ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್ | ಟೂಲ್‌ಕಿಟ್‌ ಪ್ರಕರಣ: ಬಂಧಿತ ಆರೋಪಿ ದಿಶಾ ಕ್ರೈಸ್ತ ಧರ್ಮದವರೇ?

Last Updated 18 ಫೆಬ್ರುವರಿ 2021, 3:16 IST
ಅಕ್ಷರ ಗಾತ್ರ

ರೈತರ ಹೋರಾಟದ ‘ಟೂಲ್‌ಕಿಟ್’ ರೂಪಿಸಿದ ಆರೋಪದಲ್ಲಿ ಬಂಧಿತರಾಗಿರುವ ದಿಶಾ ರವಿ ಅವರ ಪೂರ್ಣ ಹೆಸರು ದಿಶಾ ರವಿ ಜೋಸೆಫ್. ಕ್ರೈಸ್ತ ಧರ್ಮದವರಾದ ದಿಶಾ ರವಿ ಜೋಸೆಫ್ ಕೇರಳದಲ್ಲಿ ನೆಲೆಸಿದ್ದಾರೆ. ಕ್ರೈಸ್ತ ಧರ್ಮವು ಹಿಂದೂ ಧರ್ಮಕ್ಕೆ ಅಪಾಯಕಾರಿ.

ದಿಶಾ ರವಿ ಕ್ರೈಸ್ತೆ ಆಗಿರುವುದರಿಂದಲೇ ಎಲ್ಲಾ ರಾಷ್ಟ್ರವಿರೋಧಿ ಶಕ್ತಿಗಳು, ಅವರ ಬೆಂಬಲಕ್ಕೆ ಬಂದಿವೆ ಎಂಬ ವಿವರ ಇರುವ ಪೋಸ್ಟ್‌ಗಳು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿವೆ. #DishaRaviJoseph ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ. ಕ್ರೈಸ್ತರು ಭಾರತವನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಟೂಲ್‌ಕಿಟ್ ರೂಪಿಸಿದ ಆರೋಪದಲ್ಲಿ ಬಂಧಿತರಾಗಿರುವ ದಿಶಾ ರವಿ ಅವರು ಕ್ರಿಶ್ಚಿಯನ್ ಅಲ್ಲ ಎಂದು ಲಾಜಿಕಲ್ ಇಂಡಿಯನ್, ಆಲ್ಟ್‌ನ್ಯೂಸ್ ಮತ್ತು ಇಂಡಿಯಾ ಟುಡೆ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಫ್ರೈಡೆ ಫಾರ್ ಫ್ಯೂಚರ್ ಹೆಸರಿನಲ್ಲಿ ದಿಶಾ ರವಿ ಅವರು ನಡೆಸುತ್ತಿದ್ದ ಪ್ರತಿಭಟನೆಯ ಬಗ್ಗೆ 2019ರ ಡಿಸೆಂಬರ್‌ನಲ್ಲಿ 'ಸಿಟಿಝನ್ ಮ್ಯಾಟರ್ಸ್‌' ವೇದಿಕೆಯು ಲೇಖನ ಪ್ರಕಟಿಸಿತ್ತು. ಅದರಲ್ಲಿ ದಿಶಾ ಅವರ ಪೂರ್ಣ ಹೆಸರು, ದಿಶಾ ಅಣ್ಣಪ್ಪ ರವಿ ಎಂದು ಬರೆಯಲಾಗಿದೆ. ದಿಶಾ ಅವರ ತಂದೆಯ ಹೆಸರು ಅಣ್ಣಪ್ಪ ರವಿ. ದಿಶಾ ಅವರು ಲಿಂಗಾಯಿತ ಜಾತಿಯವರಾಗಿದ್ದು, ತುಮಕೂರು ಜಿಲ್ಲೆಯ ತಿಪಟೂರಿನವರು ಎಂದು ವರದಿಯಲ್ಲಿ ಮಾಹಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT