US Politics: ಟ್ರಂಪ್ ಮತ್ತು ಮಸ್ಕ್ ನಡುವಿನ ಬಿರುಕಿನಿಂದ ಸರ್ಕಾರದ ನೀತಿಗಳ ಪ್ರಚಾರಕ್ಕೆ ಹಾಗೂ ಟೆಸ್ಲಾ ಕಾರುಗಳ ಮಾರಾಟದ ಮೇಲೆ ಉಂಟಾಗಿರುವ ಪರಿಣಾಮಗಳೇನು...?

ವಾಷಿಂಗ್ಟನ್: ಶ್ವೇತಭವನಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಬಂದಾಗ ಹಿಂದಿನಂತಿರಲಿಲ್ಲ. ಅಧಿಕಾರಿಗಳೊಂದಿಗಿನ ಸಭೆ ನಡೆಸುವಾಗ ಅವರಲ್ಲಿ ಗೊಂದಲ ಮತ್ತು ಹತಾಶೆ ಎದ್ದು ಕಾಣುತ್ತಿತ್ತು. ಸುಂಕ ಮತ್ತು ವೆಚ್ಚ ಮಸೂದೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ ಹಾಗೂ ತಮ್ಮ ಎರಡನೇ ಗೆಲುವಿಗೆ ನೆರವಾಗಿದ್ದ ಉದ್ಯಮಿ ಗೆಳೆಯ ಬಹುಕೋಟಿ ಒಡೆಯ ಉದ್ಯಮಿ ಇಲಾನ್ ಮಸ್ಕ್ ಟೀಕೆಗಳು ಈಟಿಗಳಂತೆ ಚುಚ್ಚಿದ ಆಘಾತ ಅವರಲ್ಲಿ ಎದ್ದು ಕಾಣಿಸುತ್ತಿತ್ತು.

ಈ ಇಬ್ಬರು ಗೆಳೆಯರ ನಡುವಿನ ವೈಮನಸ್ಸು ಹಾಗೂ ಬಹಿರಂಗ ಹೇಳಿಕೆಗಳು ಹೊರಬೀಳಲಾರಂಭಿಸುತ್ತಿದ್ದಂತೆ ಟ್ರಂಪ್ ಅವರ ಮನಸ್ಸು ಹಾಗೂ ವರ್ತನೆ ಹಿಂದಿನಂತಿರಲಿಲ್ಲ. ಟೆಸ್ಲಾ ಕಂಪನಿ ಸಿಇಒ ಇಲಾನ್ ಮಸ್ಕ್ ಅವರು ತಮ್ಮದೇ ಮಾಲೀಕತ್ವದ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡು, ‘ಭಾರಿ ಸಿಟ್ಟಾಗಿದ್ದೇನೆ’ ಎಂದಿದ್ದರು.

‘ಟ್ರಂಪ್ ಸರ್ಕಾರದ ಸುಂಕ ಮಸೂದೆಯೊಂದು ಆರ್ಥಿಕ ಅಜಾಗರೂಕತೆ ಮತ್ತು ಅತ್ಯಂತ ಅಸಹ್ಯಕರ ಸಂಗತಿ’ ಎಂದು ಇಲಾನ್ ಮಸ್ಕ್ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು. ಇಂಥ ಮಸೂದೆಯನ್ನು ಬೆಂಬಲಿಸುವ ರಿಪಬ್ಲಿಕನ್ ಪಕ್ಷದ ಪ್ರತಿಯೊಬ್ಬರನ್ನೂ ವಿರೋಧಿಸುವುದಾಗಿ ಹೇಳಿದ್ದರು.

ಅಮೆರಿಕ ಸಂಸತ್ತಿನ ಬಜೆಟ್ ಕಚೇರಿಯ ಪ್ರಕಾರ 2.4 ಟ್ರಿಲಿಯನ್ ಅಮೆರಿಕನ್ ಡಾಲರ್ಗೆ ಸಾರ್ವಜನಿಕ ಹೊರೆಯು 36.2 ಟ್ರಿಲಿಯನ್ ಡಾಲರ್ನಷ್ಟಾಗಿದೆ. ಇದರಲ್ಲಿ ಟ್ರಂಪ್ ಅವರ ಹಲವು ಆದ್ಯತೆಗಳು ಈಡೇರಿವೆ ಎಂದು ಮಸ್ಕ್ ಆರೋಪಿಸಿದ್ದರು. ಇಲಾನ್ ಮಸ್ಕ್ ಅವರನ್ನು ಖಾಸಗಿಯಾಗಿ ಭೇಟಿಯಾಗಿ ಟ್ರಂಪ್ ಮಾತುಕತೆ ನಡೆಸಿದರು. ನಂತರ ತಮ್ಮ ತಂಡವನ್ನು ಕರೆದ ಟ್ರಂಪ್ ಸ್ನೇಹ ಕೊನೆಗೊಳಿಸುವ ಮಾತುಗಳನ್ನಾಡಿದ್ದರು ಎಂದು ಮೂಲಗಳು ಹೇಳಿವೆ.

ಓವಲ್ ಕಚೇರಿಯಲ್ಲಿ ಜರ್ಮನಿಯ ಚಾನ್ಸಲರ್ ಫ್ರಡ್ರಿಕ್ ಮೆರ್ಜ್ ಅವರೊಂದಿಗೆ ಕುಳಿತಿದ್ದ ಟ್ರಂಪ್ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ಹಿಂದಿನ ಸಲಹೆಗಾರರ ಕುರಿತು ಬಹಳಷ್ಟು ಅಸಮಾಧಾನವಾಗಿದೆ ಎಂದಿದ್ದರು. ಟ್ರಂಪ್ ಹೇಳಿಕೆ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮಸ್ಕ್ ತಿರುಗೇಟು ನೀಡಿದ್ದರು.

‘ನಮ್ಮ ಬಜೆಟ್ನಲ್ಲಿ ಕೊಟ್ಯಂತರ ಡಾಲರ್ ಉಳಿಸುವ ಏಕೈಕ ಮಾರ್ಗವೆಂದರೆ ಇಲಾನ್ಗೆ ನೀಡಿರುವ ಸಬ್ಸಿಡಿ ಕಡಿತ ಮತ್ತು ಗುತ್ತಿಗೆಗಳನ್ನು ತಕ್ಷಣದಿಂದಲೇ ರದ್ದುಗೊಳಿಸುವುದು’ ಎಂದು ಟ್ರಂಪ್ ತಮ್ಮ ಒಡೆತನದ ಟ್ರೂತ್ ಸೋಷಿಯಲ್ನಲ್ಲಿ ಹೇಳಿದ್ದರು.

ಇದಾದ ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯಿಸಿದ ಮಸ್ಕ್, ‘ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಇದು ಸಕಾಲ’ ಎಂದಿದ್ದರು. ಇದಕ್ಕೆ ಅವರ ಬೆಂಬಲಿಗರೊಬ್ಬರು ಪ್ರತಿಕ್ರಿಯಿಸಿ, ಡೊನಾಲ್ಡ್ ಟ್ರಂಪ್ ವಾಗ್ದಂಡನೆಗೆ ಒತ್ತಾಯಿಸಿದ್ದಾರೆ.

ಟ್ರಂಪ್ ಹಾಗೂ ಮಸ್ಕ್ ಸಂಬಂಧ ತೀರಾ ವಿಕೋಪಕ್ಕೆ ಹೋಗಿದ್ದು, ಇದು ವಾಷಿಂಗ್ಟನ್ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. 2ನೇ ಬಾರಿ ಶ್ವೇತ ಭವನ ಪ್ರವೇಶಿಸುತ್ತಿದ್ದಂತೆ ಟ್ರಂಪ್ ಸರ್ಕಾರವು ಬಹುಕೋಟಿ ಒಡೆತನದ ಉದ್ಯಮದ ಸಿಇಒ ಇಲಾನ್ ಮಸ್ಕ್ ಅವರಿಗೆ ಶ್ವೇತ ಭವನದೊಳಗೆ ಸಂಪೂರ್ಣ ಪ್ರವೇಶ ನೀಡಿದ್ದರು. ಇವೆಲ್ಲದರಿಂದ ಟ್ರಂಪ್ ಸರ್ಕಾರದಲ್ಲಿ ಇಲಾನ್ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಇದಕ್ಕೆ ಮೂಲ ಕಾರಣ ಕಳೆದ ವರ್ಷ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರ ಮಸ್ಕ್ ಸುಮಾರು 30 ಕೋಟಿ ಅಮೆರಿಕನ್ ಡಾಲರ್ ಖರ್ಚು ಮಾಡಿದ್ದು. ಜತೆಗೆ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ವ್ಯಾಪಕ ಪ್ರಚಾರ ನೀಡಿದ್ದು.
.PHOTOS | Chenab Rail Bridge: ವಿಶ್ವದ ಅತಿ ಎತ್ತರದ ರೈಲು ಸೇತುವೆ ಉದ್ಘಾಟನೆ.RCB ಮಾಲೀಕರು ಈಗ ಯಾರು? ವಿಜಯ್ ಮಲ್ಯ ಜತೆಗಿನ ನಂಟು ಏನು?.
ಕಳೆದೆರೆಡು ತಿಂಗಳಲ್ಲಿ ಪ್ರಶಂಸೆ–ಟೀಕೆ

ಸರ್ಕಾರದ ನೀತಿಗಳನ್ನು ಪ್ರಶಂಶಿಸಿ ವ್ಯಾಪಕ ಪ್ರಚಾರ ಮಾಡುವ ಮತ್ತು ಟೀಕಿಸುವ ಎರಡೂ ಕೆಲಸಗಳನ್ನು ಇಲಾನ್ ಮಸ್ಕ್ ಈ ಕೆಲವೇ ತಿಂಗಳುಗಳಲ್ಲಿ ಮಾಡಿದ್ದಾರೆ. ಟ್ರಂಪ್ ಅವರ ಕಾರ್ಯಸೂಚಿಗೆ ಆನ್ಲೈನ್ ಮೂಲಕ ವ್ಯಾಪಕ ಪ್ರಚಾರ ನೀಡಿದ್ದಾರೆ. ಮತ್ತೊಂದೆಡೆ ಸರ್ಕಾರದ ದಕ್ಷತೆಯ ಇಲಾಖೆಯಲ್ಲಿ ತಮ್ಮದೇ ಶೈಲಿಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಸರ್ಕಾರದ ಖರ್ಚನ್ನು ವ್ಯಾಪಕವಾಗಿ ವಿರೋಧಿಸುತ್ತಿದ್ದರು.

ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಮಸ್ಕ್ಗಾಗಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿದ್ದ ಟ್ರಂಪ್, ‘ಇಲಾನ್ ನಮ್ಮನ್ನು ನಿಜವಾಗಿಯೂ ಬಿಟ್ಟು ಹೋಗುವುದಿಲ್ಲ’ ಎಂದಿದ್ದರು. ಆದರೆ, ಟ್ರಂಪ್ ಆಡಳಿತವನ್ನು ಮಸ್ಕ್ ತೊರೆದಿದ್ದೂ ಅಲ್ಲದೆ, ಅದನ್ನು ಇನ್ನಷ್ಟು ಜಟಿಲಗೊಳಿಸಿದ್ದಾರೆ.

ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ಶ್ವೇತ ಭವನ, ‘ಇಲಾನ್ ಕಚೇರಿ ತೊರೆದಿದ್ದು ದೌರ್ಭಾಗ್ಯ. ಒಂದು ಸುಂದರ ಮಸೂದೆ ಕುರಿತು ಮಸ್ಕ್ ಅಸಂತುಷ್ಟರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಬಯಸಿದ ನೀತಿಗಳು ಅದರಲ್ಲಿಲ್ಲ ಎಂಬುದಷ್ಟೇ’ ಎಂದಿದೆ.
.ಅರ್ಧ ಕೆಲಸ ಮುಗಿಸಿದ್ದೇವೆ, ವಾಪಸ್ ಬಂದೇ ಬರುತ್ತೇವೆ: ಪ್ರೀತಿ ಜಿಂಟಾ ವಿಶ್ವಾಸ.’ಮಹಾ’ ಮೈತ್ರಿ ಸುಳಿವು: ಮುನಿಸು ಮರೆತು ಒಂದಾಗುವರೇ ರಾಜ್–ಉದ್ಧವ್ ಠಾಕ್ರೆ ಸೋದರರು?.
ಟ್ರಂಪ್ – ಮಸ್ಕ್ ವೈಮನಸ್ಸಿಗೆ ಬಡವಾದ ಟೆಸ್ಲಾ

ಟ್ರಂಪ್– ಮಸ್ಕ್ ನಡುವಿನ ವೈಮನಸ್ಸು ಟೆಸ್ಲಾ ಮಾರಾಟದ ಮೇಲೆ ಪರಿಣಾಮ ಬೀರಿದೆ. ಗುರುವಾರ ಶೇ 14ರಷ್ಟು ಮಾರಾಟ ಕುಂಟಿತವನ್ನು ಟೆಸ್ಲಾ ಅನುಭವಿಸಿತು. ಷೇರು ಮಾರುಕಟ್ಟೆಯಲ್ಲಿ ಸೃಷ್ಟಿಯಾದ ತಲ್ಲಣದಿಂದ ಸರ್ಕಾರದಲ್ಲಿರುವ ಟ್ರಂಪ್ ಬೆಂಬಲಿಗರಲ್ಲಿ ಗೊಂದಲವನ್ನುಂಟು ಮಾಡಿದೆ.

ಮಸ್ಕ್ ಅವರನ್ನು ಕಳೆದುಕೊಂಡಿದ್ದರಿಂದ ಪ್ರಭಾವ ಬೀರುವವರ ಹಾಗೂ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿಯನ್ನು ಟ್ರಂಪ್ ಸರ್ಕಾರ ಎದುರಿಸುತ್ತಿದೆ. ಅದರಲ್ಲೂ ಯುವ ಮತ್ತು ಪುರುಷ ಮತದಾರರೇ ಹೆಚ್ಚಿರುವ ಸಾಮಾಜಿಕ ಖಾತೆಗಳನ್ನು ತಲುಪಲು ಟ್ರಂಪ್ ಬೆಂಬಲಿಗರಿಗೆ ಕಷ್ಟವಾಗಬಹುದು. ಇವೆಲ್ಲವೂ ಮುಂದಿನ ವರ್ಷ ನಡೆಯಲಿರುವ ಮಧ್ಯಂತರ ಚುನಾವಣೆಗೆ ನಿಧಿ ಸಂಗ್ರಹ ಕಷ್ಟವಾಗಬಹುದು ಎಂದೆನ್ನಲಾಗಿದೆ.

ಮತ್ತೊಂದೆಡೆ ಸರ್ಕಾರವೇ ಪ್ರಮುಖವಾಗಿರುವಾಗ ಮಸ್ಕ್ ವ್ಯವಹಾರಕ್ಕೆ ಸಾಕಷ್ಟು ಅಪಾಯ ಎದುರಾಗುವ ಸಾಧ್ಯತೆಗಳಿವೆ. ಕೆಲವೊಂದು ಒಪ್ಪಂದ ಹಾಗೂ ಗುತ್ತಿಗೆಗಳನ್ನು ಸರ್ಕಾರ ರದ್ದುಪಡಿಸುವ ಅಥವಾ ತನಿಖೆ ನಡೆಸುವ ಅಪಾಯಗಳನ್ನೂ ಎದುರಿಸಬೇಕಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇವೆಲ್ಲವೂ ಮಸ್ಕ್ ಒಡೆತನದ ಕಂಪನಿಯ ಲಾಭಾಂಶದ ಮೇಲೆ ಭಾರಿ ಪರಿಣಾಮ ಉಂಟುಮಾಡುವ ಸಾಧ್ಯತೆಗಳಿವೆ.
.Mithi River Case: ನಟ ದಿನೊ ಮೊರಿಯಾ ನಿವಾಸದ ಮೇಲೆ ಇಡಿ ದಾಳಿ .ಮಸ್ಕ್–ಟ್ರಂಪ್ ಬೀದಿ ಜಗಳ: ಟೆಸ್ಲಾ ಷೇರು ಮೌಲ್ಯ ದಾಖಲೆಯ ಶೇ 14ರಷ್ಟು ಕುಸಿತ.
ನಾಸಾ ಮುಖ್ಯಸ್ಥರ ನೇಮಕದಲ್ಲಿ ಜಟಾಪಟಿ

ಸರ್ಕಾರದೊಂದಿಗಿನ ಈ ಗುದ್ದಾಟವು ಮಸ್ಕ್ ಅವರ ಕೆಲ ಸ್ನೇಹಿತರಲ್ಲಿ ಭೀತಿ ಮೂಡಿಸಿದೆ. ಇವರಲ್ಲಿ ಕೆಲವರು ಟ್ರಂಪ್ ಮತ್ತು ಇಲಾನ್ ಸಂಬಂಧ ಮತ್ತೆ ಗಟ್ಟಿಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ವಾರಗಳಿಂದ ನಡೆಯುತ್ತಿರುವ ಈ ಗುದ್ದಾಟವು ತೀರಾ ವೈಯಕ್ತಿಕ ಮಟ್ಟಕ್ಕೂ ತಲುಪಿದೆ. ಜೇರ್ಡ್ ಐಸಾಕ್ಮ್ಯಾನ್ ಅವರನ್ನು ನಾಸಾ ಮುಖ್ಯಸ್ಥರನ್ನಾಗಿಸಲು ಇಲಾನ್ ಮಸ್ಕ್ ಶಿಫಾರಸು ಮಾಡಿದ್ದರು. ಆದರೆ ಟ್ರಂಪ್ ಅದನ್ನು ತಿರಸ್ಕರಿಸಿದ್ದೂ ಇಬ್ಬರ ನಡುವಿನ ವೈರತ್ವ ಹೆಚ್ಚಲು ಕಾರಣವಾಯಿತು.

ಐಸಾಕ್ಮ್ಯಾನ್ ಅವರು ಶತಕೋಟಿ ಒಡೆಯ ಹಾಗೂ ಮಸ್ಕ್ ಆಪ್ತ ವಲಯದಲ್ಲಿ ಗುರುತಿಸಿಕೊಂಡ ವ್ಯಕ್ತಿ. ಮಸ್ಕ್ ಅವರ ಹಲವಾರು ಬಾಹ್ಯಾಕಾಶ ಯೋಜನೆಯಲ್ಲಿ ಮತ್ತು ವಾಣಿಜ್ಯ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ನೆರವಾದವರು. ತಮ್ಮ ಹೆಸರು ನಾಸಾಗೆ ನಾಮನಿರ್ದೇಶನಗೊಂಡ ತಕ್ಷಣ ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡ ಐಸಾಕ್ಮ್ಯಾನ್, ‘ಟ್ರಂಪ್ ಸರ್ಕಾರ, ಸಂಸದರು ಹಾಗೂ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದಿದ್ದರು.

ಐಸಾಕ್ಮ್ಯಾನ್ ಘಟನೆಯೇ ಇಷ್ಟಕ್ಕೆ ಕಾರಣವೆಂದೇನೂ ಅಲ್ಲ. ಇದಕ್ಕೂ ಮೊದಲೇ ಮಸ್ಕ್ ಪ್ರಭಾವ ತಗ್ಗಿಸುವ ಕೆಲಸ ಶ್ವೇತಭವನದಲ್ಲಿ ಆರಂಭಗೊಂಡಿತ್ತು. ಸಿಬ್ಬಂದಿ ಮತ್ತು ಬಜೆಟ್ ನಿರ್ಧಾರಗಳಲ್ಲಿ ಮಸ್ಕ್ ಅವರನ್ನು ನಿಧಾನವಾಗಿ ದೂರ ಸರಿಸಲಾಗುತ್ತಿತ್ತು. ಕಳೆದ ಮಾರ್ಚ್ನಲ್ಲೇ ಈ ಸಂದೇಶವನ್ನು ಟ್ರಂಪ್ ನೀಡಲಾರಂಭಿಸಿದ್ದರು. ಸರ್ಕಾರದ ಎಲ್ಲಾ ನಿರ್ಧಾರಗಳಿಗೂ ಮಸ್ಕ್ ಹೇಳಿಕೆ ಅಂತಿಮವಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.

ಇದೇ ವೇಳೆ ಸರ್ಕಾರದೊಂದಿಗಿನ ತನ್ನ ಸಂಬಂಧವೂ ಕೆಲ ದಿನಗಳದ್ದು ಎಂಬ ಸಂದೇಶವನ್ನು ಮಸ್ಕ್ ನೀಡಲಾರಂಭಿಸಿದ್ದರು. ಟ್ರಂಪ್ ಸರ್ಕಾರದ ಮಸೂದೆಗಳ ಕುರಿತು ಬಹಿರಂಗವಾಗಿ ಟೀಕಿಸಲು ಆರಂಭಿಸಿದರು. ರಾಜಕೀಯ ವೆಚ್ಚವನ್ನು ತಗ್ಗಿಸಬೇಕು ಎಂಬ ಮಸ್ಕ್ ಅಭಿಪ್ರಾಯಕ್ಕೆ ಕೆಲ ಸಂಸದರು ಆಘಾತ ವ್ಯಕ್ತಪಡಿಸಿದ್ದರು. ಮುಂದಿನ ವರ್ಷ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ಪರಾಭವ ಎದುರಿಸುವ ಭೀತಿಯನ್ನು ವ್ಯಕ್ತಪಡಿಸಿದ್ದರು.

ಈ ಇಬ್ಬರ ನಡುವಿನ ಈ ವೈಮನಸ್ಸು ಶಮನವಾಗುವುದೇ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.
.USA: ಡೊನಾಲ್ಡ್ ಟ್ರಂಪ್ ಆಡಳಿತದಿಂದ ಎಲಾನ್ ಮಸ್ಕ್ ನಿರ್ಗಮನ.ಭಾರತದಲ್ಲಿ ಸ್ಟಾರ್ಲಿಂಕ್: ಇಲಾನ್ ಮಸ್ಕ್ ಜೊತೆ ಪ್ರಧಾನಿ ಮೋದಿ ಮಾತುಕತೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.