ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಿಂದರ್ ಸಿಂಗ್ ಬಗ್ಗಾ ಅವರು ಯೋಧರ ಸೋಗಿನಲ್ಲಿ ಮೋದಿ ಕಾರ್ಯಕ್ರಮದಲ್ಲಿ ಭಾಗಿ?

Last Updated 21 ಜುಲೈ 2020, 1:15 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲೇಹ್‌ನ ಆಸ್ಪತ್ರೆಯಲ್ಲಿ ಗಾಯಾಳು ಸೈನಿಕರನ್ನು ಭೇಟಿಯಾಗಿದ್ದರು. ಈ ವೇಳೆ ಬಿಜೆಪಿ ಮುಖಂಡ ತೇಜಿಂದರ್ ಸಿಂಗ್ ಬಗ್ಗಾ ಅವರು ಗಾಯಾಳು ಸೈನಿಕರ ರೀತಿ ಆಸ್ಪತ್ರೆಯಲ್ಲಿ ಕುಳಿತುಕೊಂಡಿದ್ದರು ಎನ್ನಲಾದ ಚಿತ್ರ ಎಲ್ಲೆಡೆ ವೈರಲ್ ಆಗಿತ್ತು. ಬಗ್ಗಾ ಅವರು ಯೋಧರ ಸೋಗಿನಲ್ಲಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಕೆಲ ಟ್ವಿಟರಿಗರು ಆರೋಪಿಸಿದ್ದರು. ಬಗ್ಗಾ ಅವರು ಧರಿಸಿರುವ ಕಡಗವೇ ಇದಕ್ಕೆ ಸಾಕ್ಷಿ ಎಂದು ಚಿತ್ರಸಮೇತ ಹೋಲಿಕೆ ಮಾಡಿ ಪ್ರಕಟಿಸಿದ್ದರು.

ಈ ಕುರಿತು ‘ಲಾಜಿಕಲ್ ಇಂಡಿಯನ್ಸ್’ ವೆಬ್‌ಸೈಟ್ ಶೋಧ ನಡೆಸಿದೆ. ಚಿತ್ರದಲ್ಲಿರುವುದು ಬಗ್ಗಾ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ತೇಜಿಂದರ್ ಸಿಂಗ್ ಬಗ್ಗಾ ಅವರೇ ಆರೋಪವನ್ನು ಅಲ್ಲಗಳೆದಿದ್ದಾರೆ.‘ಸಿಖ್ ಧರ್ಮ ಹಾಗೂ ಗುರು ಗೋವಿಂದ ಸಿಂಗ್ ಅವರಲ್ಲಿ ನಂಬಿಕೆ ಇರಿಸಿಕೊಂಡಿರುವ ಎಲ್ಲರೂ ಕಡಗ ಧರಿಸುತ್ತಾರೆ. ನಾನು ಲೇಹ್‌ಗೆ ಹೋಗಿಯೇ ಇಲ್ಲ. ಚಿತ್ರದಲ್ಲಿರುವುದು ನಾನಲ್ಲ’ ಎಂದು ಟ್ವಿಟರ್‌ನಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT