ರೂಪಾಯಿ ಮೌಲ್ಯ ಕುಸಿತ
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಬಂದಿರುವುದು ಕೂಡ ಬೆಳ್ಳಿ ಧಾರಣೆಯ ಏರಿಕೆಗೆ ಇನ್ನೊಂದು ಕಾರಣ. ಭಾರತವು ತನ್ನ ಬೇಡಿಕೆಯ ಬಹುಪಾಲು ಬೆಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ದುರ್ಬಲ ರೂಪಾಯಿ ಮೌಲ್ಯ, ಆಮದು ಸುಂಕ, ಜಿಎಸ್‌ಟಿ, ಸಾಗಣೆ ವೆಚ್ಚಗಳು ಒಟ್ಟಾರೆ ಆಮದು ವೆಚ್ಚವನ್ನು ಜಾಸ್ತಿಯಾಗುವಂತೆ ಮಾಡುತ್ತಿದೆ.