ಬಿರಿಯಾನಿ ಸಾವಿರಾರು ವರ್ಷಗಳಿಂದಲೂ ಭಾರತೀಯರ ಪ್ರಮುಖ ಆಹಾರಗಳಲ್ಲಿ ಒಂದಾಗಿದೆ. ದೇಶದ ನಾನಾ ಭಾಗಗಳಿಗೆ ಅನುಗುಣವಾಗಿ ಬಗೆ ಬಗೆಯ ಬಿರಿಯಾನಿ ಶೈಲಿಗಳಿವೆ. ಹಾಗಾದರೆ ಭಾರತದಲ್ಲಿ ಎಷ್ಟು ವಿಧಧ ಬಿರಿಯಾನಿಗಳಿವೆ ಎಂಬುದನ್ನು ನೋಡೋಣ ಬನ್ನಿ.

ಭಾರತದ ರಾಜ ಮನೆತನಗಳು ಅವರ ಪ್ರದೇಶಕ್ಕೆ ಅನುಗುಣವಾಗಿ ವಿಭಿನ್ನ ಹಾಗೂ ಸ್ವಾಧೀಷ್ಟವಾದ ಬಿರಿಯಾನಿಯನ್ನು ಪರಿಚಯಿಸಿವೆ. ಅವುಗಳ ಪ್ರಸ್ತುತ ದಿನಗಳಲ್ಲಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿವೆ.

ಹೈದಾರಬಾದ್ ಬಿರಿಯಾನಿ:

ಭಾರತೀಯ ಪಾಕಪದ್ಧತಿಯಲ್ಲಿ ಅತ್ಯಂತ ಜನಪ್ರಿಯ ಮಾಂಸಾಹಾರವೆಂದರೆ ಅದು ಹೈದಾರಬಾದ್ ಬಿರಿಯಾನಿ. ಇದನ್ನು ದಮ್ ಬಿರಿಯಾನಿ ಎಂತಲೂ ಕರೆಯಲಾಗುತ್ತದೆ. ಮಸಾಲೆ ಭರಿತ ಮಾಂಸ, ಬಾಸುಮತಿ ಅಕ್ಕಿ, ಮೊಸರು, ಬೆಳ್ಳುಳ್ಳಿ, ಶುಂಠಿ, ಪುದೀನಾ ಹಾಗೂ ಕೊತ್ತಂಬರಿ ಸೊಪ್ಪು ಮುಂತಾದವುಗಳನ್ನು ಹಾಕಿ ತಯಾರಿಸಲಾಗುತ್ತದೆ.

ಕೋಲ್ಕತ್ತಾ ಬಿರಿಯಾನಿ:

ಕೋಲ್ಕತ್ತಾ ಬಿರಿಯಾನಿ ಮೊಘಲ್ ಪಾಕ ಪದ್ಧತಿಯಲ್ಲಿ ಹುಟ್ಟಿಕೊಂಡಿತು. ಇದು ತನ್ನ ವಿಶಿಷ್ಟವಾದ ಸ್ವಲ್ಪ ಸಿಹಿ ರುಚಿ ಹಾಗೂ ಲಘು ಮಸಾಲೆ ಮಿಶ್ರಣಕ್ಕೆ ಹೆಸರುವಾಸಿಯಾಗಿದೆ. ಈ ಬಿರಿಯಾನಿಯನ್ನು ಪರಿಮಳಯುಕ್ತ ಬಾಸಮತಿ ಅಕ್ಕಿಯಿಂದ ತಯಾರು ಮಾಡಲಾಗುತ್ತದೆ. ಮಾಂಸ, ಮೊಟ್ಟೆ, ಒಣಗಿದ ಹಣ್ಣು ಹಾಗೂ ಆಲೂಗಡ್ಡೆಯನ್ನು ಸೇರಿಸಿ ತಯಾರಿಸಲಾಗುತ್ತದೆ.

ಅಂಬೂರ್ ಬಿರಿಯಾನಿ:

ತಮಿಳುನಾಡಿನ ವೆಲ್ಲೂರು ಜಿಲ್ಲೆ ಅಂಬೂರ್ ಬಿರಿಯಾನಿಗೆ ಪ್ರಸಿದ್ಧಿ ಪಡೆದಿದೆ. ಈ ಶೈಲಿಯ ಬಿರಿಯಾನಿ ನವಾಬಿ ಸಂಸ್ಕೃತಿಯಿಂದ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ತನ್ನ ವಿಶಿಷ್ಟವಾದ ರುಚಿ ಮತ್ತು ತಯಾರಿಕಾ ವಿಧಾನದಿಂದಾಗಿ ಭಾರತದಾದ್ಯಂತ ಪ್ರಸಿದ್ಧಿ ಪಡೆದಿದೆ. ವಿಶೇಷವಾಗಿ ಸೀರಾ ಸಾಂಬಾ ಅಕ್ಕಿ ಹಾಗೂ ಬದನೆಕಾಯಿ ಕರಿ ಬಳಸಿ ಅಂಬೂರ್ ಬಿರಿಯಾನಿಯನ್ನು ತಯಾರಿಸಲಾಗುತ್ತದೆ.

ಮಲಬಾರ್ ಬಿರಿಯಾನಿ:

ಕೇರಳದ ಮಲಬಾರ್ ಪ್ರದೇಶದ ವಿಭಿನ್ನವಾದ ಬಿರಿಯಾನಿಯ ಪ್ರಕಾರವಾಗಿದೆ. ಇದು ‘ಕಲ್ಲಡ್ಕ ರೈಸ್’ ಎಂಬ ವಿಶೇಷ ಬಾಸುಮತಿ ಅಕ್ಕಿಯನ್ನು ಬಳಸಿ ಮಲಬಾರ್ ಬಿರಿಯಾನಿಯನ್ನು ತಯಾರಿಸಲಾಗುತ್ತದೆ. ಕಡಿಮೆ ಮಸಾಲೆ ಜೊತೆಗೆ ಮಾಂಸ ಸೇರಿಸಿ ತಯಾರಿಸಲಾಗುತ್ತದೆ. ಜೊತೆಗೆ ತುಪ್ಪದಲ್ಲಿ ಉರಿದ ಗೋಡಂಬಿ ಹಾಗೂ ಒಣದ್ರಾಕ್ಷಿಗಳನ್ನು ಸೇರಿಸಲಾಗುತ್ತದೆ. ಸಮುದ್ರದ ಆಹಾರಗಳನ್ನು ಸೇರಿಸಿಯೂ ಈ ಬಿರಿಯಾನಿಯನ್ನು ತಯಾರು ಮಾಡುತ್ತಾರೆ.

ದಿಂಡುಗಲ್ ಬಿರಿಯಾನಿ:

ಸೀರಗ ಸಾಂಬಾ ಎಂಬ ಅಕ್ಕಿ ಬಳಸಿ ತಯಾರಿಸುವ ಜನಪ್ರಿಯ ಬಿರಿಯಾನಿ ಶೈಲಿಯಾಗಿದೆ. ತಮಿಳುನಾಡಿನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಈ ಬಿರಿಯಾನಿಯನ್ನು ಮಾಂಸ, ಮೊಸರು, ತರಕಾರಿ ಹಾಗೂ ಮಸಾಲೆಗಳಿಂದ ತಯಾರಿಸಲಾಗುತ್ತದೆ. ಗಾಢ ಕಂದು ಬಣ್ಣದಿಂದ ಕೂಡಿದ್ದು, ಮೆಣಸು ಮತ್ತು ನಿಂಬೆ ರಸದೊಂದಿಗೆ ಸೇವಿಸಬಹುದು.

ಲಖನೌ ಬಿರಿಯಾನಿ:

ಮೊಘಲರ ಕಾಲದ ಅವಾಧಿ ಶೈಲಿಯ ಪಾಕಪದ್ಧತಿಯ ಅತ್ಯಂತ ಪ್ರಸಿದ್ಧ ಖಾದ್ಯಗಳಲ್ಲಿ ಲಖನೌ ಬಿರಿಯಾನಿ ಒಂದಾಗಿದೆ. ಈ ಬಿರಿಯಾನಿಗೆ ರೋಸ್ ವಾಟರ್, ಕೇಸರಿ ಸುವಾಸನೆಯುಳ್ಳ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಹಚ್ಚು ಪ್ರಸಿದ್ಧಿ ಪಡೆದ ಬಿರಿಯಾನಿಯೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.