ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಚಾಕಲೇಟ್ ದಿನ: ಆಚರಣೆ ಯಾಕೆ ಮತ್ತು ಯಾವಾಗ ಆರಂಭವಾಯಿತು?

ಅಕ್ಷರ ಗಾತ್ರ

ಬೆಂಗಳೂರು: ಚಾಕಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳು, ಹಿರಿಯರು ಹೀಗೆ ಎಲ್ಲ ವಯೋಮಾನದವರೂ ಇಷ್ಟಪಡುವ ಚಾಕಲೇಟ್‌ ಬಳಕೆಗೆ ಬಂದ ನೆನಪಿಗೆ ಜುಲೈ 7ರಂದು ವಿಶ್ವ ಚಾಕಲೇಟ್ ದಿನವನ್ನಾಗಿ ಆಚರಿಸಲಾಗುತ್ತದೆ.

ಯುರೋಪ್‌ನಲ್ಲಿ 1,550ರಲ್ಲಿ ಚಾಕಲೇಟ್ ಅನ್ನು ಬಳಕೆಗೆ ತೆರಲಾಯಿತು. ಆದರೆ ಅದಕ್ಕೂ ಬಹಳಷ್ಟು ವರ್ಷಗಳ ಮೊದಲೇ ಚಾಕಲೇಟ್ ಬಳಕೆಯಲ್ಲಿತ್ತು ಎನ್ನಲಾಗಿದೆ.

ಕ್ರಿಸ್ತಪೂರ್ವ 450 ಆರಂಭದ ದಿನಗಳಲ್ಲಿ ಚಾಕಲೇಟ್ ಒಂದು ಕಹಿಯಾದ ಪಾನೀಯವಾಗಿ ಮಾತ್ರ ಬಳಕೆಯಲ್ಲಿತ್ತು. ಇಂದು ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ, ರುಚಿ ಮತ್ತು ಗಾತ್ರದ ಚಾಕಲೇಟ್ ಲಭ್ಯವಿದೆ.

16ನೇ ಶತಮಾನದಲ್ಲಿ ಯುರೋಪ್‌ನಲ್ಲಿ ಚಾಕಲೇಟ್‌ಗೆ ಸಕ್ಕರೆ ಸೇರ್ಪಡೆ ಮಾಡಿದ ಬಳಿಕ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿತು. ನಂತರ 20ನೇ ಶತಮಾನದಲ್ಲಿ ಅಮೆರಿಕ ಸೈನ್ಯ, ಚಾಕಲೇಟ್ ಅನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರ್ಪಡೆ ಮಾಡಿತು. ಯುದ್ಧದ ಸಂದರ್ಭದಲ್ಲೂ ಸೈನಿಕರಿಗೆ ಚಾಕಲೇಟ್ ಪೂರೈಸಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT