ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ) 2023ರ ವಾರ್ಷಿಕ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ದೇಶದಲ್ಲಿ ಒಟ್ಟಾರೆ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಐಪಿಸಿ (ಭಾರತೀಯ ದಂಡ ಸಂಹಿತೆ) ಮತ್ತು ವಿಶೇಷ ಮತ್ತು ಸ್ಥಳೀಯ ಕಾನೂನುಗಳ (ಎಸ್ಎಲ್ಎಲ್) ಅಡಿ ದಾಖಲಾಗುತ್ತಿದ್ದ ಪ್ರಕರಣಗಳ ಪ್ರಮಾಣವು ಏರಿಕೆ ಕಂಡಿದೆ. ಹಾಗೆಯೇ ಅಪರಾಧಗಳ ದಾಖಲು ಪ್ರಮಾಣವೂ ಜಾಸ್ತಿಯಾಗಿದೆ; 2022ರಲ್ಲಿ ಈ ಪ್ರಮಾಣ ಒಂದು ಲಕ್ಷ ಜನಸಂಖ್ಯೆಗೆ 422 ಇದ್ದರೆ, 2023ರಲ್ಲಿ ಅದು 448ಕ್ಕೆ ಏರಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳು ಕಡಿಮೆ ಆಗಿದ್ದರೆ, ಅಪಹರಣ ಮತ್ತು ಒತ್ತೆ ಪ್ರಕರಣಗಳು ಜಾಸ್ತಿಯಾಗಿವೆ. ಮಕ್ಕಳು ಮತ್ತು ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡು ಬಂದಿದೆ. ಈ ಪೈಕಿ ‘ಗಂಡ ಅಥವಾ ಸಂಬಂಧಿಗಳಿಂದ ಕ್ರೌರ್ಯ’ಕ್ಕೆ ಸಂಬಂಧಿಸಿದ ಪ್ರಕರಣಗಳ ಪಾಲು (ಶೇ 28) ಹೆಚ್ಚಾಗಿದೆ. ಅಪಹರಣ ಮತ್ತು ಒತ್ತೆ ಪ್ರಕರಣಗಳು (ಶೇ 19.8) ಮತ್ತು ಪೋಕ್ಸೊ ಪ್ರಕರಣಗಳು (14.8) ನಂತರದ ಸ್ಥಾನಗಳಲ್ಲಿವೆ.

ಮಕ್ಕಳ ಮೇಲಿನ ಪ್ರಕರಣಗಳಲ್ಲಿ ಶೇ 9.2ರಷ್ಟು ಹೆಚ್ಚಳವಾಗಿದ್ದು, ಅವುಗಳಲ್ಲಿ ಅಪಹರಣ (ಶೇ 45) ಮತ್ತು ಪೋಕ್ಸೊ ಪ್ರಕರಣಗಳ (ಶೇ 38.2) ಸಂಖ್ಯೆ ಜಾಸ್ತಿ ಇದೆ. ಹಾಗೆಯೇ, ಪರಿಶಿಷ್ಟ ಜಾತಿ ಜನರ (ಎಸ್ಸಿ) ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅಲ್ಪಪ್ರಮಾಣದ ಹೆಚ್ಚಳವಾಗಿದ್ದರೆ, ಎಸ್ಟಿಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ (ಶೇ 28.8) ಭಾರಿ ಪ್ರಮಾಣದ ಏರಿಕೆಯಾಗಿದೆ. ಸೈಬರ್ ಅಪರಾಧಗಳು ಗಣನೀಯವಾಗಿ ಜಾಸ್ತಿಯಾಗಿವೆ.

ದೇಶದಲ್ಲಿ 2023ರಲ್ಲಿ 1,59,811 ಪುರುಷರು, 3,24,763 ಮಹಿಳೆಯರು ಮತ್ತು 10 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 4,84,584 ಮಂದಿ ಕಾಣೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಮಹಿಳೆಯರು ಹೆಚ್ಚಿದ್ದಾರೆ.

ಕಡಿಮೆ ಜನರಿಗೆ ಶಿಕ್ಷೆ: ಬಹುತೇಕ ಎಲ್ಲ ಅಪರಾಧ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣ ಕಡಿಮೆ. ಅದರಲ್ಲೂ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಈ ಪ್ರಮಾಣ ತುಂಬಾ ಕಡಿಮೆ ಇದೆ.

ಎಸ್ಸಿ: ದೌರ್ಜನ್ಯ ಹೆಚ್ಚಳ

2023ರಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ನಡೆದ ಅಪರಾಧ ಪ್ರಕರಣಗಳ ಸಂಖ್ಯೆ ಶೇ 0.4ರಷ್ಟು ಹೆಚ್ಚಾಗಿದೆ. 2022ರಲ್ಲಿ 57,582 ದೂರುಗಳು ದಾಖಲಾಗಿದ್ದರೆ, 2023ರಲ್ಲಿ ಈ ಸಂಖ್ಯೆ 57,789ಕ್ಕೆ ಜಾಸ್ತಿಯಾಗಿದೆ. ಪರಿಶಿಷ್ಟ ಜಾತಿಯವರ ಮೇಲೆ ನಡೆದ ಅಪರಾಧ ಪ್ರಮಾಣ 2022ರಲ್ಲಿ 28.6ರಷ್ಟು ಇತ್ತು, ಮರು ವರ್ಷ ಇದು 28.7ಕ್ಕೆ ಏರಿಕೆ ಕಂಡಿದೆ.

ಉತ್ತರ ಪ್ರದೇಶದಲ್ಲಿ ಪ್ರಕರಣ ಹೆಚ್ಚು

ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣಗಳು ವರದಿಯಾಗಿವೆ. ಮಹಿಳೆಯರ ವಿರುದ್ಧದ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಹೆಚ್ಚಿವೆ. ಕೇರಳದಲ್ಲಿ ಅಪರಾಧ ಪ್ರಮಾಣವು (crime rate) ಹೆಚ್ಚಾಗಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ನಾಗಾಲ್ಯಾಂಡ್ನಲ್ಲಿ ಅತಿ ಕಡಿಮೆ ಪ್ರಮಾಣ ದಾಖಲಾಗಿದೆ.

ಶಿಕ್ಷೆಯಾಗುವುದು ಕಡಿಮೆ

ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಕ್ಕಿರುವ ಪ್ರಮಾಣ ಕಡಿಮೆ ಇದೆ. ಮಹಿಳೆಯರ ಮೇಲೆ ನಡೆದ ಅಪರಾಧಕ್ಕೆ ಸಂಬಂಧಿಸಿದಂತೆ (ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೇರಿ) ದಾಖಲಾದ ಒಟ್ಟು ಪ್ರಕರಣಗಳಲ್ಲಿ ಪೊಲೀಸರು ತನಿಖೆ ನಡೆಸಿದ 6,35,159 ಪ್ರಕರಣಗಳ ಪೈಕಿ 4,48,211 ಪ್ರಕರಣಗಳು 2023ರದ್ದು. 1,85,961 ಅದಕ್ಕೂ ಹಿಂದಿನ ವರ್ಷದ ಬಾಕಿ ಪ್ರಕರಣಗಳು. ಅವುಗಳ ಜತೆಗೆ, 987 ವರ್ಗಾವಣೆಯಾದಂಥವು. ಈ ಪೈಕಿ ಶೇ 77.6ರಷ್ಟು ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದರೆ, ಶೇ 28.7ರಷ್ಟು ಬಾಕಿ ಇವೆ.

ನ್ಯಾಯಾಲಯದಲ್ಲಿ 2023ರ 3,50,937 ಪ್ರಕರಣಗಳ ಜತೆಗೆ ಅದಕ್ಕೂ ಹಿಂದಿನ ವರ್ಷಗಳ 21,84,756 ಪ್ರಕರಣಗಳು, 6,276 ಮತ್ತೆ ಆರಂಭಿಸಲಾದ ಪ್ರಕರಣಗಳು ಸೇರಿ ಒಟ್ಟು 25,35,693 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 23,03,657 (ಶೇ 90.8) ಪ್ರಕರಣಗಳು ಬಾಕಿ ಇವೆ. ಮಹಿಳೆಯರ ಮೇಲಿನ ಪ್ರಕರಣಗಳಲ್ಲಿ ಶಿಕ್ಷೆಯಾದವರ ಪ್ರಮಾಣವು ಶೇ 21.3 ಮಾತ್ರ.

ರಾಜ್ಯದಲ್ಲಿ ಶೇ 3.2: ಕರ್ನಾಟಕದ ನ್ಯಾಯಾಲಯಗಳಲ್ಲಿ ಹಿಂದಿನ ವರ್ಷಗಳ 72,455 ಪ್ರಕರಣಗಳು, 2023ರ 16,888 ಪ್ರಕರಣಗಳು ಸೇರಿ ಒಟ್ಟು 89,343 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇವುಗಳಲ್ಲಿ 428 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗಿದ್ದು, 18 ಪ್ರಕರಣಗಳು ಮುಕ್ತಾಯಗೊಂಡಿವೆ. 12,760 ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ. ಶೇ 3.2 ಪ್ರಕರಣಗಳಲ್ಲಿ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ ಆಗಿದ್ದು, ಶೇ 84.6 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

ರಾಜ್ಯದಲ್ಲೂ ಹೆಚ್ಚಳ

2022ರ ಅಂಕಿ ಅಂಶಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ 2023ರಲ್ಲಿ ದಾಖಲಾದ ಒಟ್ಟು ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಶೇ 18.5ರಷ್ಟು ಹೆಚ್ಚಳವಾಗಿದೆ. ನಿಮಿಷಗಳ ಲೆಕ್ಕಾಚಾರದಲ್ಲಿ ಹೇಳುವುದಾದರೆ ಪ್ರತಿ 2.45 ನಿಮಿಷಕ್ಕೊಂದರಂತೆ ಅಪರಾಧ ಪ್ರಕರಣಗಳು ವರದಿಯಾಗಿವೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಕ್ರಮವಾಗಿ ಶೇ 14 ಮತ್ತು ಶೇ 11.7ರಷ್ಟು ಜಾಸ್ತಿಯಾಗಿರುವುದನ್ನು ಅಂಕಿ ಅಂಶಗಳು ಹೇಳುತ್ತಿವೆ.

ಸೈಬರ್ ಅಪರಾಧ ಪ್ರಕರಣಗಳು ಶೇ 74ರಷ್ಟು ಹೆಚ್ಚಳ ಕಂಡಿದೆ. ಕೊಲೆ ಪ್ರಕರಣ ಶೇ 5.8ರಷ್ಟು ಇಳಿಕೆಯಾಗಿದ್ದರೆ, ಅತ್ಯಾಚಾರ ಪ್ರಕರಣಗಳು ಶೇ 10ರಷ್ಟು ಹೆಚ್ಚಾಗಿದೆ.

ಬೆಂಗಳೂರಿನಲ್ಲೂ ಜಾಸ್ತಿ: ರಾಜಧಾನಿ ಬೆಂಗಳೂರಿನಲ್ಲೂ ಅಪರಾಧ ಪ್ರಕರಣಗಳು ಜಾಸ್ತಿಯಾಗಿವೆ. 2022ರಲ್ಲಿ 46,187 ಪ್ರಕರಣಗಳು ದಾಖಲಾಗಿದ್ದರೆ, 2023ರ ಹೊತ್ತಿಗೆ ಇದು 68,520ಕ್ಕೆ ಏರಿದೆ.

ಕಳ್ಳತನದ ಪ್ರಕರಣಗಳಲ್ಲಿ ಬೆಂಗಳೂರು (10,438) ಎರಡನೇ ಸ್ಥಾನದಲ್ಲಿದೆ. ದೆಹಲಿ ಮೊದಲ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.