ಸೌತೆಕಾಯಿ ತಿನ್ನಲು ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಸೌತೆಕಾಯಿಯಿಂದ ಕೋಸಂಬರಿ, ಪಲ್ಯ, ದೋಸೆ, ಸೇರಿ ಅನೇಕ ವಿಧದ ಖಾದ್ಯಗಳನ್ನು ತಯಾರಿಸುತ್ತೇವೆ. ನಾವಿಂದು ಬಹುಬೇಗನೆ ತಯಾರಿಸಬಹುದಾದ, ಆರೋಗ್ಯಕ್ಕೂ ಒಳಿತಾದ ‘ಸೌತೆಕಾಯಿ ಸಲಾಡ್’ ರೆಸಿಪಿ ಬಗ್ಗೆ ತಿಳಿಯೋಣ.

ಸೌತೆಕಾಯಿ ಸಲಾಡ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಸೌತೆಕಾಯಿ–3 ರಿಂದ4

ಈರುಳ್ಳಿ–1

ಟೊಮೆಟೊ–1

ತುರಿದ ಕ್ಯಾರೆಟ್–ಅರ್ಧ ಬಟ್ಟಲು

ಚಾಟ್ ಮಸಾಲ ಪುಡಿ– ಒಂದು ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಖಾರಾ ಸೇವ್– 1ಕಪ್

ಲಿಂಡು ರಸ– 2 ಚಮಚ

ಕೊತ್ತಂಬರಿ ಸೊಪ್ಪು

ಬಿಡಿಸಿಕೊಂಡ ದಾಳಿಂಬೆ ಹಣ್ಣು – ಅರ್ಧ ಕಪ್

ಮಾಡುವ ವಿಧಾನ:

ಸೌತೆಕಾಯಿಯನ್ನು ತೊಳೆದು ಸಿಪ್ಪೆ ತೆಗೆದುಕೊಳ್ಳಿ. ಬಳಿಕ ಅದರೊಳಗಿನ ತಿರುಳನ್ನು ಹೊರತೆಗೆಯಿರಿ.

ಒಂದು ಬಟ್ಟಲಿಗೆ ಕತ್ತರಿಸಿಕೊಂಡ ಈರುಳ್ಳಿ, ಟೊಮೆಟೊ, ತುರಿದ ಕ್ಯಾರೆಟ್, ಉಪ್ಪು, ಚಾಟ್ ಮಸಾಲ, ಲಿಂಬು ರಸ ಮಿಶ್ರಣ ಮಾಡಿಕೊಳ್ಳಿ.

ನಂತರ ತಿರುಳು ತೆಗೆದ ಸೌತೆಕಾಯಿಯ ಒಳಗೆ ಮಿಶ್ರಣವನ್ನು ಸೇರಿಸಿಕೊಳ್ಳಿ. ಬಳಿಕ ಅದರ ಮೇಲೆ ಖಾರಾ ಸೇವ್, ದಾಳಿಂಬೆ ಹಣ್ಣು ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಹೀಗೆ ಮಾಡಿದರೆ ಸೌತೆಕಾಯಿ ಸಲಾಡ್ ಸವಿಯಲು ಸಿದ್ಧ.

ಸೌತೆಕಾಯಿಯಿಂದ ಆರೋಗ್ಯಕ್ಕೆ ಹಲವು ಲಾಭ

ಸೌತೆಕಾಯಿ ಹೆಚ್ಚು ನೀರಿನಾಂಶ ಹೊಂದಿದ ತರಕಾರಿ. ದೇಹದಲ್ಲಿ ಉಂಟಾಗುವ ನಿರ್ಜಲೀಕರಣ ತಡೆಗೆ ಇದು ಉತ್ತಮ ಆಹಾರವಾಗಿದೆ. ಜತೆಗೆ ಜೀರ್ಣಕ್ರಿಯೆ ಉತ್ತಮವಾಗಿಸಲು, ದೇಹದ ತೂಕ ಇಳಿಸಲು ಸಹಕಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.