ಭಾರತದಲ್ಲಿ ಹಕ್ಕಿಗಳು ಸಾಯುತ್ತಿರುವುದಕ್ಕೆ ಹಕ್ಕಿಜ್ವರಕ್ಕೆ ಬದಲಾಗಿ 5ಜಿ ಪ್ರಾಯೋಗಿಕ ಪರೀಕ್ಷೆ ಕಾರಣವೇ? ಹೀಗೊಂದು ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿದೆ. ರಿಲಯನ್ಸ್ ಜಿಯೋ ಸಂಸ್ಥೆಯು ದೇಶದಲ್ಲಿ 5ಜಿ ನೆಟ್‌ವರ್ಕ್ ಪ್ರಯೋಗ ನಡೆಸುತ್ತಿದ್ದು, ತೀವ್ರ ಮಟ್ಟದ ತರಂಗಾಂತರದ ಹೊಡೆತ ತಾಳದೆ ಪಕ್ಷಿಗಳು ಸಾಯುತ್ತಿವೆ ಎಂಬುದಾಗಿ ಟ್ವಿಟರ್, ಫೇಸ್‌ಬುಕ್‌ನಲ್ಲಿ ಚರ್ಚೆಯಾಗುತ್ತಿದೆ. ಕೆಲವು ಸುದ್ದಿ ಮಾಧ್ಯಮಗಳು ಕೂಡ ಈ ಸುದ್ದಿಯನ್ನು ಪ್ರಸಾರ ಮಾಡಿವೆ.

ಪಕ್ಷಿಗಳ ಸಾವಿನ ನಿಜವಾದ ಕಾರಣದ ಜಾಡು ಹಿಡಿದು ಹೊರಟ ‘ಲಾಜಿಕಲ್ ಇಂಡಿಯನ್ಸ್’ ವೆಬ್‌ಸೈಟ್, ಹಲವು ರೀತಿ ಪರಾಮರ್ಶೆ ನಡೆಸಿದೆ. ಜಿಯೊ ಸಂಸ್ಥೆಯು 5ಜಿ ಜಾಲ ಸ್ಥಾಪಿಸುವ ಘೋಷಣೆ ಮಾಡಿರುವುದು ನಿಜ. ಆದರೆ, 2021ರ ಉತ್ತರಾರ್ಧದಲ್ಲಿ ಅದಕ್ಕೆ ಸ್ಪಷ್ಟ ರೂಪ ಸಿಗಲಿದೆ. ಇನ್ನು, ಕೆಲವು ಪತ್ರಿಕೆ ಹಾಗೂ ವೆಬ್‌ಸೈಟ್‌ಗಳಲ್ಲಿ ಪ್ರಕಟವಾದ ಹಕ್ಕಿಗಳ ಸಾವಿನ ಚಿತ್ರಗಳನ್ನು ಪರಿಶೀಲಿಸಿದಾಗ, ಅದು ನೆದರ್ಲೆಂಡ್‌ನ ಹೇಗ್‌ನದ್ದು ಎಂಬುದು ತಿಳಿದುಬಂದಿದೆ. ಪಕ್ಷಿಗಳು 5ಜಿ ತರಂಗಾಂತರದಿಂದ ಮೃತಪಟ್ಟಿವೆ ಎಂಬುದನ್ನು ರಾಯಿಟರ್ಸ್ ಸುದ್ದಿಸಂಸ್ಥೆ ಅಲ್ಲಗಳೆದಿದೆ. ನೈಸರ್ಗಿಕ ವಿಷ ಸೇವಿಸಿ ಅವು ಮೃತಪಟ್ಟಿವೆ ಎಂದು ಮರಣೋತ್ತರ ಪರೀಕ್ಷಾ ವರದಿ ಆಧರಿಸಿ ವರದಿ ಮಾಡಿದೆ. ಹೀಗಾಗಿ ಪಕ್ಷಿಗಳ ಸಾವಿಗೂ, ಭಾರತಕ್ಕೂ, 5ಜಿ ನೆಟ್‌ವರ್ಕ್‌ಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.