ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check| ಕ್ಯಾಡ್‌ಬರಿ ಚಾಕೊಲೆಟ್‌ನಲ್ಲಿ ದನದ ಮಾಂಸ ಬಳಕೆ ನಿಜವೇ?

ಅಕ್ಷರ ಗಾತ್ರ

ಬ್ರಿಟನ್‌ನ ಬಹುರಾ‌ಷ್ಟ್ರೀಯ ಕಂಪನಿ ಕ್ಯಾಡ್‌ಬರಿ ತಯಾರಿಸುವ ಡೈರಿ ಮಿಲ್ಕ್ ಹೆಸರಿನ ಚಾಕೊಲೆಟ್ ಸುಪ್ರಸಿದ್ಧ. ಆದರೆ ಈ ಚಾಕೊಲೆಟ್ ತಯಾರಿ ವೇಳೆ ದನದ ಮಾಂಸ ಬಳಸಲಾಗುತ್ತಿದೆ ಎಂಬುದಾಗಿ ಮಧು ಪೂರ್ಣಿಮಾ ಕಿಶ್ವಾರ್ ಎಂಬ ಮಹಿಳೆ ಮಾಡಿದ ಟ್ವೀಟ್ ಸಾಕಷ್ಟು ಸುದ್ದಿಯಾಗಿದೆ. ಅವರು ಬಳಸಿಕೊಂಡಿರುವ ಸ್ಕ್ರೀನ್‌ಶಾಟ್‌ನಲ್ಲಿ ಈ ಮಾಹಿತಿ ಇದೆ. ಸನಾತನ ಪರಂಪರೆಯಲ್ಲಿ ದನದ ಮಾಂಸ ಬಳಕೆಗೆ ನಿಷೇಧವಿದ್ದು, ಕ್ಯಾಡ್‌ಬರಿ ಸಂಸ್ಥೆಯು ಹಣ ಗಳಿಸುವ ಉದ್ದೇಶದಿಂದ ಈ ಯತ್ನಕ್ಕೆ ಕೈಹಾಕಿದೆ ಎಂದು ಜಾಲತಾಣ ಬಳಕೆದಾರರು ಕಿಡಿಕಾರಿದ್ದಾರೆ.

ಸ್ವತಃ ಕ್ಯಾಡ್‌ಬರಿ ಸಂಸ್ಥೆಯು ಮಧು ಅವರ ಟ್ವೀಟ್‌ಗೆ ಉತ್ತರ ನೀಡಿದೆ. ವೈರಲ್ ಆಗಿರುವ ಸ್ಕ್ರೀನ್‌ಶಾಟ್ ಭಾರತದ ಉತ್ಪನ್ನಗಳಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟನೆ ನೀಡಿದೆ. ಆಸ್ಟ್ರೇಲಿಯಾದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಸಂಬಂಧಿಸಿದ ಮಾಹಿತಿ ಅದಾಗಿದ್ದು, ಭಾರತದಲ್ಲಿ ಸಸ್ಯಜನ್ಯ ಉತ್ಪನ್ನಗಳನ್ನು ಮಾತ್ರ ಬಳಸಿ ಚಾಕೊಲೆಟ್ ತಯಾರಿಸಲಾಗುತ್ತದೆ ಎಂದು ತಿಳಿಸಿದೆ. ಭಾರತೀಯ ಆಹಾರ ಗುಣಮಟ್ಟ ಪ್ರಾಧಿಕಾರವು ಹಸಿರು ಚುಕ್ಕೆಯ ಪ್ರಮಾಣಪತ್ರ ನೀಡಿದ್ದು, ಅದು ಶಾಖಾಹಾರಕ್ಕೆ ಸಂಬಂಧಿಸಿದೆ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT