ತಿಂಡಿ–ತಿನಿಸುಗಳ ವಿತರಣಾ ಸಂಸ್ಥೆ ಸ್ವಿಗ್ಗಿ ಹಾಗೂ ಚಾಯ್ ಪಾಯಿಂಟ್ ತಮ್ಮ ಸಹಭಾಗಿತ್ವದಲ್ಲಿ ಕ್ರಿಸ್‌ಮಸ್‌ಗಾಗಿ ಗ್ರಾಹಕರಿಗೆ ಹೊಸ ತಿನಿಸುಗಳನ್ನು ಪರಿಚಯಿಸಿದೆ.ಖ್ಯಾತ ಶೆಫ್ ಸರ್‍ಹಾ ಟೊಡ್ ಖಾದ್ಯಗಳನ್ನು ತಯಾರಿಸಿದ್ದು ವಿಶೇಷ. ಲೇಖಕಿ, ಉದ್ಯಮಿಯೂ ಆಗಿರುವ ಸರಾ ಈಚೆಗೆ ನಗರಕ್ಕೆ ಬಂದಾಗ ‘ಮೆಟ್ರೊ’ದೊಂದಿಗೆ ಮಾತಿಗೆ ಸಿಕ್ಕರು.

* ಕುಕ್ಕಿಂಗ್ ಅನ್ನು ವೃತ್ತಿಯಾಗಿಸಿಕೊಳ್ಳಲು ಕಾರಣ?

ನಾನು ಮಾಡೆಲ್ ಆಗಿದ್ದಾಗ ಅನೇಕ ದೇಶಗಳಲ್ಲಿ ಸಂಚರಿಸಿದ್ದೆ. ಆಗೆಲ್ಲಾ ಬೇರೆ ಬೇರೆ ದೇಶದ ಖಾದ್ಯಗಳನ್ನು ಸವಿಯುತ್ತಾ ಸವಿಯುತ್ತಾ ಆಹಾರ ಕ್ಷೇತ್ರ ಎನ್ನುವುದು ಅದ್ಭುತ ಎನ್ನಿಸಲು ಶುರುವಾಗಿತ್ತು. ಅಡುಗೆಯ ಮೇಲೆ ಒಲವು ಹುಟ್ಟುಕೊಂಡಿತು. ಹೀಗೆ ನನ್ನ ಶೆಫ್ ವೃತ್ತಿಯ ಪಯಣವೂ ಆರಂಭವಾಯಿತು.

* ನೀವು ತಯಾರಿಸುವ ಖಾದ್ಯಗಳಿಗೆ ಉತ್ತಮ ಜಡ್ಜ್ ಯಾರು?

ನನ್ನ ಮಗನೇ ನನ್ನ ಫಸ್ಟ್ ಅ್ಯಂಡ್ ಬೆಸ್ಟ್ ಜಡ್ಜ್. ಅಡುಗೆಯ ವಿಷಯಕ್ಕೆ ಬಂದರೆ ಮಕ್ಕಳಿಗಿಂತ ಒಳ್ಳೆಯ ಜಡ್ಜ್ ಸಿಗುವುದಿಲ್ಲ. ನನ್ನ ಮಗ ನನ್ನ ಅಡುಗೆ ಬಗ್ಗೆ ವಿವರವಾಗಿ ವಿಮರ್ಶೆ ಮಾಡುತ್ತಾನೆ. ಸಲಹೆಗಳನ್ನು ನೀಡುತ್ತಾನೆ.

* ಶೆಫ್ ಆಗಿ ನಿಮ್ಮ ಅನುಭವಗಳ ಬಗ್ಗೆ ತಿಳಿಸಿ?

ನಾನು ಶೆಫ್ ಆಗಿ ಮೊದಲ ಬಾರಿ ಕೆಲಸ ಮಾಡಿದ್ದು ಲಂಡನ್‌ನ ರೆಸ್ಟೋರೆಂಟ್ ಒಂದರಲ್ಲಿ. ಬೆಳ್ಳಿಗ್ಗೆ 8 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ರೆಸ್ಟೋರೆಂಟ್‌ನಲ್ಲೇ ಇರುತ್ತಿದ್ದೆ. ಆ ದಿನಗಳಲ್ಲಿ ನನ್ನ ಪಾದಗಳು ನಿಲ್ಲಲೂ ಆಗದೇ ಸೋಲುತ್ತಿದ್ದವು. ಅಷ್ಟು ಕಷ್ಟ ಪಡುವುದು ನನಗೆ ಅವಶ್ಯವಾಗಿತ್ತು. ಅಲ್ಲಿ ಪುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಪೈಪೋಟಿ ಇತ್ತು. ನನಗೆ ಸಾಧಿಸುವ ಛಲವಿತ್ತು. ಆ ಕಾರಣಕ್ಕೆ ಅಂದಿನ ಕಷ್ಟಗಳನ್ನೆಲ್ಲಾ ಮೆಟ್ಟಿ ನಿಂತು ಯಶಸ್ಸು ಗಳಿಸಿದ್ದೇನೆ.

* ಶೆಫ್ ಆಗಿ ನಿಮಗೆ ಯಾವ ರೀತಿಯ ಆಹಾರಗಳು ಇಷ್ಟವಾಗುತ್ತವೆ?

ಇಂತಹದ್ದೇ ಆಹಾರ ಇಷ್ಟ ಎಂದು ಬೊಟ್ಟು ಮಾಡಿ ತೋರಿಸಲು ನನ್ನಿಂದ ಸಾಧ್ಯವಿಲ್ಲ. ಸಸ್ಯಾಹಾರ, ಮಾಂಸಾಹಾರ ಸೇರಿದಂತೆ ಎಲ್ಲಾ ರೀತಿಯ ಆಹಾರವೂ ಇಷ್ಟ. ಮೊದಲು ನಾನು ಹೆಚ್ಚಾಗಿ ನಾನ್‌ವೆಜ್ ಆಹಾರಗಳನ್ನೇ ಇಷ್ಟಪಡುತ್ತಿದ್ದೆ. ಆದರೆ ಭಾರತಕ್ಕೆ ಬಂದ ಮೇಲೆ ಸಸ್ಯಾಹಾರ ಖಾದ್ಯಗಳು ಎಷ್ಟೊಂದು ರುಚಿಯಾಗಿರುತ್ತದೆ ಎಂದು ಅನ್ನಿಸಿತು. ಭಾರತದ ಖಾದ್ಯಗಳು ತುಂಬಾ ಡೆಲಿಷಿಯಸ್ ಆಗಿರುತ್ತವೆ.

* ನಿಮಗೆ ಈ ಕ್ಷೇತ್ರಕ್ಕೆ ಬರಲು ಸ್ಫೂರ್ತಿ ಯಾರು?

ಯುಕೆಯ ಆ್ಯಂಜಲಾ ಹಾರ್ಟ್‌ನೆಟ್ ನನಗೆ ಸ್ಫೂರ್ತಿ. ಅವರು ಯುಕೆಯಲ್ಲಿ ತುಂಬಾ ಫೇಮಸ್ ಶೆಫ್. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯೊಬ್ಬಳು ಶೆಫ್ ಆಗಿ ಅಷ್ಟರಮಟ್ಟಿಗೆ ಹೆಸರು ಗಳಿಸಿದ್ದಾರೆ ಎಂದರೆ ಅದು ಸುಲಭದ ಮಾತಲ್ಲ. ಆ ಕಾರಣಕ್ಕೆ ಅವರು ನನಗೆ ಸ್ಫೂರ್ತಿಯಾಗಿದ್ದಾರೆ.

* ಮಹಿಳಾ ಶೆಫ್‌ಗಳಿಗೆ ನಿಮ್ಮ ಕಿವಿಮಾತು?

ಒಬ್ಬ ಮಹಿಳೆಯಾಗಿ ಈ ಕ್ಷೇತ್ರದಲ್ಲಿ ನೆಲೆಯೂರುವುದು ಕಷ್ಟಸಾಧ್ಯ. ಇದು ನಿಜಕ್ಕೂ ಕಠಿಣ ಹಾದಿ. ನಿಮಗೆ ಅಡುಗೆಯ ಮೇಲೆ ಒಲವಿರಬೇಕು.ಅಡುಗೆ ಮನೆಯನ್ನು ನಿಭಾಯಿಸುವುದು ಸುಲಭವಲ್ಲ. ಆದರೆ ಒಮ್ಮೆ ಈ ಕ್ಷೇತ್ರದಲ್ಲಿ ಧುಮುಕಿದರೆ ಖಂಡಿತ ಈಜಿ ದಡ ಸೇರುತ್ತಾರೆ ಎಂಬುದು ನನ್ನ ನಂಬಿಕೆ.

* ನಿಮ್ಮ ಪುಸ್ತಕ ‘ದಿ ಹೆಲ್ತಿ ಮಾಡೆಲ್ ಕುಕ್‌ಬುಕ್’ ಬಗ್ಗೆ ಒಂದೆರಡು ಮಾತು?

ಜನರಿಗೆ ಆರೋಗ್ಯಕರ ಜೀವನಶೈಲಿಯ ಬಗ್ಗೆ ಕುತೂಹಲವಿರುತ್ತದೆ. ಆರೋಗ್ಯಕರ ಆಹಾರವೆಂದರೆ ಬರೀ ಡಯೆಟ್ ಪುಡ್ ಅಲ್ಲ; ಅದನ್ನು ಹೊರತುಪಡಿಸಿ ಟೇಸ್ಟಿಯಾದ ಆಹಾರ ಕೂಡ ಎನ್ನುವುದನ್ನು ತಿಳಿಸಬೇಕು ಎಂಬುದಿತ್ತು. ಅದನ್ನು ತಿಳಿಸುವ ಸಲುವಾಗಿಯೇ ಪುಸ್ತಕ ಬರೆದೆ.

* ನೀವು ಮಾಡುವ ಖಾದ್ಯಗಳಲ್ಲಿ ನಿಮ್ಮ ಮಗ ತುಂಬಾ ಇಷ್ಟಪಡುವುದು?

ನನ್ನ ಮಗನಿಗೆ ನಾನು ಮಾಡುವ ಖೀಮಾ ಎಂದರೆ ತುಂಬಾ ಇಷ್ಟ. ಚಿಕನ್ ಖಾದ್ಯಗಳನ್ನು ಇಷ್ಟಪಡುತ್ತಾನೆ.

* ಮಾಡೆಲ್ ಆಗಿ ಮುಂದುವರಿಯುವ ಆಸೆ ಇದೆಯೇ?

ಖಂಡಿತ ಇಲ್ಲ, ನನಗೆ ಹೆಚ್ಚು ಹೆಚ್ಚು ತಿನ್ನುವ ಆಸೆ. ಜೊತೆಗೆ ಸುತ್ತಾಟವೂ ಇಷ್ಟ. ಪ್ರಪಂಚದ ಮೂಲೆ ಮೂಲೆಯನ್ನು ಸುತ್ತಬೇಕು, ಅಲ್ಲಿನ ಅಡುಗೆಗಳನ್ನು ಕಲಿಯಬೇಕು ಎಂಬುದು ನನ್ನ ಹಂಬಲ. ಪಯಣವನ್ನು ಹೀಗೆ ಮುಂದುವರಿಸಿ ನನ್ನ ರೆಸ್ಟೋರೆಂಟ್‌ಗಳ ಸರಣಿಯನ್ನು ಮುಂದುವರಿಸುವ ಆಸೆ.

* ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಪ್ರಾರಂಭಿಸುವ ಯೋಚನೆ ಇದೆಯೇ?

ನನಗೆ ಬೆಂಗಳೂರು ಎಂದರೆ ಇಷ್ಟ, ಖಂಡಿತ ಮುಂದಿನ ದಿನಗಳಲ್ಲಿ ನೀವು ನನ್ನ ರೆಸ್ಟೋರೆಂಟ್ ಅನ್ನು ಇಲ್ಲಿ ನಿರೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.