ಮಕರ ಸಂಕ್ರಾಂತಿ ಹಬ್ಬ ಈ ವರ್ಷ ಜನವರಿ 15ರಂದು ಬಂದಿದೆ. ಹೊಸ ವರ್ಷದ ಮೊದಲನೇ ಹಬ್ಬ ಹಾಗೂ ರೈತರಿಗೆ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬದಂದು ಗೃಹಿಣಿಯರು ಮನೆಯಲ್ಲಿ ಹೋಳಿಗೆ, ಚಜ್ಜಿ ರೊಟ್ಟಿ, ಸಿಹಿ ತಿಂಡಿಗಳು ಸೇರಿದಂತೆ ನಾನಾ ವಿಧದ ಅಡುಗೆಗಳನ್ನು ತಯಾರಿಸುತ್ತಾರೆ.

ಅದರಲ್ಲೂ ಈ ಸಂಕ್ರಾಂತಿ ಹಬ್ಬದಂದು ಮನೆಯಲ್ಲಿ ಗೃಹಿಣಿಯರು ವಿಶೇಷವಾಗಿ ಮಾಲ್ದಿಯನ್ನು ತಯಾರಿಸುತ್ತಾರೆ. ಈ ಖಾದ್ಯಕ್ಕೆ ಮಾದಲಿ, ಮಾಲ್ದಿ ಅಂತಲೂ ಕರೆಯುತ್ತಾರೆ. ಇದು ದೊಡ್ಡವರಿಂದ ಹಿಡಿದು ಚಿಕ್ಕಮಕ್ಕಳವರೆಗೂ ಇಷ್ಟಪಡುತ್ತಾರೆ. ಈ ಮಾಲ್ದಿಯನ್ನು ಮನೆಯಲ್ಲಿ ಹೇಗೆ ತಯಾರಿಸುತ್ತಾರೆ ಎಂದು ತಿಳಿಯೋಣ.
.ಮಕರ ಸಂಕ್ರಾಂತಿ: ನಾಡಿನ ಜನತೆಗೆ ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರ ಶುಭಾಶಯ.ಚಳಿಗಾಲದಲ್ಲಿ ಮಕ್ಕಳಿಗೆ ರುಚಿಕರವಾದ ಪರಾಠ ಹೀಗೆ ತಯಾರಿಸಿ.
ಮಾಲ್ದಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು:

ಗೋದಿ ಹಿಟ್ಟು, ಬಾಂಬೆ ರವೆ, ಬೆಲ್ಲ, ಏಲಕ್ಕಿ, ತುರಿದ ಒಣಕೊಬ್ಬರಿ, ಹುರಿದ ಗಸಗಸೆ, ಪುಟಾಣಿ, ಬಾದಾಮಿ ಗೋಡಂಬಿ ಮತ್ತು ತುಪ್ಪ.

ಮಾಲ್ದಿ ತಯಾರಿಸುವ ವಿಧಾನ:

ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಬಾಂಬೆ ರವೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಈ ಮಿಶ್ರಣ ತಣ್ಣಗಾದ ನಂತರ ಗೋಧಿ ಹಿಟ್ಟು ಹಾಗೂ ಬಾಂಬೆ ರವೆ ಜೊತೆಗೆ ಉಪ್ಪು ಸೇರಿಸಿ ಕಲಸಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಚಪಾತಿಯ ಹಿಟ್ಟಿನ ಹದಕ್ಕೆ ಅನುಗುಣವಾಗಿ ನಾದಿಕೊಳ್ಳಿ. ಬಳಿಕ ಒಂದು ಮುಚ್ಚಳವನ್ನು ಮುಚ್ಚಿ ಹತ್ತು ನಿಮಿಷಗಳವರೆಗೆ ಹಾಗೆ ಬಿಡಿ.

ನಂತರ ಈ ಹಿಟ್ಟಿನಿಂದ ದಪ್ಪನೆಯ ಚಪಾತಿಯನ್ನು ತಯಾರಿಸಿಕೊಂಡು ಹಂಚಿನ ಮೇಲೆ ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೆ ಬೇಯಿಸಿಕೊಳ್ಳಿ. ನಂತರ ಬಿಸಿ ಚಪಾತಿಯನ್ನು ತುಂಡುಗಳಾಗಿ ಮಾಡಿಕೊಂಡು, ನಂತರ ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಬಳಿಕ ಈ ಮಿಶ್ರಣಕ್ಕೆ ಬೆಲ್ಲ, ಏಲಕ್ಕಿ, ತುರಿದ ಒಣಕೊಬ್ಬರಿ, ಪುಟಾಣಿ, ಹುರಿದ ಗಸಗಸೆ, ಬದಾಮಿ, ಗೋಡಂಬಿಯನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಕೊನೆಯಲ್ಲಿ ಮಾಲ್ದಿ ಮೇಲೆ ಒಂದು ಚಮಚ ತುಪ್ಪ ಹಾಕಿ. ಈಗ ಸಿಹಿಯಾದ ಮಾಲ್ದಿ ಖಾದ್ಯ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.