‘ನಿಗಿನಿಗಿ ಉರಿಯುವ ಸೂರ್ಯನ ಒಂದು ಭಾಗ ತುಂಡಾಗಿದ್ದು, ಉತ್ತರ ಧ್ರುವ ಭಾಗದಲ್ಲಿ ಅದು ಸೂರ್ಯನಿಂದ ಬೇರ್ಪಟ್ಟಿದೆ’ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಕೆಲವು ಪ್ರಮುಖ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿ ಅಚ್ಚರಿ ಮೂಡಿಸಿತ್ತು. ಭಾರಿ ಪ್ರಮಾಣದ ಸೌರಜ್ವಾಲೆಗಳ ಕಾರಣ, ಭೂಮಿಯ ಸಂವಹನ ಉಪಗ್ರಹಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದೂ ವರದಿ ಮಾಡಿದ್ದವು. ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ಈ ಚಿತ್ರವನ್ನು ಸೆರೆಹಿಡಿದಿದೆ ಎಂದೂ ಬರೆಯಲಾಗಿತ್ತು. ಸೂರ್ಯನ ಭಾಗವೊಂದು ಬೇರ್ಪಡಲು ಸಾಧ್ಯವೇ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಚ್ಚರಿಪಟ್ಟಿದ್ದರು. ಆದರೆ ಈ ಸುದ್ದಿ ಸುಳ್ಳು.
ಹವಾಮಾನ ತಜ್ಞೆ ತಮಿತಾ ಸ್ಕೊವ್ ಎಂಬವರ ಟ್ವೀಟ್ ಆಧರಿಸಿ ಮಾಧ್ಯಮಗಳು ಪ್ರಕಟಿಸಿದ್ದ ಈ ಸುದ್ದಿ ಆಧಾರಹಿತ. ನಾಸಾ ಅಥವಾ ಜೇಮ್ಸ್ ವೆಬ್ ಟೆಲಿಸ್ಕೋಪ್ ಜಾಲತಾಣಗಳಲ್ಲಿ ಈ ಕುರಿತ ಯಾವುದೇ ಸುದ್ದಿ ಇಲ್ಲ. ಪಿಟಿಐ, ರಾಯಿಟರ್ಸ್ ಸೇರಿದಂತೆ ಯಾವ ಸುದ್ದಿ ಸಂಸ್ಥೆಯೂ ಈ ಸುದ್ದಿಯನ್ನು ಪ್ರಕಟಿಸಿಲ್ಲ. ತಮಿತಾ ಸ್ಕೊವ್ ಅವರ ಟ್ವೀಟ್ ಪರಿಶೀಲಿಸಿದಾಗ, ಪೆಟ್ರಾನ್ ಎಂಬ ಜಾಲತಾಣದಲ್ಲಿ ಅವರು ನೀಡಿರುವ ಸ್ಪಷ್ಟನೆಯ ಲಿಂಕ್ ಸಿಕ್ಕಿತು. ತಮ್ಮ ಟ್ವೀಟ್ ಅನ್ನು ಸುದ್ದಿಮಾಧ್ಯಮಗಳು ತಿರುಚಿ ಅತಿರಂಜಿತವಾಗಿ ಬರೆದಿವೆ ಎಂದು ಅವರು ಹೇಳಿದ್ದಾರೆ. ಇದೊಂದು ಸಹಜ ಸೌರವಿದ್ಯಮಾನ ಎಂದು ಅವರು ವಿವರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.