ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌: ಬಗೆ ಬಗೆ ಕೇಕ್‌ ತಯಾರಿಸುವ ವಿಧಾನ ಹೇಗೆ ?

Last Updated 24 ಡಿಸೆಂಬರ್ 2021, 20:30 IST
ಅಕ್ಷರ ಗಾತ್ರ

ಟೂಟಿ ಫ್ರೂಟಿ ಕೇಕ್‌

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – ಒಂದೂವರೆ ಕಪ್‌, ಸಕ್ಕರೆಪುಡಿ – 1 ಕಪ್‌, ಗಟ್ಟಿ ಮೊಸರು – 1ಕಪ್‌, ಎಣ್ಣೆ – ಅರ್ಧ ಕಪ್‌, ಅಡುಗೆಸೋಡಾ – 1 ಚಮಚ, ವೆನಿಲಾ ಎಸೆನ್ಸ್‌ – 1 ಚಮಚ, ಉಪ್ಪು – ಚಿಟಿಕೆ.

ಟೂಟಿ ಫ್ರೂಟಿ ಮಿಶ್ರಣಕ್ಕೆ: ಟೂಟಿ ಫ್ರೂಟಿ – ಅರ್ಧ ಕಪ್‌, ಒಣದ್ರಾಕ್ಷಿ – ಸ್ವಲ್ಪ, ಗೋಡಂಬಿ – ಸ್ವಲ್ಪ, ಮೈದಾಹಿಟ್ಟು – 1 ಚಮಚ.

ತಯಾರಿಸುವ ವಿಧಾನ: ಬೌಲ್‌ವೊಂದರಲ್ಲಿ ಟೂಟಿ ಫ್ರೂಟಿ, ಒಣದ್ರಾಕ್ಷಿ ಹಾಗೂ ಗೋಡಂಬಿ ಹಾಕಿ. ಅದಕ್ಕೆ ಮೈದಾಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇನ್ನೊಂದು ಬೌಲ್‌ನಲ್ಲಿ ಮೊಸರು ಹಾಗೂ ಸಕ್ಕರೆ ಪುಡಿ ಸೇರಿಸಿ ಸಕ್ಕರೆ ಕರಗುವವರೆಗೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಅಡುಗೆ ಸೋಡಾ ಸೇರಿಸಿ ಐದು ನಿಮಿಷ ಬಿಡಿ. ನಂತರ ವೆನಿಲಾ ಎಸೆನ್ಸ್ ಹಾಗೂ ಮೈದಾಹಿಟ್ಟು ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಕಲೆಸಿ. ಈ ಮಿಶ್ರಣಕ್ಕೆ ಟೂಟಿ ಫ್ರೂಟಿ ಸೇರಿಸಿ. ಅದನ್ನು ಬೆಣ್ಣೆ ಸವರಿದ ಪ್ಯಾನ್‌ಗೆ ಸುರಿಯಿರಿ. ಅದನ್ನು ನಲವತ್ತು ನಿಮಿಷಗಳ ಕಾಲ ಬೇಯಿಸಿ. ಟೂಟಿ ಫ್ರೂಟಿ ಕೇಕ್‌ ಮಕ್ಕಳಿಗೆ ತಿನ್ನಲು ಇಷ್ಟವಾಗುತ್ತದೆ.

***

ಬಾಳೆಹಣ್ಣಿನ ಕೇಕ್‌

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – ಎರಡೂವರೆ ಕಪ್‌, ಅಡುಗೆ ಸೋಡಾ – 1 ಚಮಚ, ಉಪ್ಪು – ಚಿಟಿಕೆ, ಬೆಣ್ಣೆ – ಅರ್ಧ ಕಪ್‌, ಸಕ್ಕರೆ – 1 ಕಪ್‌, ಕಂದು ಬಣ್ಣದ ಸಕ್ಕರೆ – ಮುಕ್ಕಾಲು ಕಪ್‌, ಮೊಟ್ಟೆ – 2, ಕಳಿತ ಬಾಳೆಹಣ್ಣು – 4 (ನುಣ್ಣಗೆ ಮಾಡಿಕೊಳ್ಳಿ), ಮಜ್ಜಿಗೆ – ಮುಕ್ಕಾಲು, ವಾಲ್‌ನಟ್‌ – ಅರ್ಧ ಕಪ್‌

ತಯಾರಿಸುವ ವಿಧಾನ: ಕೇಕ್‌ ಪ್ಯಾನ್‌ಗೆ ಬೆಣ್ಣೆ ಸವರಿ ಇಡಿ. ಒಂದು ಬೌಲ್‌ನಲ್ಲಿ ಮೈದಾಹಿಟ್ಟು, ಅಡುಗೆಸೋಡಾ ಹಾಗೂ ಉಪ್ಪು ಸೇರಿಸಿ ಕಲೆಸಿ ಇಡಿ. ಇನ್ನೊಂದು ಅಗಲವಾದ ಬೌಲ್‌ನಲ್ಲಿ ಬೆಣ್ಣೆ, ಸಕ್ಕರೆ, ಕಂದು ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಮೊಟ್ಟೆ ಒಡೆದು ಹಾಕಿ. ಅದಕ್ಕೆ ಬಾಳೆಹಣ್ಣನ್ನು ಸೇರಿಸಿ. ನಂತರ ಮೊದಲೇ ತಯಾರಿಸಿಕೊಂಡ ಹಿಟ್ಟನ್ನು ಹಾಕಿ ಅದರ ಮೇಲೆ ಮಜ್ಜಿಗೆ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ವಾಲ್‌ನಟ್ ಸೇರಿಸಿ ಕಲೆಸಿ. ಅದನ್ನು ಪ್ಯಾನ್‌ಗೆ ಸುರಿಯಿರಿ. ಒವೆನ್‌ನಲ್ಲಿ 30 ನಿಮಿಷಗಳ ಕಾಲ ಬೇಯಿಸಿ. ಈಗ ನಿಮ್ಮ ಮುಂದೆ ರುಚಿಯಾದ ಬಾಳೆಹಣ್ಣಿನ ಕೇಕ್ ತಿನ್ನಲು ಸಿದ್ಧ.

***

ಮೊಟ್ಟೆ ರಹಿತ ಸ್ಪಾಂಜ್ ಕೇಕ್‌

ಬೇಕಾಗುವ ಸಾಮಗ್ರಿಗಳು: ಮೊಸರು – 1ಕಪ್‌, ಸಕ್ಕರೆ – 1/2 ಕಪ್‌, ವೆನಿಲಾ ಏಕ್ಸ್‌ಟ್ರ್ಯಾಕ್ಟ್‌ – 1 ಚಮಚ, ಎಣ್ಣೆ – 1 ಚಮಚ, ಅಡುಗೆ ಸೋಡಾ – 1 ಚಮಚ, ಮೈದಾಹಿಟ್ಟು – 2 ಕಪ್‌, ಹಾಲು – 3 ಚಮಚ

ತಯಾರಿಸುವ ವಿಧಾನ: ಒಂದು ಅಗಲವಾದ ಬೌಲ್‌ಗೆ ಮೊಸರು, ಸಕ್ಕರೆ ಹಾಗೂ ವೆನಿಲಾ ಏಕ್ಸ್‌ಟ್ರ್ಯಾಕ್ಟ್‌ ಹಾಕಿ ಸಕ್ಕರೆ ಕರಗುವವರೆಗೂ ಮಿಶ್ರಣ ಮಾಡಿ. ಅದಕ್ಕೆ ಅಡುಗೆಸೋಡಾ ಸೇರಿಸಿ ಚೆನ್ನಾಗಿ ಕಲೆಸಿ. ನಂತರ ಜರಡಿ ಹಿಡಿದ ಮೈದಾಹಿಟ್ಟು ಸೇರಿಸಿ ಈ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ 3 ಚಮಚ ಹಾಲು ಸೇರಿಸಿ ಮತ್ತೆ ಚೆನ್ನಾಗಿ ಕಲೆಸಿ. ಅದನ್ನು ಎಣ್ಣೆ ಅಥವಾ ಬೆಣ್ಣೆ ಸವರಿದ ಪ್ಯಾನ್‌ಗೆ ಸುರಿದು ಒವೆನ್‌ನಲ್ಲಿ ಅರ್ಧ ಗಂಟೆ ಬೇಯಿಸಿ. ಒವೆನ್‌ ಇಲ್ಲದೇ ಇದ್ದವರು ಗ್ಯಾಸ್‌ ಮೇಲೆ ಪಾತ್ರೆಯಲ್ಲಿಟ್ಟು ಬೇಯಿಸಬಹುದು. ಆದರೆ ಗ್ಯಾಸ್‌ ಮೇಲೆ 45 ನಿಮಿಷಗಳವರೆಗೆ ಬೇಯಿಸಬೇಕಾಗುತ್ತದೆ. ಇದರ ಮೇಲೆ ನಿಮಗೆ ಬೇಕಾದ ಹಾಗೆ ಫ್ರಾಸ್ಟಿಂಗ್ ಮಾಡಿಕೊಳ್ಳಬಹುದು. ಫ್ರಾಸ್ಟಿಂಗ್ ಇಷ್ಟ ಇಲ್ಲದವರು ಹಾಗೆಯೇ ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT