ಉಕ್ರೇನ್ ನಿಲುವೇನು?
ಮೂರೂವರೆ ವರ್ಷಗಳಿಂದ ಯುದ್ಧ ನಡೆಯುತ್ತಿದ್ದರೂ ಪುಟ್ಟ ರಾಷ್ಟ್ರ ಉಕ್ರೇನ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ನೆರವಿನಿಂದ ರಷ್ಯಾ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿದೆ. ರಷ್ಯಾದೊಂದಿಗೆ ಶಾಂತಿ ಮಾತುಕತೆ ಮತ್ತು ಕದನ ವಿರಾಮಕ್ಕೆ ಸಿದ್ಧವಿರುವುದಾಗಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದರೂ, ರಷ್ಯಾ ಬೇಡಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ಉಕ್ರೇನ್‌ಗೆ ಸೇರಿದ ಭೂಭಾಗವನ್ನು ರಷ್ಯಾಕ್ಕೆ ಯಾವುದೇ ಕಾರಣಕ್ಕೂ ಬಿಟ್ಟುಕೊಡಲಾರೆವು ಎಂದು ಖಂಡತುಂಡವಾಗಿ ಹೇಳಿದ್ದಾರೆ. ಕದನ ವಿರಾಮ ಒಪ್ಪಂದ ನಡೆಯಬೇಕಾದರೆ ಉಕ್ರೇನ್ ಹಿಡಿತದಲ್ಲಿರುವ ಡೊನೆಟ್‌ಸ್ಕ್ ಪ್ರಾಂತ್ಯದ ಶೇ 30ರಷ್ಟು ಭೂಪ್ರದೇಶವನ್ನು ರಷ್ಯಾಕ್ಕೆ ನೀಡಬೇಕು ಎಂದು ಪುಟಿನ್ ಹಾಕಿರುವ ಷರತ್ತನ್ನು ಝೆಲೆನ್‌ಸ್ಕಿ ತಳ್ಳಿಹಾಕಿದ್ದಾರೆ. ಅಲ್ಲದೇ, ಯಾವುದೇ ಶಾಂತಿ ಅಥವಾ ಕದನ ವಿರಾಮ ಮಾತುಕತೆಯಲ್ಲಿ ಉಕ್ರೇನ್ ಭಾಗವಾಗದಿದ್ದರೆ, ಅಲ್ಲಿ ತೆಗೆದುಕೊಳ್ಳುವ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಈ ಹಿಂದೆಯೇ ಹೇಳಿದ್ದರು.