ಯಶವಂತಪುರ ಮಟ್ರೊ ರೈಲ್ವೆ ಸ್ಟೇಷನ್‌ನಿಂದ ಕೊಂಚ ದೂರದಲ್ಲಿರುವ ‘ವಿನಸ್’ ಅಪ್ಪಟ ಸಾರ್ವಜನಿಕ ಮನೆ! ಕನ್‌ಫ್ಯೂಸ್ ಆಯ್ತಾ? ಇದು ಒಂದು ಬಾರ್ ಅಂಡ್ ರೆಸ್ಟೊರೆಂಟ್. ಆದರೆ, ಎಲ್ಲ ಬಾರ್/ರೆಸ್ಟೊರೆಂಟ್ ತರಹದ್ದಲ್ಲ. ಇದು ಯುವಕರು, ಫ್ಯಾಮಿಲಿ, ಸೂದಿಂಗ್ ಸಂಜೆ ಕಳೆಯ ಬಯಸುವ ಮಾಗಿದ ಜೀವಗಳಿಗೆ ರಿಲ್ಯಾಕ್ಸ್ ಆಗುವುದಕ್ಕೆ ನೆರವಾಗುವ ಒಂದು ಡೀಸೆಂಟ್ ಆದ ಬಾರ್.

ಪಬ್ ತರಹ ಬಿಯರ್ ಹೀರಲು ಪ್ರತ್ಯೇಕ ತಾಣದ ಜೊತೆಗೆ ಸ್ಟುಡಿಯೊ ಬಾರ್, ಬಾಲ್ಕನಿ ಸೆಕ್ಷನ್ ರೂಪಿಸಲಾಗಿದೆ. ಫ್ಯಾಮಿಲಿ ಸಮೇತ ಪಾರ್ಟಿ ಮಾಡುವುದಕ್ಕೆ ಸೂಕ್ತ ಬಾಲ್ಕನಿ ವ್ಯವಸ್ಥೆಯೂ ಇದೆ.

ಇದರ ಒಳಾಂಗಣ ವಿನ್ಯಾಸ ಹಳತು–ಹೊಸತರ ಸಂಗಮದಂತಿದೆ. ಪಬ್ ನೆನಪಿಸುವ ಸೆಕ್ಷನ್ ಹೆಚ್ಚು ಇಂಗ್ಲಿಷ್ ಸಂಸ್ಕೃತಿಯನ್ನು ಅಳವಡಿಸಿಕೊಂಡಂತಿದೆ. ಹಳೆಯ ಕಾಮಿಕ್ಸ್ ಕತೆಗಳ ಒಂದಷ್ಟು ಸಂಗ್ರಹ ಗೋಡೆಗಳನ್ನು ಅಲಂಕರಿಸಿವೆ. ಹಳೆಯ ವೆಸ್ಟರ್ನ್ ಮ್ಯುಸಿಕ್ ಅಲ್ಬಂಗಳ ಕವರ್ ಮೇಲಿನ ಚಿತ್ರಗಳು ಗೋಡೆ ಚಿತ್ತಾರವಾಗಿವೆ. ‘ಮ್ಯುಜಿಸಿಯನ್ಸ್ ಲಾಂಜ್’ ಕೂಡ ಪ್ರತ್ಯೇಕವಾಗಿ ರೂಪಿಸಲಾಗಿದೆ. ಇಲ್ಲಿ ಹಾಡುಗಳನ್ನು ಆಲಿಸುತ್ತ ಕೋಲ್ಡ್ ಮಗ್ ಬಿಯರ್ ಗಂಟಲಿಗಿಳಿಸಿಕೊಳ್ಳಬಹುದು.

ಓದಿನ ಅಭಿರುಚಿ ಉಳ್ಳವರಿಗಾಗಿ ಒಂದು ಪುಟ್ಟದಾದ ರೀಡಿಂಗ್ ಟೇಬಲ್ ಇದೆ. ದಿನಪತ್ರಿಕೆಗಳು, ಒಂದಷ್ಟು ಹಳೆಯ ಮ್ಯಾಗಜಿನ್‌ಗಳು, ಕಾಮಿಕ್ಸ್, ಪುಸ್ತಕಗಳಿವೆ. ಇನ್‌ಡೋರ್ ಗೇಮ್ಸ್ ಪ್ರಿಯರಿಗೆಂದು ಒಂದೆರಡು ಆಟಗಳ ವ್ಯವಸ್ಥೆ ಇದೆ. ಸಿಗರೇಟ್ ಪ್ರಿಯರಿಗೆಂದು ಪ್ರತ್ಯೇಕ ಸ್ಮೋಕಿಂಗ್ ಝೋನ್ ಇದೆ.

ಕೂರಲು ಸಾಧಾರಣ ಟೇಬಲ್ ಮತ್ತು ಕಬ್ಬಿಣದ ಹಳೆಯ ಕುರ್ಚಿಗಳು, ಪ್ರತಿ ಕುರ್ಚಿಯ ಮೇಲೆ ಪುಟ್ಟದೊಂದು ದಿಂಬು, ಮಕ್ಕಳಿಗೆ ಮತ್ತು ಬರ್ತಡೇ ಪಾರ್ಟಿಗಳಿಗಾಗಿ ಬಾಲ್ಕನಿ, ಸಾಫ್ಟ್ ಲೈಟ್‌ನಲ್ಲಿ ತೆಳು ಬಣ್ಣಗಳ ವಿನ್ಯಾಸ, ಗೋಡೆಗಳ ಮೇಲಿನ ಫೊಟೊಗಳು ಇಡೀ ವಾತಾವರಣವನ್ನು ಸೂದಿಂಗ್ ಮೂಡ್‌ಗಿಳಿಸುವಂತಿವೆ. ಸ್ನೇಹಿತರು, ಪರಿವಾರದ ಸಮೇತ ಒಂದು ಡೀಸೆಂಟ್ ಪಾರ್ಟಿ, ಭೋಜನಕೂಟಕ್ಕೆ ಆಪ್ತವಾದ ರೆಸ್ಟೊರೆಂಟ್. ಇದರ ಬೋರ್ಡ್‌ನಲ್ಲೇ ಪಬ್ಲಿಕ್ ಹೌಸ್ ಎನ್ನುವ ಪದವಿದೆ. ಹೌದು ಅದೇ ಹೇಳುವಂತೆ ಇಲ್ಲೊಂದು ಹೋಮ್ಲೀ ವಾತಾವರಣವಿದೆ.

ಸ್ಥಳ: ಎಪಿಎಂಸಿ ಯಾರ್ಡ್ ಯಶವಂತಪುರ, ಪುಣೆ–ಬೆಂಗಳೂರು ಹೆದ್ದಾರಿ. ಹತ್ತಿರದ ಮೆಟ್ರೊ ಸ್ಟಾಪ್– ಯಶವಂತಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.