ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್: ಕೋವಿಡ್ ಲಸಿಕೆ ಪಡೆದವರು ಎರಡು ವರ್ಷದ ಬಳಿಕ ಮೃತಪಡುವರೇ?

Last Updated 27 ಮೇ 2021, 19:30 IST
ಅಕ್ಷರ ಗಾತ್ರ

ಫ್ರಾನ್ಸ್‌ನ ನೊಬೆಲ್ ಪುರಸ್ಕೃತ ವಿಜ್ಞಾನಿ ಲುಚ್‌ ಮೊಂಟಾನಿಯೆರ್‌ ಅವರು ಲಸಿಕೆ ಕುರಿತು ಹೇಳಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿದೆ. ‘ಕೋವಿಡ್ ತಡೆ ಲಸಿಕೆ ಪಡೆದವರು ಎರಡು ವರ್ಷ ಮಾತ್ರ ಬದುಕುತ್ತಾರೆ. ಅದಕ್ಕಿಂತ ಹೆಚ್ಚು ದಿನ ಬದುಕಲಾರರು. ಲಸಿಕೆಯಿಂದ ವೈರಾಣು ರೂಪಾಂತರಗೊಳ್ಳುತ್ತವೆ. ಎಲ್ಲರಿಗೂ ಲಸಿಕೆ ಹಾಕುವುದು ಕ್ಷಮಿಸಲಾರದ ತಪ್ಪು’ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣ ಬಳಕೆದಾರರು ಚರ್ಚಿಸುತ್ತಿದ್ದಾರೆ.

ಲುಚ್‌ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೊವನ್ನು ಪ್ರಸಾರ ಮಾಡಿರುವಆರ್‌ಎಐಆರ್ ಫೌಂಡೇಷನ್, ಲುಚ್‌ ಅವರ ಮಾತುಗಳನ್ನು ಆಧರಿಸಿದ ವರದಿಯನ್ನು ಪ್ರಕಟಿಸಿದೆ. ಆದರೆ ವರದಿಯಲ್ಲಿ ಎಲ್ಲಿಯೂ ‘ಲಸಿಕೆ ಹಾಕಿಸಿಕೊಂಡವರು 2 ವರ್ಷಗಳಲ್ಲಿ ಸಾಯುತ್ತಾರೆ’ ಎಂದು ಉಲ್ಲೇಖಿಸಿಲ್ಲ ಎಂದು ಆಲ್ಟ್ ನ್ಯೂಸ್ ಹಾಗೂ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆಗಳು ಸ್ಪಷ್ಟಪಡಿಸಿವೆ. ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ಕೂಡ ಲುಚ್‌ ಅವರ ಹೇಳಿಕೆಯನ್ನಾಧರಿಸಿ ಓಡಾಡುತ್ತಿರುವ ಪೋಸ್ಟರ್ ತಪ್ಪು ಮಾಹಿತಿ ಹೊಂದಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT