ಫ್ಯಾಕ್ಟ್‌ಚೆಕ್| ಯೋಗಿ ಹಣೆಗೆ ಹಚ್ಚಿಕೊಂಡಿದ್ದು ಯೋಧನ ಚಿತೆಯ ಬೂದಿಯಲ್ಲ!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದತ್ಯನಾಥ ಅವರು ಇರುವ 29 ನಿಮಿಷಗಳ ವಿಡಿಯೊವೊಂದು ವೈರಲ್ ಆಗಿದೆ. ಆದಿತ್ಯನಾಥ ಅವರು ಬೂದಿಯನ್ನು ತಮ್ಮ ಹಣೆಗೆ ಹಚ್ಚಿಕೊಳ್ಳುವುದು ಮತ್ತು ಇತರರ ಹಣೆಗೆ ಹಚ್ಚುವುದು ವಿಡಿಯೊದಲ್ಲಿ ಸೆರೆ ಆಗಿದೆ. ಉತ್ತರ ಪ್ರದೇಶದ ಯೋಧರೊಬ್ಬರು ಹುತಾತ್ಮರಾದರು. ಯೋಧನನ್ನು ಸಂಸ್ಕಾರ ಮಾಡಿದ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳುವ ಮೂಲಕ ಯೋಧನಿಗೆ ಅವರು ಗೌರವ ತೋರಿದ್ದಾರೆ. ಯೋಗಿ ಅವರು ಬಹುದೊಡ್ಡ ಸಂತರು ಎಂಬ ಮಾಹಿತಿ ಜೊತೆಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ವಿಡಿಯೊ ಜೊತೆ ಹಂಚಿಕೊಳ್ಳುತ್ತಿರುವ ಮಾಹಿತಿಯು ಸುಳ್ಳು ಎಂದು ದಿ ಲಾಜಿಕಲ್ ಇಂಡಿಯನ್ ವೇದಿಕೆ ವರದಿ ಮಾಡಿದೆ. ಈ ವಿಡಿಯೊವನ್ನು ಪ್ರಾಚಿ ಸಾಧ್ವಿ ಅವರು ಟ್ವೀಟ್ ಮಾಡಿದ್ದಾರೆ. ‘ನಮ್ಮ ಸನಾತನ ಧರ್ಮದಲ್ಲಿ ಹೋಲಿಕಾ ದಹನದ ಬೂದಿಯನ್ನು ಹಣೆಗೆ ಹಚ್ಚಿದರೆ ದೇಹ ತಂಪಾಗುತ್ತದೆ’ ಎಂದು ಅವರು ವಿಡಿಯೊಗೆ ಅಡಿ ಬರಹ ನೀಡಿದ್ದಾರೆ. ಯೋಗಿ ಅವರು ಗೋರಖಪುರದಲ್ಲಿ ನರಸಿಂಹ ಉತ್ಸವದಲ್ಲಿ ಪಾಲ್ಗೊಂಡು ಬಳಿಕ ಹೋಲಿಕಾ ಬೂದಿಯನ್ನು ಹಣೆಗೆ ಹಚ್ಚಿಕೊಂಡಿದ್ದು ಪ್ರಮುಖ ಸುದ್ದಿ ವಾಹಿನಿಗಳಲ್ಲಿ 2022ರ ಮಾರ್ಚ್ 19ರಂದು ವರದಿ ಆಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.