ಸೋಮವಾರ, ಜನವರಿ 25, 2021
17 °C

ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಪೋಸ್ಟರ್‌ ಏನು ಹೇಳುತ್ತಿದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪೈಕಿ ಒಬ್ಬರು ಹಿಡಿದಿರುವ ಪೋಸ್ಟರ್‌ ಸಂಲಚನ ಮೂಡಿಸಿದೆ. ಕಾಶ್ಮೀರ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಹೋರಾಟಗಾರರನ್ನು ಗೃಹಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತಿರುವ ಬರಹ ಈ ಪೋಸ್ಟರ್‌ನಲ್ಲಿ ಇದೆ. ಈ ಚಿತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಬಲಪಂಥೀಯ ಗುಂಪುಗಳು ಹೆಚ್ಚಾಗಿ ಷೇರ್ ಮಾಡುತ್ತಿವೆ.

ಈ ಚಿತ್ರದ ಬಗ್ಗೆ ಲಾಜಿಕಲ್ ಇಂಡಿಯನ್ ವೆಬ್‌ಸೈಟ್ ಸಂಶೋಧನೆ ನಡೆಸಿದೆ. ಚಿತ್ರವನ್ನು 2019ರಲ್ಲಿ ತೆಗೆಯಲಾಗಿದೆ. ಇದನ್ನು ಅಮೃತಸರ್‌ನ ದಾಲ್ ಖಲ್ಸಾ ವಕ್ತಾರರು ಖಚಿತಪಡಿಸಿದ್ದಾರೆ. ಮಾವನ ಹಕ್ಕುಗಳಿಗಾಗಿ ಜಾಥಾ ನಡೆಸಲು ತಾವು ಸಿದ್ಧತೆ ನಡೆಸಿದ್ದಾಗಿ ಅಂಗದ್ ಸಿಂಗ್ ಎಂಬುವರು ಸ್ಪಷ್ಟಪಡಿಸಿದ್ದಾರೆ. ಆದರೆ ರೈತರು ಹುರಿಯತ್ ನಾಯಕರನ್ನು ಬಿಡುಗಡೆ ಮಾಡಲು ಆಗ್ರಹಿಸುತ್ತಿದ್ದಾರೆ ಎಂಬುದಾಗಿ ಹಳೆಯ ಚಿತ್ರವನ್ನು ಇಟ್ಟುಕೊಂಡು ಬಿಂಬಿಸಲಾಗುತ್ತಿದೆ ಎಂದು ವೆಬ್‌ಸೈಟ್ ಸ್ಪಷ್ಟನೆ ನೀಡಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು