ಉಪ್ಪಿನಕಾಯಿಯಲ್ಲಿ ನಾನಾ ವಿಧಗಳಿವೆ. ಸಾಮಾನ್ಯವಾಗಿ ನಾವೆಲ್ಲಾ ನಿಂಬೆಹಣ್ಣಿನ ಉಪ್ಪಿನಕಾಯಿ, ಮಾವು, ನುಗ್ಗೆಕಾಯಿ, ದೊಡಲಿಕಾಯಿ, ಅಮಟೆಕಾಯಿ, ಕಳಲೆ, ಕ್ಯಾರೆಟ್, ಬೆಳ್ಳುಳಿ, ನೆಲ್ಲಿಕಾಯಿ ಹೀಗೆ ಅನೇಕ ಬಗೆಯ ಉಪ್ಪಿನಕಾಯಿಯನ್ನು ಮನೆಯಲ್ಲಿ ತಯಾರಿಸುತ್ತೇವೆ. ಆದರೆ ಇದು ಕೊಂಚ ವಿಭಿನ್ನ. ಅದುವೆ ಚಿಕನ್ ಉಪ್ಪಿನಕಾಯಿ.

ಚಿಕನ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ನಾಲಿಗೆಗೆ ರುಚಿ ಕೊಡಲು ಚಿಕನ್ ಉಪ್ಪಿನಕಾಯಿಯನ್ನು ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ತಿಳಿಯಿರಿ.
.ರೆಸಿಪಿ | ಮನೆಯಲ್ಲಿಯೇ ಹೋಟೆಲ್ ಶೈಲಿಯ ಸಿಗಡಿ ಫ್ರೈ ಮಾಡಿ ಸವಿಯಿರಿ.ರೆಸಿಪಿ | ಗ್ರೀನ್ ಮಸಾಲಾ ಚಿಕನ್ ಫ್ರೈ: ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ.
ಚಿಕನ್ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಾಗ್ರಿಗಳು:

ಚಿಕನ್, ಉಪ್ಪು, ಅರಿಶಿನ, ಮೆಣಸಿನ ಪುಡಿ, ಬೆಳ್ಳುಳ್ಳಿ, ಅಡುಗೆ ಎಣ್ಣೆ, ಸಾಸಿವೆ, ಮೆಂತ್ಯ ಕಾಳು, ಕರಿಬೇವಿನ ಎಲೆ ಹಾಗೂ ವಿನೆಗರ್

ಮಾಡುವ ವಿಧಾನ:

ಮೊದಲು ಚಿಕನ್ ಅನ್ನು ನೀರಿನಲ್ಲಿ ಸ್ವಚ್ಛಗೊಳಿಸಿ ಸಣ್ಣ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ನಂತರ ಚಿಕನ್ ತುಂಡುಗಳನ್ನು ಎಣ್ಣೆಯಲ್ಲಿ ಕರೆಯಿರಿ. ಬಳಿಕ ಹುರಿದ ಚಿಕನ್ ತುಂಡುಗಳನ್ನು ಅರಿಶಿನ, ಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಮ್ಯಾರಿನೇಟ್ ಮಾಡಿ 1 ಗಂಟೆಯವರೆಗೆ ಹಾಗೇ ಇಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಬ್ರೌನ್ ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ.

ಅದೇ ಬಾಣಲೆಯಲ್ಲಿ ಎಣ್ಣೆಗೆ ಸಾಸಿವೆ, ಮೆಂತ್ಯ, ಕರಿಬೇವಿನ ಎಲೆ ಸೇರಿಸಿ, ಸಾಸಿವೆ ಸಿಡಿಯಲು ಬಿಡಿ. ಅದರಲ್ಲೇ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಪರಿಮಳ ಬರುವವರೆಗೆ ಹುರಿಯಿರಿ. ನಂತರ ಚಿಕನ್ ಉಪ್ಪಿನಕಾಯಿ ಸಂಪೂರ್ಣವಾಗಿ ತಣ್ಣಗಾದ ಬಳಿಕವೇ ಗಾಳಿಯಾಡದ ಡಬ್ಬಿಗೆ ಹಾಕಿ. ಈ ಚಿಕನ್ ಉಪ್ಪಿನಕಾಯಿ 4ರಿಂದ 5 ತಿಂಗಳವರೆಗೆ ಸಂಗ್ರಹಿಸಿ ಇಡಬಹುದು. ಇದು ಅನ್ನ, ಮೊಸರನ್ನ, ಚಪಾತಿ, ರೊಟ್ಟಿ, ದೋಸೆ ಜೊತೆ ತುಂಬಾ ರುಚಿಕರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.