ಗುರುವಾರ , ಆಗಸ್ಟ್ 5, 2021
21 °C

Fact Check : ಇದು ರಾಜಾ ರವಿವರ್ಮ ಅವರ ಮೂಲ ಚಿತ್ರವೇ?

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ಅವರು ರಚಿಸಿದ್ದರು ಎನ್ನಲಾದ ನಟಿಯೊಬ್ಬರ ಕಲಾಕೃತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಜೊತೆಗೆ 16ನೇ ಶತಮಾನದ ಮೊನಾಲಿಸಾ ಚಿತ್ರದೊಂದಿಗೆ ರವಿವರ್ಮ ಅವರ ಚಿತ್ರವನ್ನು ಕೊಲಾಜ್ ಮಾಡಲಾಗಿದೆ. ಈ ಎರಡೂ ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ‘ಎರಡೂ ಚಿತ್ರಗಳನ್ನು ಗಮನಿಸಿ. ಪ್ರಚಾರ ಲಾಬಿಗಳು ಹೇಗಿವೆ ಎಂಬುದರ ಕುರಿತು ಯೋಚಿಸಿ’ ಎಂಬ ಉಲ್ಲೇಖ ಇವೆ.

ಈ ಚಿತ್ರವನ್ನು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ಪರಿಶೀಲಿಸಿದೆ. ಚಿತ್ರದ ಕೆಳಭಾಗದಲ್ಲಿ ಮಸುಕಾದ ರೂಪದಲ್ಲಿ ಶ್ರುವಂ ಸ್ಟುಡಿಯೋಸ್ ಎಂಬ ಬರಹ ಇದೆ. ಗೂಗಲ್ ರಿವರ್ಸ್ ಇಮೇಜ್ ಬಳಸಿ ಪರಿಶೀಲಿಸಿದಾಗ, ಇದು ಪಿಂಟರೆಸ್ಟ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿರುವುದು ಕಂಡುಬಂದಿದೆ. ಈ ಚಿತ್ರವು ರಾಜಾ ರವಿವರ್ಮ ಅವರ ಮೂಲ ಕಲಾಕೃತಿಯಲ್ಲ. ಈ ಚಿತ್ರವು ರವಿವರ್ಮ ಅವರ ಕಲಾಕೃತಿಯ ಮರುಸೃಷ್ಟಿ ಎಂಬುದು ದೃಢಪಟ್ಟಿದೆ. ಚಿತ್ರದ ಅಡಿಬರಹದಲ್ಲೂ ಮರುಸೃಷ್ಟಿಯ ಬಗ್ಗೆ ಉಲ್ಲೇಖಿಸಲಾಗಿದೆ. ಇದೇ ಚಿತ್ರವನ್ನು ದಕ್ಷಿಣ ಭಾರತದ ನಟಿ ಸ್ವಾತಿ ರೆಡ್ಡಿ ಅವರು 2019ರ ಜೂನ್ 16ರಂದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು