ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್, ಫ್ರೀಡಂ ರಿಫೈನ್ಡ್ ಸನ್ಫ್ಲವರ್ ಆಯಿಲ್ ಸಹಯೋಗದೊಂದಿಗೆ ‘ಕರುನಾಡ ಸವಿಯೂಟ’ ವಿಶೇಷ ಅಡುಗೆ ವಿಡಿಯೊ ಸರಣಿ ಕಾರ್ಯಕ್ರಮ ಆಯೋಜಿಸಿದೆ. ಈ ವಾರದ ವಿಡಿಯೊದಲ್ಲಿ ಸೆಲೆಬ್ರಿಟಿ ಬಾಣಸಿಗ ಸಿಹಿಕಹಿ ಚಂದ್ರು ರುಚಿಕರ ಬಿಸಿ ಬೇಳೆಬಾತ್ ಮತ್ತು ಮಸಾಲೆ ದೋಸೆ– ಆಲೂಗೆಡ್ಡೆ ಪಲ್ಯ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ. ವಿಡಿಯೊಗಾಗಿ ಬಿಟ್ಲಿ ಲಿಂಕ್: bit.ly/PVCuisines ನೋಡಿ.

ಬಿಸಿ ಬೇಳೆಬಾತ್
ಹಳೆ ಮೈಸೂರು ಭಾಗದ ಜನರು ಹೆಚ್ಚು ಇಷ್ಟಪಡುವ ಅನ್ನದ ಖಾದ್ಯ ಬಿಸಿ ಬೇಳೆಬಾತ್. ಅಕ್ಕಿ, ಬೇಳೆಯೊಂದಿಗೆ ವಿವಿಧ ಮಸಾಲೆಗಳನ್ನು ಸೇರಿಸಿ ಮಾಡುವ ಬಿಸಿ ಬೇಳೆಬಾತ್ ಖಾರಾ ಬೂಂದಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ. ಹೆಚ್ಚಾಗಿ ಬೆಳಗಿನ ತಿಂಡಿಗೆ ಮಾಡುವ ಈ ತಿನಿಸು ಮಧ್ಯಾಹ್ನದ ಊಟಕ್ಕೂ ಹೊಂದಿಕೊಳ್ಳುತ್ತದೆ.

ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಕಡಲೆಬೇಳೆ – 3 ಚಮಚ, ಉದ್ದಿನಬೇಳೆ – 3 ಚಮಚ, ಕೊತ್ತಂಬರಿ – 3 ಚಮಚ, ಗುಂಟೂರು ಮೆಣಸು – 4 ರಿಂದ 5, ಬ್ಯಾಡಗಿ ಮೆಣಸು – 8, ಮೆಂತ್ಯೆ – 1/2 ಟೀ ಚಮಚ, ಗಸಗಸೆ – 1/2 ಟೀ ಚಮಚ, ಚಕ್ಕೆ – ಸ್ವಲ್ಪ, ಲವಂಗ – 10, ಜೀರಿಗೆ – 1/2 ಚಮಚ, ಸಾಸಿವೆ – 1/2 ಚಮಚ, ಅರಿಸಿನ – ಚಿಟಿಕೆ, ಇಂಗು – ಚಿಟಿಕೆ

ತಯಾರಿಸುವ ವಿಧಾನ: ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಅದಕ್ಕೆ ಉದ್ದಿನಬೇಳೆ ಹಾಗೂ ಕಡಲೆಬೇಳೆ ಹಾಕಿ ಬಣ್ಣ ಬದಲಾಗುವವರೆಗೂ ಹುರಿಯಿರಿ. ಅದಕ್ಕೆ ಕೊತ್ತಂಬರಿ, ಚಕ್ಕೆ, ಲವಂಗ, ಗಸಗಸೆ ಹಾಗೂ ಮೆಂತ್ಯೆ ಹುರಿದು ತಣ್ಣಗಾಗಲು ಬಿಡಿ. ಅದೇ ಪಾತ್ರೆಗೆ ಗುಂಟೂರು ಮೆಣಸು, ಬ್ಯಾಡಗಿ ಮೆಣಸು, ಜೀರಿಗೆ ಸೇರಿಸಿ ಚಟಪಟ ಅನ್ನುವವರೆಗೆ ಹುರಿದುಕೊಂಡು ತಣ್ಣಗಾಗಲು ಬಿಡಿ. ಹುರಿದುಕೊಂಡ ಸಾಮಗ್ರಿಗೆ ಸ್ವಲ್ಪ ಅರಿಸಿನ ಹಾಗೂ ಇಂಗು ಸೇರಿಸಿ ಮಿಶ್ರಣ ಮಾಡಿ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಅನ್ನ ತಯಾರಿಸಿಕೊಳ್ಳಲು: ಅಕ್ಕಿ – 1 ಕಪ್ (ತೊಳೆದು ನೀರು ಬಸಿದುಕೊಂಡಿದ್ದು), ತೊಗರಿಬೇಳೆ – 1 ಕಪ್, ಮಿಶ್ರ ತರಕಾರಿಗಳು – 1 ಕಪ್, ಅರಿಸಿನ – ಚಿಟಿಕೆ, ತೆಂಗಿನತುರಿ – 1/2 ಕಪ್, ತುಪ್ಪ – 1 ಚಮಚ

ತಯಾರಿಸುವ ವಿಧಾನ: ಕುದಿಯುತ್ತಿರುವ ನೀರಿಗೆ ತರಕಾರಿ, ಅಕ್ಕಿ ಹಾಗೂ ಬೇಳೆ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಚಿಟಿಕೆ ಅರಿಸಿನ ಹಾಗೂ ಒಂದು ಚಮಚ ತುಪ್ಪ ಸೇರಿಸಿ ಮಿಶ್ರಣ ಮಾಡಿ ಒಂದು ಕುದಿ ಬರಿಸಿ, ಕುಕರ್ನಲ್ಲಿ 2 ವಿಶಲ್ ಕೂಗಿಸಿ. ಮಿಕ್ಸಿ ಜಾರಿಗೆ ಅರ್ಧ ಕಪ್ ತೆಂಗಿನತುರಿ ಹಾಗೂ ತಯಾರಿಸಿಕೊಂಡ ಬಿಸಿ ಬೇಳೆಬಾತ್ ಪುಡಿಯನ್ನು ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಕುಕರ್ನಲ್ಲಿರುವ ಅನ್ನದ ಮಿಶ್ರಣದೊಂದಿಗೆ ಮಿಕ್ಸಿಯಲ್ಲಿ ರುಬ್ಬಿಕೊಂಡು ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲೆಸಿ. ಮತ್ತೆ ಒಂದು ಚಮಚ ಬಿಸಿ ಬೇಳೆಬಾತ್ ಪುಡಿ ಸೇರಿಸಿ ಒಂದು ಕುದಿ ಬರಿಸಿ. ಈಗ ಪಾನ್ವೊಂದರಲ್ಲಿ 2 ಚಮಚ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿಕೊಂಡ ದೊಣ್ಣೆಮೆಣಸು ಹಾಗೂ ಟೊಮೆಟೊ ಸೇರಿಸಿ ಹುರಿಯಿರಿ. ಬಾಡಿದ ಮೇಲೆ ಬಿಸಿಬೇಳೆಬಾತ್ ಮಿಶ್ರಣಕ್ಕೆ ಸೇರಿಸಿ. ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಹಾಕಿ ಬಿಸಿಯಾದ ಮೇಲೆ ಚಿಟಿಕೆ ಇಂಗು, ಸಾಸಿವೆ, ಗೋಡಂಬಿ ಹಾಗೂ ಕರಿಬೇವು ಸೇರಿಸಿ ಒಗ್ಗರಣೆ ಮಾಡಿ ಬಿಸಿ ಬೇಳೆಬಾತ್ಗೆ ಸೇರಿಸಿ. ನಂತರ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಸೇರಿಸಿ. ಈಗ ನಿಮ್ಮ ಮುಂದೆ ರುಚಿಯಾದ ಬಿಸಿಬೇಳೆಬಾತ್ ತಿನ್ನಲು ಸಿದ್ಧ.

ಮಸಾಲೆ ದೋಸೆ

ಮಸಾಲೆ ದೋಸೆ
ಗರಿಗರಿಯಾದ ಮಸಾಲೆ ದೋಸೆ ಎಂದರೆ ಬಾಯಲ್ಲಿ ನೀರೂರುತ್ತದೆ. ಸಾಮಾನ್ಯವಾಗಿ ಕರ್ನಾಟಕದ ಎಲ್ಲಾ ಭಾಗದಲ್ಲೂ ಸಿಗುವ ಮಸಾಲೆದೋಸೆಯು ದೋಸೆಯ ವಿಧದಲ್ಲೇ ವಿಶೇಷ. ಆಲೂಗೆಡ್ಡೆ ಪಲ್ಯ, ಕೆಂಪುಮೆಣಸಿನ ಖಾರ ಸೇರಿಸಿರುವ ಮಸಾಲೆದೋಸೆಯನ್ನು ಬೇಡ ಎನ್ನುವವರು ಕಡಿಮೆ.

ದೋಸೆ ಹಿಟ್ಟು ತಯಾರಿಸಲು: ಅವಲಕ್ಕಿ – 1 ಕಪ್, ದೋಸೆ ಅಕ್ಕಿ – 1 ಕಪ್, ಉದ್ದಿನಬೇಳೆ – 1 ಕಪ್, ಕಡಲೆಬೇಳೆ –1/2 ಕಪ್, ಮೆಂತ್ಯೆ – 1 ಚಮಚ. ಉಪ್ಪು – ರುಚಿಗೆ.

ತಯಾರಿಸುವ ವಿಧಾನ: ಮೇಲೆ ಹೇಳಿದ ಸಾಮಗ್ರಿಗಳನ್ನು 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಹಿಟ್ಟನ್ನು 8 ರಿಂದ 10 ಗಂಟೆಗಳ ಕಾಲ ಹುದುಗು ಬರಲು ಬಿಡಿ.

ಕೆಂಪು ಚಟ್ನಿ ತಯಾರಿಸಲು: ಕೆಂಪು ಮೆಣಸು – 5 ರಿಂದ 6, ಬೆಳ್ಳುಳ್ಳಿ – 8 ಎಸಳು, ಹುರಿಗಡಲೆ – 1/4 ಕಪ್. ಕುದಿಯುತ್ತಿರುವ ನೀರಿಗೆ ಸಿಪ್ಪೆ ತೆಗೆದ ಬೆಳ್ಳುಳ್ಳಿ, ಕೆಂಪುಮೆಣಸು ಸೇರಿಸಿ. ನೀರು ಬಸಿದು ಮಿಕ್ಸಿಗೆ ಬೆಳ್ಳುಳ್ಳಿ, ಮೆಣಸು ಹಾಗೂ ಹುರಿಗಡಲೆ ಸೇರಿಸಿ ರುಬ್ಬಿಕೊಳ್ಳಿ.

ಆಲೂಗೆಡ್ಡೆ ಪಲ್ಯ ತಯಾರಿಸಿಕೊಳ್ಳಲು: ದಪ್ಪ ತಳದ ಪಾತ್ರೆಯೊಂದಕ್ಕೆ 2 ಚಮಚ ಬೆಣ್ಣೆ ಸೇರಿಸಿ ಬಿಸಿ ಮಾಡಿ. ಅದಕ್ಕೆ 1ಚಮಚ ಸಾಸಿವೆ, 5 ರಿಂದ 6 ಹಸಿಮೆಣಸು, 1 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಈರುಳ್ಳಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಸ್ವಲ್ಪ ಅರಿಸಿನಪುಡಿ, ಬೇಯಿಸಿ ಪುಡಿ ಮಾಡಿಕೊಂಡ ಎರಡು ಆಲೂಗೆಡ್ಡೆ, ಸ್ವಲ್ಪ ಹಾಲು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ.

ದೋಸೆ ತಯಾರಿಸುವ ವಿಧಾನ: ಅರ್ಧ ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು, 3 ಚಮಚ ಸಕ್ಕರೆ ಹಾಗೂ 2 ಚಮಚ ಅಕ್ಕಿಹಿಟ್ಟು ಸೇರಿಸಿ. ಇದನ್ನು ಮಿಶ್ರಣ ಮಾಡಿ ತಯಾರಿಸಿಟ್ಟುಕೊಂಡ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕಾವಲಿ ಬಿಸಿಯಾದ ಮೇಲೆ ಹಿಟ್ಟು ಹೊಯಿದು ಅದನ್ನು ಅಗಲಕ್ಕೆ ಹರಡಿ. ಅಲ್ಪ ಬೆಂದ ಮೇಲೆ ಅದರ ಮೇಲೆ ಕೆಂಪು ಚಟ್ನಿ ಲೇಪಿಸಿ. ದೋಸೆ ಗರಿಗರಿಯಾಗುತ್ತಿದ್ದಂತೆಯೇ ಅದರ ಮೇಲೆ ಆಲೂಗೆಡ್ಡೆ ಪಲ್ಯ ಹಾಕಿ ಮಡಚಿ. ತೆಂಗಿನಕಾಯಿ ಚಟ್ನಿಯೊಂದಿಗೆ ಮಸಾಲೆ ದೋಸೆ ತಿಂದರೆ ಸೊಗಸಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.