ಸೋಮವಾರ, ಆಗಸ್ಟ್ 8, 2022
22 °C

Fact check: ಸ್ಮಾರ್ಟ್‌ವಾಚ್ ಸ್ಕ್ಯಾನಿಂಗ್ ಬಳಸಿ ಫಾಸ್ಟ್ಯಾಗ್ ಹಣ ಲೂಟಿ ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರಿನ ಗ್ಲಾಸ್ ಸ್ವಚ್ಛ ಮಾಡುತ್ತಿದ್ದ ಬಾಲಕನೊಬ್ಬ ತನ್ನ ಕೈಯಲ್ಲಿದ್ದ ಆ್ಯಪಲ್ ಸ್ಮಾರ್ಟ್‌ವಾಚ್ ಮೂಲಕ ಪೇಟಿಎಂ ಫಾಸ್ಟ್ಯಾಗ್ ಸ್ಟಿಕ್ಕರ್ ಅನ್ನು ಸ್ಕ್ಯಾನ್ ಮಾಡಿ ಚಾಲಕನ ಖಾತೆಯಿಂದ ಹಣ ದೋಚುತ್ತಿರುವಂತೆ ಕಾಣುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೈರಲ್ ಆಗುತ್ತಿರುವ ವಿಡಿಯೊ ಕುರಿತಂತೆ ಸ್ಪಷ್ಟನೆ ನೀಡಿರುವ ಪೇಟಿಎಂ ಸಂಸ್ಥೆ, ಆ ರೀತಿ ಯಾರೆಂದರೆ ಅವರು ಫಾಸ್ಟ್ಯಾಗ್ ಸ್ಕ್ಯಾನ್ ಮಾಡಿ ಹಣ ದೋಚುವ ಸಾಧ್ಯತೆಯನ್ನು ತಳ್ಳಿ ಹಾಕಿದೆ.

NETC ಮಾರ್ಗಸೂಚಿಗಳ ಪ್ರಕಾರ, ಟೋಲ್ ಮತ್ತು ಪಾರ್ಕಿಂಗ್ ಪ್ಲಾಜಾ ನಿರ್ವಾಹಕರು ಸೇರಿದಂತೆ ನೋಂದಾವಣೆ ಮಾಡಿಕೊಂಡ ಅಧಿಕೃತ ವ್ಯಾಪಾರಿಗಳು ಮಾತ್ರ ಅವರ ನಿಗದಿತ ಸ್ಥಳಗಳಲ್ಲಿ ಫಾಸ್ಟ್ಯಾಗ್ ಮೂಲಕ ಶುಲ್ಕ ಪಡೆಯಬಹುದಾಗಿದೆ. ಬಹು ಸುತ್ತಿನ ಪರೀಕ್ಷೆಯ ನಂತರವೇ ಫಾಸ್ಟ್‌ಟ್ಯಾಗ್ ಸೇವೆ ಆರಂಭಿಸಲಾಗಿದೆ ಎಂದು ಅದು ಹೇಳಿದೆ.

ಸ್ಮಾರ್ಟ್‌ವಾಚ್ ಸ್ಕ್ಯಾನಿಂಗ್ ಮೂಲಕ ಹಣ ದೋಚುತ್ತಿರುವಂತೆ ವಿಡಿಯೊದಲ್ಲಿ ಪೇಟಿಎಂ ಫಾಸ್ಟ್ಯಾಗ್ ಕುರಿತು ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. Paytm FASTag ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪೇಟಿಎಂ ಸಂಸ್ಥೆ ಟ್ವೀಟ್ ಮೂಲಕ ತಿಳಿಸಿದೆ. ನಕಲಿ ವಿಡಿಯೊವನ್ನು ಸಹ ಟ್ವೀಟ್ ಜೊತೆ ಹಂಚಿಕೊಂಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು