ಕಫಾಲ ವ್ಯವಸ್ಥೆಯ ಇತಿಹಾಸ, ಅದರ ದುರುಪಯೋಗಗಳು ಮತ್ತು ಸೌದಿ ಅರೇಬಿಯಾ ಅದನ್ನು ರದ್ದುಪಡಿಸಿದ ಹಿನ್ನೆಲೆ... ಈ ಬದಲಾವಣೆಯಿಂದ ಭಾರತೀಯ ವಲಸೆ ಕಾರ್ಮಿಕರಿಗೆ ಹೇಗೆ ಲಾಭವಾಗಲಿದೆ ಎಂಬ ವಿಶ್ಲೇಷಣೆ.

ವಲಸೆ ನೌಕರರನ್ನು ನಿಯಂತ್ರಿಸುತ್ತಿದ್ದ ವಿವಾದಾತ್ಮಕ ಪ್ರಾಯೋಜಕತ್ವ ಕಫಾಲ ವ್ಯವಸ್ಥೆಗೆ ಏಳು ದಶಕಗಳ ನಂತರ ಸೌದಿ ಅರೇಬಿಯಾ ತಿಲಾಂಜಲಿ ಹೇಳಿದೆ. ಇದರಿಂದ ಲಕ್ಷಾಂತರ ವಲಸೆ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ.

ಕೊಲ್ಲಿ ರಾಷ್ಟ್ರದ ಕಾರ್ಮಿಕ ನೀತಿಯ ಚೌಕಟ್ಟಿನಲ್ಲಿ ಇದು ಅತ್ಯಂತ ಮಹತ್ವದ ಬದಲಾವಣೆಗಳಲ್ಲಿ ಒಂದಾಗಿದೆ. ಇದರಿಂದ 26 ಲಕ್ಷ ಭಾರತೀಯರನ್ನೂ ಒಳಗೊಂಡು, ಸುಮಾರು 1.3 ಕೋಟಿ ವಿದೇಶಿ ಕಾರ್ಮಿಕರಿಗೆ ನೇರ ಪ್ರಯೋಜನವಾಗಲಿದೆ ಎಂದು ಅಂದಾಜಿಸಲಾಗಿದೆ.

ಏನಿದು ಸೌದಿ ಅರೇಬಿಯಾದ ಕಫಾಲ ವ್ಯವಸ್ಥೆ?

ಅರೆಬಿಕ್ನಲ್ಲಿ ‘ಕಫಾಲ’ ಎಂದರೆ ಪ್ರಾಯೋಜಿಸುವುದು ಎಂದರ್ಥ. ಅಂದರೆ, ಸ್ಥಳೀಯ ಉದ್ಯೋಗದಾತ (ಕಫೀಲ್) ವಿದೇಶಿ ಕಾರ್ಮಿಕರ ವೀಸಾ ಮತ್ತು ವಾಸ್ತವ್ಯದ ಕಾನೂನು ಬದ್ಧ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಪದ್ಧತಿ ಇದಾಗಿದೆ. 1950ರ ಸಂದರ್ಭದಲ್ಲಿ ಸೌದಿಯಲ್ಲಿ ತೈಲೋತ್ಪಾದನೆ ಗರಿಷ್ಠ ಪ್ರಮಾಣದಲ್ಲಿದ್ದಾಗ ಕಫಾಲ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆರಂಭದಲ್ಲಿ ವಿದೇಶದಿಂದ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದ ಕಾರ್ಮಿಕರ ಹರಿವನ್ನು ನಿಯಂತ್ರಿಸಲು ಇದನ್ನು ಒಂದು ಮಾರ್ಗೋಪಾಯವಾಗಿ ಬಳಸಲಾಗುತ್ತಿತ್ತು.

ಕಫಾಲ ವ್ಯವಸ್ಥೆ ಏಕೆ ನಿಂದನೀಯ ಎಂದು ಪರಿಗಣಿಸಲಾಗುತ್ತದೆ?

ಕಫಾಲ ವ್ಯವಸ್ಥೆ ಆರಂಭದಲ್ಲಿ ಉತ್ತಮವೆಂದೆನಿಸಿದರೂ, ಕಾಲಾನಂತರದಲ್ಲಿ ಇದು ಶೋಷಣೆ ಎಂದೇ ಪರಿಗಣಿಸಲಾಯಿತು. ಅದು ಸೌದಿಯ ಉದ್ದೇಶ ಮತ್ತು ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವುದು, ವೇತನ ನೀಡಲು ತಡ ಮಾಡುವುದು ಹಾಗೂ ಪ್ರಯಾಣವನ್ನು ನಿರ್ಬಂಧಿಸಲು ಈ ಕಾನೂನನ್ನು ಬಳಸಿಕೊಳ್ಳಲಾಯಿತು. ನೌಕರರು ಉದ್ಯೋಗ ಬದಲಿಸುವಂತಿಲ್ಲ, ದೇಶ ತೊರೆಯುವಂತಿಲ್ಲ ಅಥವಾ ಪ್ರಾಯೋಜಿಸಿದ ವ್ಯಕ್ತಿಯ ಅನುಮತಿ ಇಲ್ಲದೆ ದೂರನ್ನೂ ದಾಖಲಿಸುವಂತಿಲ್ಲ ಎಂಬ ಪರಿಸ್ಥಿತಿ ತಲೆದೋರಿತು.

‘ಆಧುನಿಕ ಯುಗದ ಜೀತ’ ಎಂದು ಹಲವು ಮಾನವ ಹಕ್ಕುಗಳ ಸಂಘಟನೆಗಳು ಈ ವ್ಯವಸ್ಥೆಯನ್ನು ಕರೆದವು. ಕಫಾಲ ಯೋಜನೆಯಿಂದ ಮನೆಗೆಲಸ ಮಾಡುತ್ತಿದ್ದ ದಾದಿಯರು ಅತಿ ಹೆಚ್ಚು ದೌರ್ಜನ್ಯಕ್ಕೊಳಗಾದರು. ಒಂಟಿತನ, ಅತಿಯಾದ ಕೆಲಸ, ಮಾನಸಿಕ ಅಥವಾ ದೈಹಿಕ ಹಿಂಸೆಗಳಿಗೆ ಗುರಿಯಾದ ಉದಾಹರಣೆಗಳೂ ಇವೆ.

ವಿದೇಶಿ ನೌಕರರ ಮೇಲೆ ಸೌದಿ ಅರೇಬಿಯಾ ಎಷ್ಟರ ಮಟ್ಟಿಗೆ ಅವಲಂಬಿಸಿದೆ?

ವಲಸೆ ಕಾರ್ಮಿಕರನ್ನೇ ಸೌದಿ ಅರೇಬಿಯಾ ನೆಚ್ಚಿಕೊಂಡಿದೆ. ಅಲ್ಲಿರುವ ಒಟ್ಟು 1.34 ಕೋಟಿ ಜನಸಂಖ್ಯೆಯಲ್ಲಿ ಶೇ 42ರಷ್ಟು ಜನ ವಿದೇಶಿ ಕಾರ್ಮಿಕರು. ಅದರಲ್ಲೂ ನಿರ್ಮಾಣ, ಕೃಷಿ ಹಾಗೂ ಮನೆಗೆಲಸ ಕ್ಷೇತ್ರಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ದೊಡ್ಡದು.

ಅದರಲ್ಲೂ ಭಾರತ, ಬಾಂಗ್ಲಾದೇಶ, ನೇಪಾಳ ಹಾಗೂ ಫಿಲಿಪಿನ್ಸ್ನಿಂದ ಬಂದವರ ಸಂಖ್ಯೆ ಹೆಚ್ಚು. ಈ ಪ್ರಾಯೋಜಕತ್ವ ವ್ಯವಸ್ಥೆಯನ್ನು ತೆಗೆದುಹಾಕುವಂತೆ, ಬಲವಂತದ ಕಾರ್ಮಿಕ ಪದ್ಧತಿ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವಂತೆ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಮತ್ತು ಹಲವು ವಿದೇಶಿ ಸರ್ಕಾರಗಳು ಸೌದಿಯನ್ನು ಕಳೆದ ಕೆಲ ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿವೆ.

ಕಫಾಲ ವ್ಯವಸ್ಥೆಯನ್ನು ಈಗೇಕೆ ಸೌದಿ ಅರೇಬಿಯಾ ರದ್ದುಪಡಿಸಿತು?

ಪ್ರಾದೇಶಿಕವಾಗಿಯೂ ಆಗಿರುವ ಸಾಕಷ್ಟು ಬದಲಾವಣೆಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಬೆಳವಣಿಗೆಗಳು ಸೌದಿ ಅರೇಬಿಯಾದ ಈ ನಿರ್ಧಾರದ ಹಿಂದಿದೆ ಎಂದೆನ್ನಲಾಗಿದೆ. 2022ರ ಫಿಫಾ ವಿಶ್ವಕಪ್ ಆಯೋಜಿಸುವ ಮೊದಲೇ ಕತಾರ್ ಈ ಮಾದರಿಯ ನೀತಿಯನ್ನು ಕೈಬಿಟ್ಟಿತು. ಇದು ಕೊಲ್ಲಿ ರಾಷ್ಟ್ರಗಳಿಗೆ ಒಂದು ಪೂರ್ವನಿದರ್ಶನವಾಗಿದೆ.

ಕಫಾಲ ವ್ಯವಸ್ಥೆ ರದ್ಧತಿಯ ಹಿಂದೆ ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರ 2030ರ ದೂರದೃಷ್ಟಿಯೂ ಇದೆ. ಸಮಾಜವನ್ನು ಆಧುನೀಕರಿಸುವ, ಆರ್ಥಿಕತೆಯನ್ನು ವೈವಿಧ್ಯಗೊಳಿಸುವ ಮತ್ತು ಜಾಗತಿಕವಾಗಿ ಪ್ರಗತಿಪರ ಎಂದು ಸಾಬೀತುಪಡಿಸುವ ಉದ್ದೇಶವೂ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಫಾಲ ರದ್ಧತಿಯಿಂದ ಏನೆಲ್ಲಾ ಬದಲಾವಣೆಗಳನ್ನು ವಲಸೆ ಕಾರ್ಮಿಕರು ನಿರೀಕ್ಷಿಸಬಹುದು?

ಹೊಸ ವ್ಯವಸ್ಥೆಯಿಂದ ಉದ್ಯೋಗ ಎಂಬುದು ಪ್ರಾಯೋಜಕತ್ವದ ಆಧಾರದ ಬದಲು, ಗುತ್ತಿಗೆ ಆಧಾರದಲ್ಲಿರಲಿದೆ. ನೌಕರರು ಈಗ ಉದ್ಯೋಗದಾತರ ಅನುಮತಿ ಇಲ್ಲದೆ ಉದ್ಯೋಗ ಬದಲಿಸಬಹುದು. ಗುತ್ತಿಗೆ ಅವಧಿ ಪೂರ್ಣಗೊಂಡ ನಂತರ ನೌಕರರು ಇಚ್ಛಿಸಿದರೆ ‘ನಿರ್ಗಮನ ವೀಸಾ’ ಇಲ್ಲದೆ ಅಥವಾ ಗುತ್ತಿಗೆ ನೀಡಿದವರ ಅನುಮತಿ ಇಲ್ಲದೆ ಸೌದಿಯಿಂದ ಹೊರಹೋಗಲು ಅವಕಾಶ ಕಲ್ಪಿಸಲಾಗಿದೆ. ಈ ಸುಧಾರಣೆಯು ಕಾರ್ಮಿಕ ನ್ಯಾಯಾಲಯ ಮತ್ತು ಸಕ್ಷಮ ಪ್ರಾಧಿಕಾರಗಳ ಮೊರೆ ಹೋಗಲೂ ಅವಕಾಶ ಕಲ್ಪಿಸಿದೆ. ಹೀಗಾಗಿ ಕಾರ್ಮಿಕರಿಗೆ ಯಾವುದೇ ಪ್ರತೀಕಾರದ ಭಯ, ನಿಂದನೆ ಅಥವಾ ವೇತನ ತಡೆ ಹಿಡಿಯುವ ಭಯವಿರದು.

ಹೊಸ ಬದಲಾವಣೆ ಡಿಜಿಟಲ್ ಸ್ವರೂಪದ್ದಾಗಿರಲಿದೆ. ಇದಕ್ಕಾಗಿ Qiwa ಎಂಬ ವೇದಿಕೆ ಬಳಸಲಾಗುತ್ತಿದೆ. ಉದ್ಯೋಗ ಒಪ್ಪಂದ ಔಪಚಾರಿಕಗೊಳಿಸಲು ವೇತನ ಸಂರಕ್ಷಣಾ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.

ಭಾರತೀಯ ವಲಸಿಗರಿಗೆ ಇದು ಹೇಗೆ ನೆರವಾಗಲಿದೆ?

ನಿರ್ಮಾಣ, ಆರೋಗ್ಯ ಕ್ಷೇತ್ರ, ಮನೆಗೆಲಸ, ಸೇವಾ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದವರಿಗೆ ಇದೊಂದು ಬಹುದೊಡ್ಡ ಪರಿವರ್ತನೆಯಾಗಲಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಈ ನಿಟ್ಟಿನಲ್ಲಿ ಸೌದಿ ಅರೇಬಿಯಾದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಹೇಳಿದೆ. ಜತೆಗೆ ಬದಲಾದ ನೀತಿಯಡಿ ವ್ಯಾಜ್ಯಗಳನ್ನು ಸುಲಭವಾಗಿ ಪರಿಹರಿಸುವಂತೆ ಹಾಗೂ ಭಾರತೀಯ ಮೂಲದ ನೌಕರರ ಹಿತ ಕಾಪಾಡುವ ಖಾತ್ರಿಯನ್ನು ಬಯಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.