ಶುಕ್ರವಾರ, ಸೆಪ್ಟೆಂಬರ್ 24, 2021
24 °C

Fact Check: ಕೇಂದ್ರ ಸರ್ಕಾರ ‘ಲಾಡಲೀ ಲಕ್ಷ್ಮೀ ಯೊಜನೆ’ ಕಾರ್ಯಕ್ರಮ ಆರಂಭಿಸಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೇಂದ್ರ ಸರ್ಕಾರವು ಬಾಲಕಿಯರ ಶ್ರೇಯೋಭಿವೃದ್ಧಿಗಾಗಿ ‘ಲಾಡಲೀ ಲಕ್ಷ್ಮೀ ಯೊಜನೆ’ ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಯೋಜನೆಯ ಅಡಿ ಬಾಲಕಿಯರಿಗೆ ಕೇಂದ್ರ ಸರ್ಕಾರವು ₹ 1.60 ಲಕ್ಷವನ್ನು ನೀಡಲಿದೆ. ಈ ಹಣವನ್ನು ಬಾಲಕಿಯರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಿದೆ. ಈ ವಿಡಿಯೊ ಕೆಳಗೆ ನೀಡಲಾದ ಲಿಂಕ್‌ ಅನ್ನು ಕ್ಲಿಕ್ ಮಾಡಿ, ನೋಂದಾಯಿಸಿಕೊಳ್ಳಿ. ಇದಕ್ಕಾಗಿ ಈ ವಿಡಿಯೊದಲ್ಲಿ ನೀಡಲಾಗಿರುವ ಲಿಂಕ್‌ನಲ್ಲಿ ನಿಮ್ಮ ವೈಯಕ್ತಿಕ ವಿವರ ನೀಡಿ ಮತ್ತು ₹ 2,000 ನೋಂದಣಿ ಶುಲ್ಕ ಪಾವತಿಸಿ’ ಎಂಬ ವಿವರ ಇರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ಲಿಂಕ್‌ ಅನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ.

‘ಈ ವಿಡಿಯೊದಲ್ಲಿ ಇರುವ ವಿವರ ಸುಳ್ಳು. ಕೇಂದ್ರ ಸರ್ಕಾರವು ಇಂತಹ ಯಾವುದೇ ಕಾರ್ಯಕ್ರಮವನ್ನು ಆರಂಭಿಸಿಲ್ಲ. ಯಾವುದೇ ಯೋಜನೆ ಅಡಿ ಬಾಲಕಿಯರಿಗೆ ₹ 1.60 ಲಕ್ಷ ನಗದು ವರ್ಗಾವಣೆ ಮಾಡುತ್ತಿಲ್ಲ. ಈ ವಿಡಿಯೊದಲ್ಲಿ ನೀಡಲಾಗಿರುವ ಲಿಂಕ್‌ನಲ್ಲಿ ಯಾವುದೇ ಮಾಹಿತಿ ನೀಡಬೇಡಿ ಮತ್ತು ಹಣ ವರ್ಗಾವಣೆ ಮಾಡಬೇಡಿ. ಇದೊಂದು ಮೋಸದ ಜಾಲವಾಗಿದ್ದು, ಬಲೆಗೆ ಬೀಳಬೇಡಿ. ಈ ವಿಡಿಯೊ ಹಂಚಿಕೊಂಡವರ ಜತೆಯೂ ಈ ಮಾಹಿತಿ ಹಂಚಿಕೊಳ್ಳಿ. ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಿ’ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು