‘ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ರಸ್ತೆಬದಿಯ ಬಿರಿಯಾನಿ ಅಂಗಡಿಗಳಲ್ಲಿ ದೊರೆಯುವ ಬಿರಿಯಾನಿಗಳಲ್ಲಿ ಸಂತಾನ ಶಕ್ತಿ ಹರಣ ಔಷಧವನ್ನು ಬೆರೆಸಲಾಗುತ್ತದೆ’ ಎಂಬುದಾಗಿ ಟ್ವಿಟರ್‌ನಲ್ಲಿ ಚರ್ಚೆಯಾಗುತ್ತಿದೆ. ‘ಹಿಂದೂಗಳು ಅದರಲ್ಲೂ ಮದುವೆಯಾಗದ ಯುವಕರನ್ನು ಗುರಿಯಾಗಿಸಿ ಈ ಕೃತ್ಯ ಎಸಗಲಾಗುತ್ತಿದೆ. ಬಲಪಂಥೀಯ ಸಂಘಟನೆ ಕಾರ್ಯಕರ್ತ ಹಾಗೂ ಇಂದೂ ಮಕ್ಕಳ್ ಕಚ್ಚಿ ಸಂಸ್ಥಾಪಕ ಅರ್ಜುನ್ ಸಂಪತ್ ಅವರು ಈ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ’ ಎಂಬುದಾಗಿ ಚರ್ಚೆಯಾಗುತ್ತಿದೆ. 40 ಸಾವಿರಕ್ಕೂ ಹೆಚ್ಚು ಬಿರಿಯಾನಿ ಅಂಗಡಿಗಳು ಸ್ಥಳೀಯ ಆಹಾರ ಪದ್ಧತಿಯ ಮೇಲೆ ಸಾಂಸ್ಕೃತಿಕ ಭಯೋತ್ಪಾದನೆ ನಡೆಸುತ್ತಿವೆ ಎಂದು ಟ್ವಿಟರ್ ಬಳಕೆದಾರರು ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಚರ್ಚೆಯಾಗುತ್ತಿರುವ ಹಾಗೆ ಬಿರಿಯಾನಿಯಲ್ಲಿ ಸಂತಾನ ಶಕ್ತಿ ಹರಣ ಮಾತ್ರೆಗಳನ್ನು ಬೆರೆಸಲಾಗುತ್ತಿದೆ ಎಂಬ ಮಾಹಿತಿ ಸುಳ್ಳು ಎಂದು ಚೆನ್ನೈನ ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ಸ್ಪಷ್ಪಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ‘ಆರೋಪ ಕೇಳಿಬಂದ ಬಿರಿಯಾನಿ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿದ್ದೇವೆ. ನಗರದ ಯಾವುದೇ ರೆಸ್ಟೋರೆಂಟ್, ಹೋಟೆಲ್ ಅಥವಾ ಉಪಹಾರ ಮಂದಿರಗಳ ವಿರುದ್ಧ ಯಾರೂ ದೂರು ನೀಡಿಲ್ಲ. ಈ ವದಂತಿಯನ್ನು ನಂಬಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.