿ ಇಂಧನ ಮೂಲಗಳಿಗೆ ಗಣನೀಯ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗಿದೆ.

ಕೈಗಾರಿಕಾ ಬಳಕೆಯ ಪ್ರಮಾಣ ಹೆಚ್ಚಳ, ಅಧಿಕ ಉಷ್ಣಾಂಶ ಹಾಗೂ ಬಿಸಿಗಾಳಿ, ತಂಪಾಗಿಸುವ ಪ್ರಕ್ರಿಯೆ (ಕೂಲಿಂಗ್), ಬ್ಯಾಟರಿಚಾಲಿತ ವಾಹನಗಳ ಸಂಖ್ಯೆ ಹೆಚ್ಚಳ, ದತ್ತಾಂಶ ಕೇಂದ್ರಗಳು ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಗಳು ವಿದ್ಯುತ್ತಿನ ಬೇಡಿಕೆಯನ್ನು ಶೇ 4.3ರಷ್ಟು ಹೆಚ್ಚಿಸಿವೆ.

ಅಧಿಕ ಇಂಧನ ಬೇಡಿಕೆಯಲ್ಲಿ ಚೀನಾ ಹಾಗೂ ಭಾರತ ಮೊದಲೆರಡು ಸ್ಥಾನಗಳಲ್ಲಿವೆ. ಎರಡೂ ರಾಷ್ಟ್ರಗಳಲ್ಲಿ ಇಂಧನದ ಬೇಡಿಕೆ ಕ್ರಮವಾಗಿ ಶೇ 2.9 ಮತ್ತು 4.9ರಷ್ಟು ಹೆಚ್ಚಾಗಿದೆ. ಅಮೆರಿಕ ಮೂರನೇ ಸ್ಥಾನದಲ್ಲಿದೆ. ಗಮನಾರ್ಹ ವಿಚಾರವೆಂದರೆ, ಹಲವು ವರ್ಷಗಳಿಂದ ಇಂಧನ ಬೇಡಿಕೆಯಲ್ಲಿ ಇಳಿಮುಖ ಪ್ರವೃತ್ತಿ ದಾಖಲಿಸಿದ್ದ ಅಭಿವೃದ್ಧಿ ಹೊಂದಿದ ದೇಶಗಳು ಮತ್ತೆ ಬೇಡಿಕೆಯ ಹಾದಿಗೆ ಮರಳಿವೆ. ಈ ದೇಶಗಳಲ್ಲಿ ಇಂಧನ ಬೇಡಿಕೆ ಪ್ರಮಾಣ 2024ರಲ್ಲಿ ಶೇ 1ರಷ್ಟು ಜಾಸ್ತಿಯಾಗಿದೆ.

ಪಳೆಯುಳಿಕೆ ಇಂಧನಗಳ ಪೈಕಿ ‘ನೈಸರ್ಗಿಕ ಅನಿಲ’ಗಳಿಗೆ ಉಂಟಾಗಿರುವ ಬೇಡಿಕೆಯು ಹೊಸ ದಾಖಲೆ ಬರೆದಿದ್ದು, ಶೇ 2.7ರಷ್ಟು (11,500 ಕೋಟಿ ಘನ ಮೀಟರ್) ದಾಖಲೆಯ ಹೆಚ್ಚಳ ಕಂಡುಬಂದಿದೆ. ಕೈಗಾರಿಕಾ ಕ್ಷೇತ್ರದ ಬಳಕೆಯ ಕಾರಣಕ್ಕೆ ಅಮೆರಿಕ, ಐರೋಪ್ಯ ಒಕ್ಕೂಟದ ದೇಶಗಳಲ್ಲಿ ನೈಸರ್ಗಿಕ ಅನಿಲಗಳಿಗೆ ಗಮನಾರ್ಹ ಬೇಡಿಕೆ ಸೃಷ್ಟಿಯಾಗಿದೆ. ಆದರೆ ತೈಲದ ಬೇಡಿಕೆ ತುಸು ಇಳಿದಿದೆ.

ಪ್ರಮುಖ ಹಾಗೂ ಹಳೆಯ ಇಂಧನ ಮೂಲವಾಗಿರುವ ಕಲ್ಲಿದ್ದಲು ಬೇಡಿಕೆ ಶೇ 1ರಷ್ಟು ಹೆಚ್ಚಾಗಿದ್ದು, ವಿದ್ಯುತ್ ಉತ್ಪಾದನೆಗೆ ಬಹುತೇಕ ಇದು ಬಳಕೆಯಾಗುತ್ತಿದೆ. ತಾಪಮಾನ ಏರಿಕೆ ಹಾಗೂ ಬಿಸಿಗಾಳಿ ವಿದ್ಯಮಾನಗಳಿಂದ ತಂಪಾಗಿಸುವ ಉಪಕರಣಗಳಿಗೆ ವಿದ್ಯುತ್ನ ಅಗತ್ಯ ಅಧಿಕವಾಗುತ್ತಿದೆ. ಮುಖ್ಯವಾಗಿ ಚೀನಾ ಹಾಗೂ ಭಾರತದಲ್ಲಿ ಈ ಕಾರಣಗಳಿಂದ ಕಲ್ಲಿದ್ದಲು ಬಳಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಚೀನಾ ಹಾಗೂ ಭಾರತ 6.5 ಕೋಟಿ ಟನ್ಗಳಷ್ಟು ಕಲ್ಲಿದ್ದಲನ್ನು ಪ್ರತಿ ವರ್ಷ ಸುಡುತ್ತಿವೆ. ಚೀನಾವೊಂದೇ ಜಾಗತಿಕವಾಗಿ ಶೇ 58ರಷ್ಟು ಕಲ್ಲಿದ್ದಲನ್ನು ವಿದ್ಯುತ್ ಉತ್ಪಾದನೆ ಉದ್ದೇಶಕ್ಕೆ ಉರುವಲಾಗಿ ಬಳಸುತ್ತಿದೆ.

ಮತ್ತೆ ಕಲ್ಲಿದ್ದಲಿಗೆ ಮೊರೆ: ಜಾಗತಿಕ ತಾಪಮಾನ ನಿಯಂತ್ರಣದ ಭಾಗವಾಗಿ ಕಲ್ಲಿದ್ದಲು ಆಧರಿತ ಇಂಧನ ಉತ್ಪಾದನೆಯನ್ನು ನಿಧಾನವಾಗಿ ಸ್ಥಗಿತಗೊಳಿಸಲು ಮುಂದಾಗುತ್ತಿದ್ದ ಐರೋಪ್ಯ ದೇಶಗಳು (ಜರ್ಮನಿ, ರೊಮಾನಿಯಾ, ಆಸ್ಟ್ರಿಯಾ, ದಿ ನೆದರ್ಲೆಂಡ್ಸ್ ಹಾಗೂ ಇತರೆ) ತಾತ್ಕಾಲಿಕವಾಗಿ ಕಲ್ಲಿದ್ದಲು ಘಟಕಗಳನ್ನು ಮತ್ತೆ ತೆರೆಯುತ್ತಿವೆ. ಇದಕ್ಕೆ ಬಲವಾದ ಕಾರಣವೂ ಇದೆ. ಉಕ್ರೇನ್ ಜೊತೆಗಿನ ಯುದ್ಧದಿಂದಾಗಿ ಯುರೋಪ್ಗೆ ರಷ್ಯಾ ಪೂರೈಸುತ್ತಿದ್ದ ನೈಸರ್ಗಿಕ ಅನಿಲ ಸ್ಥಗಿತಗೊಂಡಿದ್ದರಿಂದ ಅಲ್ಲಿನ ದೇಶಗಳಲ್ಲಿ ಇಂಧನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಲ್ಲಿದ್ದಲಿಗೆ ಮತ್ತೆ ಮೊರೆ ಹೋಗುವಂತೆ ಮಾಡಿದೆ. ಆದಾಗ್ಯೂ, ಬ್ರಿಟನ್ ಸೇರಿದಂತೆ ಹಲವು ಐರೋಪ್ಯ ದೇಶಗಳು ಕಲ್ಲಿದ್ದಲು ಬಳಕೆ ನಿಯಂತ್ರಣಕ್ಕೆ ತಮ್ಮ ಬದ್ಧತೆಯನ್ನು ಮುಂದುವರಿಸಿವೆ.

ಮರುಬಳಕೆ ಇಂಧನಗಳದ್ದೂ ವೇಗದ ಓಟ:

ಜಾಗತಿಕ ವಿದ್ಯುತ್ ಬೇಡಿಕೆಯ ಪೈಕಿ ಕಳೆದ ವರ್ಷ ನವೀಕರಿಸಬಾಹುದಾದ ಇಂಧನ ಮೂಲಗಳಾದ ಸೌರ, ಪವನ, ಬಯೋ ಎನರ್ಜಿಗಳು ಶೇ 38ರಷ್ಟು ಕೊಡುಗೆ ನೀಡಿರುವುದು ಹೊಸ ದಾಖಲೆ ಎನಿಸಿದೆ. ಸತತ 22ನೇ ವರ್ಷವೂ ಈ ವಲಯ ಏರಿಕೆಯ ಪಥದಲ್ಲಿದೆ. ಕಳೆದ ವರ್ಷವೊಂದರಲ್ಲೇ 700 ಗಿಗಾವಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಘಟಕಗಳು ಉತ್ಪಾದನಾ ಘಟಕಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿವೆ. ವಿದ್ಯುತ್ ಉತ್ಪಾದನೆಯಲ್ಲಿ ಸೌರ ವಿದ್ಯುತ್ ಘಟಕಗಳು ಶೇ 80ರಷ್ಟು ಬೆಳವಣಿಗೆ ದರವನ್ನು ದಾಖಲಿಸಿವೆ. ಸೌರ ಮತ್ತು ಪವನ ವಿದ್ಯುತ್ ಘಟಕಗಳಿಂದ 670 ಟೆರಾವಾಟ್ ಗಂಟೆಗಳಷ್ಟು ವಿದ್ಯುತ್ ಲಭ್ಯವಾಗಿದೆ.

ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲ ಘಟಕಗಳಿಂದ ಉತ್ಪಾದನೆಯಾದ ವಿದ್ಯುತ್ನ ಪ್ರಮಾಣವನ್ನು ಸೌರ ಮತ್ತು ಪವನ ಘಟಕಗಳಿಂದ ಉತ್ಪಾದನೆಯಾದ ವಿದ್ಯುತ್ ಮೊದಲ ಬಾರಿ ಹಿಂದಿಕ್ಕಿದೆ. ಅಮೆರಿಕದಲ್ಲಿ ಸೌರ ಮತ್ತು ಪವನ ವಿದ್ಯುತ್ನ ಪಾಲು ಶೇ 16ಕ್ಕೆ ಏರಿಕೆಯಾಗಿದ್ದು, ಕಲ್ಲಿದ್ದಲಿನ ಪ್ರಮಾಣವನ್ನು ಮೀರಿಸಿದೆ. ಚೀನಾದಲ್ಲಿ ಶೇ 20ರಷ್ಟು ಪಾಲು ನವೀಕರಿಸಬಹುದಾದ ಮೂಲಗಳದ್ದು.

ಮೂರು ಪಟ್ಟು ಹೆಚ್ಚಳ:

ಭಾರತದಲ್ಲಿ ಒಂದೇ ವರ್ಷದಲ್ಲಿ 30 ಗಿಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ನಿರ್ಮಾಣವಾಗಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸೌರ ವಿದ್ಯುತ್ ಉತ್ಪಾದನೆ ಮೂರು ಪಟ್ಟು ಹೆಚ್ಚಳವಾಗಿ ದಾಖಲೆ ನಿರ್ಮಿಸಿದೆ

ಸೌರ ವಿದ್ಯುತ್ ಮೈಲಿಗಲ್ಲು:

ಐರೋಪ್ಯ ಒಕ್ಕೂಟವು 2024ರಲ್ಲಿ, ಒಂದೇ ವರ್ಷದಲ್ಲಿ 60 ಗಿಗಾವಾಟ್ ಸಾಮರ್ಥ್ಯದ ಘಟಕಗಳನ್ನು ಹೊಸದಾಗಿ ಸೇರ್ಪಡೆ ಮಾಡಿದೆ. ಅದರ ಹಿಂದಿನ ವರ್ಷವೂ ಇಷ್ಟೇ ಸಾಮರ್ಥ್ಯದ ಘಟಕಗಳು ಸೇರ್ಪಡೆಯಾಗಿದ್ದವು. ಅಧಿಕ ವಿದ್ಯುತ್ ದರ, ಸೌರ ವಿದ್ಯುತ್ ಉತ್ಪಾದನಾ ಪ್ರೋತ್ಸಾಹಕ ಕ್ರಮಗಳಿಂದಾಗಿ, ಯುರೋಪ್ನಲ್ಲಿ ಹೊಸ ಘಟಕಗಳು ಇನ್ನಷ್ಟು ತೆರೆಯಲು ಕಾರಣವಾದವು.

ಚೀನಾವೊಂದೇ ತನ್ನ ಸೌರ ವಿದ್ಯುತ್ ಘಟಕಗಳ ಉತ್ಪಾದನಾ ಸಾಮರ್ಥ್ಯವನ್ನು ಒಟ್ಟು 340 ಗಿಗಾವಾಟ್ಗೆ ಹೆಚ್ಚಿಸಿದ್ದು, ಶೇ 30ರಷ್ಟು ಬೆಳವಣಿಗೆ ದಾಖಲಿಸಿದೆ. ಅಮೆರಿಕ, ಬ್ರೆಜಿಲ್, ಭಾರತದಲ್ಲೂ ಸೌರ ವಿದ್ಯುತ್ ಘಟಕಗಳ ಬೆಳವಣಿಗೆ ಗಮನಾರ್ಹವಾಗಿದೆ. ಅಮೆರಿಕದಲ್ಲಿ 50 ಗಿಗಾವಾಟ್, ಬ್ರೆಜಿಲ್ನಲ್ಲಿ 16.5 ಗಿಗಾವಾಟ್ ಸಾಮರ್ಥ್ಯದ ಘಟಕಗಳು ತಲೆಎತ್ತಿವೆ.

ಪರಮಾಣು ಇಂಧನ ಉತ್ಪಾದನಾ ಘಟಕಗಳು ಸಾಮರ್ಥ್ಯ 7 ಗಿಗಾವಾಟ್ನಷ್ಟು ಹೆಚ್ಚಳವಾಗಿದ್ದು, 2023ಕ್ಕೆ ಹೋಲಿಸಿದರೆ ಶೇ 33ರಷ್ಟು ಏರಿಕೆ ಕಂಡಿದೆ. ಒಟ್ಟಾರೆ ಸಾಮರ್ಥ್ಯ 420 ಗಿಗಾವಾಟ್ಗೆ ತಲುಪಿದೆ. 2023ಕ್ಕೆ ಹೋಲಿಸಿದರೆ, ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ ಶೇ 50ರಷ್ಟು ಹೆಚ್ಚಳವಾಗಿದೆ. ಹೊಸದಾಗಿ ಒಂಬತ್ತು ಘಟಕಗಳು ಆರಂಭವಾಗಿವೆ. ಭಾರತವೂ ಸೇರಿದಂತೆ 15 ದೇಶಗಳಲ್ಲಿ 62 ಘಟಕಗಳು ಈಗಾಗಲೇ ನಿರ್ಮಾಣ ಹಂತದಲ್ಲಿದ್ದು, 70 ಗಿಗಾವಾಟ್ ವಿದ್ಯುತ್ ಹೊಸದಾಗಿ ಸೇರ್ಪಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಒಂದೇ ವರ್ಷದಲ್ಲಿ 30 ಗಿಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ನಿರ್ಮಾಣವಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಸೌರ ವಿದ್ಯುತ್ ಉತ್ಪಾದನೆ ಮೂರು ಪಟ್ಟು ಹೆಚ್ಚಳವಾಗಿ, ದಾಖಲೆ ನಿರ್ಮಿಸಿದೆ

ಕೈಗಾರಿಕಾ ಹಾಗೂ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿ ಕಾರಣಗಳಿಂದ ಭಾರತದಲ್ಲಿ ಇಂಧನ ಬೇಡಿಕೆ ಪ್ರತಿ ವರ್ಷ ಹೆಚ್ಚುತ್ತಿದೆ. ಏರುತ್ತಿರುವ ಬೇಡಿಕೆಯನ್ನು ಪೂರೈಸಲು ಸಿದ್ಧತೆಗಳು ನಡೆಯುತ್ತಿವೆ. 2032ರ ವೇಳೆಗೆ ಶೇ 80 ಗಿಗಾವಾಟ್ ಸಾಮರ್ಥ್ಯದ ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದಿಸುವ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ.

ಇಂಗಾಲ ಹೊರಸೂಸುವಿಕೆ ಸವಾಲು:

ಅತ್ಯಧಿಕ ತಾಪಮಾನ ಕಂಡುಬಂದ ಕಾರಣ, ಇಂಧನ ಆಧರಿತ ಇಂಗಾಲ ಹೊರಸೂಸುವಿಕೆ ಪ್ರಮಾಣ 30 ಕೋಟಿ ಟನ್ಗೆ ಹೆಚ್ಚಳವಾಗಿದೆ. ಆದರೂ 2019ರಿಂದ ಸೌರ, ಪವನ, ಪರಮಾಣು ಆಧರಿತ ವಿದ್ಯುತ್ ಬಳಕೆ ಅಧಿಕವಾಗಿದ್ದರಿಂದ ವಾರ್ಷಿಕವಾಗಿ 260 ಕೋಟಿ ಟನ್ಗಳಷ್ಟು ಇಂಗಾಲ ಹೊರಸೂಸುವಿಕೆಗೆ ನಿಯಂತ್ರಣ ಬಿದ್ದಿದೆ. ಇದು ಜಾಗತಿಕವಾಗಿ ಶೇ 7ರಷ್ಟು ಇಂಗಾಲ ಹೊರಸೂಸುವಿಕೆಗೆ ಸಮ ಎಂದು ತಜ್ಞರು ಹೇಳಿದ್ದಾರೆ. ಇಂಗಾಲ ಹೊರಸೂಸುವಿಕೆಯು ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಅಧಿಕವಾಗಿದ್ದರೂ ಚೀನಾದಲ್ಲಿ ಏರಿಕೆ ದರದಲ್ಲಿ ಕುಸಿತವಾಗಿದೆ. ಆದರೂ, ಹೊರಸೂಸುವಿಕೆ ತಲಾ ಪ್ರಮಾಣ ಶೇ 16ರಷ್ಟಿದ್ದು, ಇದು ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಅಧಿಕವಾಗಿದೆ. ಇದು ಜಾಗತಿಕ ಸರಾಸರಿಯ ದುಪ್ಪಟ್ಟು. ಅಭಿವೃದ್ಧಿಹೊಂದಿದ ದೇಶಗಳಲ್ಲಿ ಇದರ ಪ್ರಮಾಣ ಶೇ 1.1ರಷ್ಟು ಕುಸಿದಿದ್ದು, ಅದು ಈಗ 1,090 ಕೋಟಿ ಟನ್ಗಳಷ್ಟಿದೆ.

ಭಾರತದಲ್ಲಿ ಇಂಧನ ಆಧರಿತ ಇಂಗಾಲ ಹೊರಸೂಸುವಿಕೆ ಪ್ರಮಾಣ 2024ರಲ್ಲಿ ಶೇ 5.4ರಷ್ಟು ಏರಿಕೆಯಾಗಿದೆ. ತೀವ್ರಗತಿಯ ಆರ್ಥಿಕ ಬೆಳವಣಿಗೆ, ದೀರ್ಘಕಾಲೀನ ಬಿಸಿಗಾಳಿ ಹಾಗೂ ಮೂಲಸೌಕರ್ಯಗಳ ಹೆಚ್ಚಳದಿಂದಾಗಿ ಇಂಧನಕ್ಕೆ ಅಪಾರ ಬೇಡಿಕೆ ಉಂಟಾಗಿದ್ದು, ಇಂಗಾಲದ ಉಗುಳುವಿಕೆ ಪ್ರಮಾಣ ಹೆಚ್ಚಳವಾಗಿದೆ. ಗಮನಾರ್ಹವೆಂದರೆ, ಭಾರತದ ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆಗೆ ಹೊಸದಾಗಿ 35 ಗಿಗಾವಾಟ್ನಷ್ಟು ಸೇರ್ಪಡೆಯಾಗಿದ್ದು, ದಾಖಲೆ ಬರೆದಿದೆ. ಆದರೂ ಅಪಾರ ಬೇಡಿಕೆಯ ಪರಿಣಾಮವಾಗಿ, ಪಳೆಯುಳಿಕೆ ಇಂಧನಗಳೇ ಭಾರತದಲ್ಲಿ ನಿರ್ಣಾಯಕ ಸ್ಥಾನದಲ್ಲಿವೆ.

2030ರ ವೇಳೆಗೆ ಶೇ 45ರಷ್ಟು ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸುವುದಾಗಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಶೃಂಗಸಭೆಯಲ್ಲಿ (ಸಿಒಪಿ–26) ಮಾತು ಕೊಟ್ಟಿದ್ದ ಭಾರತ, ಆ ಗುರಿಯನ್ನು ಸಾಧಿಸಬೇಕಾದರೆ 500 ಗಿಗಾವಾಟ್ ಸಾಮರ್ಥ್ಯದ ಮರುಬಳಕೆಯ ವಿದ್ಯುತ್ ಉತ್ಪಾದಿಸಬೇಕಿದೆ. ಆದರೆ, ಈಗ ಭಾರತ ಈ ಮೂಲದಿಂದ ಉತ್ಪಾದಿಸುತ್ತಿರುವುದು 217 ಗಿಗಾವಾಟ್ ಮಾತ್ರ.

ಹೆಚ್ಚುತ್ತಿರುವ ಇಂಧನ ಬೇಡಿಕೆ:

ಕೈಗಾರಿಕಾ ಹಾಗೂ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿ ಕಾರಣಗಳಿಂದ ಭಾರತದಲ್ಲಿ ಇಂಧನ ಬೇಡಿಕೆ ಪ್ರತಿ ವರ್ಷ ಹೆಚ್ಚುತ್ತಿದೆ. ಏರುತ್ತಿರುವ ಬೇಡಿಕೆಯನ್ನು ಪೂರೈಸಲು ಸಿದ್ಧತೆಗಳು ನಡೆಯುತ್ತಿವೆ. 2032ರ ವೇಳೆಗೆ ಶೇ 80 ಗಿಗಾವಾಟ್ ಸಾಮರ್ಥ್ಯದ ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದಿಸುವ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ

ಆಧಾರ: ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ 2025ರ ವರದಿ, ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನಗಳ ಏಜೆನ್ಸಿಯ ದತ್ತಾಂಶ, ಪಿಐಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.