ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಈ ತಂಪಾದ ವಾತಾವರಣದಲ್ಲಿ ಬೆಚ್ಚಗಿನ ಅನುಭವ ಪಡೆಯಲು ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ ಎಂದು ಡೆಕ್ಕಾನ್ ಹೆರಾಲ್ಡ್ ವರದಿ ಮಾಡಿದೆ.
.ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕದ ತಾಲಿಪಟ್ಟು - ಕರುನಾಡ ಸವಿಯೂಟ.ಕರುನಾಡ ಸವಿಯೂಟ: ಹಳೆಯದಾದಷ್ಟೂ ಹೊಸ ರುಚಿ ಕೊಡುವ ನಾಟಿ ಕೋಳಿ ಬಸ್ಸಾರು.
ತುಕ್ಪಾ (Thukpa):

ಹಿಮಾಲಯ ಹಾಗೂ ಶೀತ ಪ್ರದೇಶದಲ್ಲಿರುವವರಿಗೆ ತುಕ್ಪಾ ಬೆಚ್ಚಗಿನ ಅನುಭವ ನೀಡುತ್ತದೆ. ಬೆಳ್ಳುಳ್ಳಿ, ಈರುಳ್ಳಿ, ಕ್ಯಾರೆಟ್, ಶುಂಠಿ ಸೇರಿದಂತೆ ಕೆಲವು ಬೇಯಿಸಿದ ತರಕಾರಿಗಳಿಂದ ತುಕ್ಪಾ ತಯಾರಿಸಲಾಗುತ್ತದೆ. ಇದರ ಜೊತೆಗೆ ನೂಡಲ್ಸ್ ಹಾಗೂ ಮಸಾಲೆಗಳನ್ನು ಸೇರಿಸಲಾಗುತ್ತದೆ.

ದೌಲತ್ ಕಿ ಚಾತ್ (Daulat ki Chaat):

ಭಾರತೀಯ ಸಿಹಿ ಖಾದ್ಯವಾಗಿರುವ ದೌಲತ್ ಕಿ ಚಾತ್ ಅನ್ನು ಒಮ್ಮೆಯಾದರೂ ಸೇವಿಸಬೇಕು. ಇದನ್ನು ಹಾಲಿನ ಕೆನೆ, ಕೇಸರಿ ಮತ್ತು ಪುಡಿ ಮಾಡಿದ ಸಕ್ಕರೆಯಿಂದ ತಯಾರಿಸಲಾಗುತ್ತದೆ. ದೌಲತ್ ಕಿ ಚಾತ್ ಮೃದುವಾಗಿದ್ದು, ‘ದೆಹಲಿ’ಯ ಪ್ರಸಿದ್ದ ಖಾದ್ಯವೂ ಆಗಿದೆ. ಚಳಿಗಾಲದಲ್ಲಿ ಮಾತ್ರ ಈ ಖಾದ್ಯ ದೊರೆಯುತ್ತದೆ.

ರಾಮ್ ಲಡ್ಡು (Ram Laddu):

‘ದೆಹಲಿ’ಯ ಪ್ರಸಿದ್ಧ ಖಾದ್ಯವಾಗಿರುವ ರಾಮ್ ಲಡ್ಡು, ಕಡಲೆ ಬೇಳೆಯಿಂದ ತಯಾರಿಸಿದ ವಡೆ. ಇದನ್ನು ಚಟ್ನಿ ಹಾಗೂ ತುರಿದ ಮೂಲಂಗಿಯೊಂದಿಗೆ ಸೇವಿಸಿದರೆ ಉತ್ತಮ. ಚಪಾತಿ, ಪರೋಟಾ ಇತರ ಭಾರತೀಯ ಭಕ್ಷ್ಯಗಳೊಂದಿಗೆ ರಾಮ್ ಲಡ್ಡು ಅನ್ನು ಸೇವಿಸಬಹುದು. ಚಳಿಗಾಲದಲ್ಲಿ ರಾಮ್ ಲಡ್ಡು ಸೇವನೆ ಉತ್ತಮ ಅನುಭವ ನೀಡುತ್ತದೆ.

ರಾಬ್ (Raab):

‘ರಾಜಸ್ಥಾನಿ ರಾಬ್’ ಎಂದೇ ಪ್ರಸಿದ್ಧಿ ಪಡೆದಿರುವ ರಾಬ್ ಚಳಿಗಾಲದಲ್ಲಿ ಸೇವಿಸುವ ಉತ್ತಮ ಆಹಾರಗಳಲ್ಲಿ ಒಂದಾಗಿದೆ. ರಾಗಿ, ಮಜ್ಜಿಗೆ ಹಾಗೂ ಮಸಾಲೆ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಗಂಜಿಯಾಗಿದೆ. ಹೆಚ್ಚು ಪೋಷಕಾಂಶವುಳ್ಳ ಈ ಖಾದ್ಯವನ್ನು ರೊಟ್ಟಿಯ ಜೊತೆಗೂ ಸೇವಿಸಬಹುದು. ‘ರಾಜಸ್ಥಾನ’ ಮತ್ತು ‘ಗುಜರಾತ್’ನಲ್ಲಿ ಈ ಖಾದ್ಯ ಹೆಚ್ಚು ಪ್ರಸಿದ್ದಿ ಪಡೆದಿದೆ.

ಗೊಂಡ್ ಕೆ ಲಡ್ಡು (Gond ke Laddu):

ಚಳಿಗಾಲದಲ್ಲಿ ಸೇವಿಸುವ ಆಹಾರ ಪದಾರ್ಥಗಳಲ್ಲಿ ‘ಗೊಂಡ್ ಕೆ ಲಡ್ಡು’ ಕೂಡ ಒಂದು. ಈ ಸಿಹಿ ಉಂಡೆಗಳು ಚಳಗಾಲದಲ್ಲಿ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಬೆಚ್ಚಗಿನ ಅನುಭವ ನೀಡುತ್ತವೆ. ಗೊಂಡ್ ಕೆ ಲಡ್ಡನ್ನು ಗೋಧಿ ಹಿಟ್ಟು, ತುಪ್ಪ, ಬೆಲ್ಲ ಹಾಗೂ ಒಣ ಹಣ್ಣುಗಳನ್ನು ಹಾಕಿ ತಯಾರಿಸಲಾಗುತ್ತದೆ. ಈ ಖಾದ್ಯವನ್ನು ‘ಶೀತ ನಿರೋಧಕ’ ಎಂದೂ ಕರೆಯಲಾಗುತ್ತದೆ. ಇದನ್ನು ಕೆಲವು ದಿನಗಳವರೆಗೂ ಶೇಖರಿಸಿಟ್ಟುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.