ಶನಿವಾರ, ಏಪ್ರಿಲ್ 1, 2023
32 °C

SSLC | ಎಸ್ಸೆಸ್ಸೆಲ್ಸಿ ಪರೀಕ್ಷಾ ದಿಕ್ಸೂಚಿ: ವಿಜ್ಞಾನ ವಿಷಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

39) ಭಿನ್ನತೆಯ ಮಹತ್ವದ ಕುರಿತು ಬರೆಯಿರಿ
ಉತ್ತರ:- ಭಿನ್ನತೆಯ ಮಹತ್ವ ಪರಿಸರದಲ್ಲಿನ ಜೀವಿ ಸಮುದಾಯಗಳು ಸಂತಾನೋತ್ಪತ್ತಿ ನಡೆಸುವ ತಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ಸೂಕ್ತವಾದ ಸ್ಥಾನಗಳಲ್ಲಿ ಅಥವಾ ಆವಾಸಗಳಲ್ಲಿ ಸೇರಿಕೊಂಡಿವೆ. ಸಂತಾನೋತ್ಪತ್ತಿ ಸಮಯದಲ್ಲಿ ಡಿಎನ್‌ಎ ಸ್ವಪ್ರತೀಕರಣದಲ್ಲಿನ ಸ್ಥಿರತೆಯು ಜೀವಿಯ ದೇಹ ವಿನ್ಯಾಸದ ಲಕ್ಷಣಗಳನ್ನು ನಿರ್ವಹಿಸಲು ಮುಖ್ಯವಾಗುತ್ತದೆ. ಅದು ಜೀವಿಯು ನಿರ್ದಿಷ್ಟ ಆವಾಸವನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದ್ದರಿಂದ, ಸಂತಾನೋತ್ಪತ್ತಿಯು ಜೀವಿಪ್ರಭೇದಗಳ ಸಂಖ್ಯೆಯ ಸ್ಥಿರತೆಯೊಂದಿಗೆ ಜೋಡಣೆಗೊಂಡಿದೆ. ಆದಾಗ್ಯೂ, ಜೀವಿಗಳ ನಿಯಂತ್ರಣಕ್ಕೆ ಸಿಗದ ಕಾರಣಗಳಿಂದಾಗಿ ಆವಾಸಗಳು ಬದಲಾಗಬಹುದು. ಭೂಮಿಯ ಮೇಲಿನ ತಾಪ ಏರಬಹುದು ಅಥವಾ ಇಳಿಯಬಹುದು, ನೀರಿನ ಮಟ್ಟ ಬದಲಾಗಬಹುದು ಅಥವಾ ಅಲ್ಲಿ ಉಲ್ಕಾಘಾತ ಉಂಟಾಗಬಹುದು ಅಂತಹ ಸಂದರ್ಭದಲ್ಲಿ ಜೀವ ಸಂಕುಲ ಇರಲು ಅದಲ್ಲಿ ಭಿನ್ನತೆ ಇದ್ದಾಗ ಮಾತ್ರ ಸಾಧ್ಯ. ಒಂದು ವೇಳೆ ಸಂತಾನೋತ್ಪತ್ತಿ ನಡೆಸುವ ಜೀವಿಗಳ ಸಮುದಾಯ ಒಂದು ನಿರ್ದಿಷ್ಟ ಆವಾಸಕ್ಕೆ ಹೊಂದಿಕೊಂಡಿದ್ದರೆ ಮತ್ತು ಒಂದುವೇಳೆ ಆ ಆವಾಸವು ತೀವ್ರವಾದ ಬದಲಾವಣೆಗಳಿಗೆ ಗುರಿಯಾದರೆ ಆ ಜೀವಿ ಸಮುದಾಯವು ನಶಿಸಿಹೋಗಬಹುದು. ಆದರೆ ಈ ಸಮುದಾಯದ ಕೆಲವು ಜೀವಿಗಳಲ್ಲಿ ಕೆಲವು ಭಿನ್ನತೆಗಳು ಕಂಡುಬAದರೆ ಅವುಗಳಿಗೆ ಬದುಕುಳಿಯುವ ಕೆಲವು ಅವಕಾಶಗಳಿವೆ. ಒಂದು ವೇಳೆ ಸಮಶೀತೋಷ್ಣ ನೀರಿನಲ್ಲಿ ಬ್ಯಾಕ್ಟೀರಿಯಾ ಸಮುದಾಯವೊಂದು ವಾಸಿಸುತ್ತಿದ್ದು ಮತ್ತು ಜಾಗತಿಕ ತಾಪದ ಏರಿಕೆಯಿಂದಾಗಿ ನೀರಿನ ತಾಪ ಏರಿಕೆಯಾದರೆ ಇವುಗಳಲ್ಲಿ ಬಹುತೇಕ ಬ್ಯಾಕ್ಟೀರಿಯಾಗಳು ಸಾಯಬಹುದು. ಆದರೆ, ಶಾಖವನ್ನು ನಿರೋಧಿಸುವ ಕೆಲವು ರೂಪಾಂತರಗಳು ಉಳಿದುಕೊಳ್ಳಬಹುದು ಮತ್ತು ಸಂತಾನೋತ್ಪತ್ತಿ ನಡೆಸಬಹುದು. ಹೀಗೆ ಕೆಲವು ವೇಳೆ ಭಿನ್ನತೆಯು ಪ್ರಭೇದಗಳು ಬದುಕುಳಿಯಲು ಉಪಯುಕ್ತವಾಗಿವೆ.

40) ಪ್ಲಾಸ್ಟರ್ ಆಫ್ ಪ್ಯಾರಿಸ್ ಯಾವುದಾದರೂ ಎರಡು ಉಪಯೋಗಗಳನ್ನು ಬರೆಯಿರಿ.
ಉತ್ತರ:- ಆಟಿಕೆಗಳ ತಯಾರಿಕೆ, ಅಲಂಕಾರಿಕೆ ವಸ್ತುಗಳಲ್ಲಿ ನುಣುಪಾದ ಮೇಲ್ಮೈ ನಿರ್ಮಿಸಲು ಇದನ್ನು ಬಳಸುತ್ತಾರೆ. ಮುರಿದು ಮೂಳೆಗಳಿಗೆ ಸರಿಯಾದ ಸ್ಥಳದಲ್ಲಿ ಆಧಾರವಾಗಿ ಲೇಪನ ಮಾಡಲು ವೈದ್ಯರು ಪ್ಲಾಸ್ಟರ್ ಆಫ್ ಪ್ಯಾರಿಸ್‌ಅನ್ನು ಬಳಸುತ್ತಾರೆ.

41) ಮೆಂಡಲಿವ್ ಅವರು ತಮ್ಮ ಆವರ್ತಕ ಕೋಷ್ಟಕದ ರಚನೆಗೆ ಉಪಯೋಗಿಸಿರುವ ಮಾನದಂಡಗಳು ಯಾವುವು?
ಉತ್ತರ :- ಧಾತುಗಳನ್ನು ಅವುಗಳ ಪರಮಾಣುರಾಶಿ, ಮೂಲಭೂತ ಗುಣಗಳು ಮತ್ತು ಒಂದೇ ರೀತಿಯ ರಾಸಾಯನಿಕ ಲಕ್ಷಣಗಳ ಆಧಾರದ ಮೇಲೆ ಧಾತುಗಳನ್ನು ಜೋಡಣೆ ಮಾಡಿದರು

l ಧಾತುಗಳ ಪರಮಾಣು ರಾಶಿಗಳು ಮತ್ತು ಅವುಗಳ ಭೌತ ಮತ್ತು ರಾಸಾಯನಿಕ ಗುಣಗಳ ನಡುವಣ ಸಂಬಂಧವನ್ನು ಪರಿಶೀಲಿಸಿದರು

l ರಾಸಾಯನಿಕ ಗುಣಗಳಲ್ಲಿ ಮೆಂಡಲೀವ್ ಅವರು ಹೈಡ್ರೋಜನ್ ಮತ್ತು ಆಕ್ಸಿಜನ್ ಧಾತುಗಳು ಉಂಟುಮಾಡುವ ಸಂಯುಕ್ತಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು.

l ಹೈಡ್ರೋಜನ್ ಮತ್ತು ಆಕ್ಸಿಜನ್‌ಗಳು ಅತಿಹೆಚ್ಚು ಕ್ರಿಯಾಪಟುತ್ವವುಳ್ಳ ಮತ್ತು ಬಹುತೇಕ ಧಾತುಗಳೊಂದಿಗೆ ಸಂಯುಕ್ತಗಳೊಂದಿಗೆ ಸಂಯುಕ್ತಗಳನ್ನು ಉಂಟು ಮಾಡುತ್ತಿರುವುದರಿಂದ ಅವರು ಅವುಗಳನ್ನು ಆಯ್ಕೆ ಮಾಡಿಕೊಂಡು

l ಧಾತುವೊಂದು ಉಂಟು ಮಾಡುವ ಹೈಡ್ರೇಡ್ ಗಳು ಮತ್ತು ಆಕ್ಸೈಡ್‌ ಗಳಸೂತ್ರಗಳನ್ನು ಆಧರಿಸಿ ಧಾತುವಿನ ವರ್ಗಿಕರಣದಲ್ಲಿ ಇದನ್ನು ಒಂದು ಮೂಲಭೂತ ಗುಣವೆಂದು ಪರಿಗಣಿಸಿದರು.

42) ನಕ್ಷತ್ರಗಳ ಮಿನುಗುವಿಕೆಯ ಬಗ್ಗೆ ಬರೆಯಿರಿ
ಉತ್ತರ:- ನಕ್ಷತ್ರಗಳ ಮಿನುಗುವಿಕೆಯು ವಾಯುಮಂಡಲದಲ್ಲಿ ನಕ್ಷತ್ರಗಳ ಬೆಳಕಿನ ವಕ್ರೀಭವನದಿಂದುಂಟಾಗಿದೆ. ನಕ್ಷತ್ರಗಳ ಬೆಳಕು ಭೂಮಿಯ ವಾಯುಮಂಡಲವನ್ನು ಪ್ರವೇಶಿಸಿ, ಭೂಮಿಯನ್ನು ತಲುಪುವ ಮುನ್ನ ಸತತವಾಗಿ ವಕ್ರೀಭವನ ಹೊಂದುತ್ತದೆ. ವಾಯುಮಂಡಲದಲ್ಲಿನ ವಕ್ರೀಭವನವು ಮಾಧ್ಯಮದ ವಕ್ರೀಭವನ ಸೂಚ್ಯಂಕವು ಬದಲಾಗುತ್ತಿರುವುದರಿಂದ ಉಂಟಾಗುತ್ತದೆ. ವಾಯುಮಂಡಲವು ನಕ್ಷತ್ರದ ಬೆಳಕನ್ನು ಲಂಬದ ಕಡೆ ಬಾಗಿಸುವುದರಿಂದ ನಕ್ಷತ್ರದ ತೋರಿಕೆಯ ಸ್ಥಾನವು ಅದರ ನೈಜ ಸ್ಥಾನಕ್ಕಿಂತ ಸ್ವಲ್ಪ ಬೇರೆಯಾಗಿರುತ್ತದೆ. ದಿಗಂತದಿಂದ ವೀಕ್ಷಿಸಿದಾಗ ನಕ್ಷತ್ರವು ತನ್ನ ನೈಜ ಎತ್ತರಕ್ಕಿಂತ ಸ್ವಲ್ಪ ಎತ್ತರದಲ್ಲಿ ಕಾಣಿಸುತ್ತದೆ. ಮತ್ತೆ ನಕ್ಷತ್ರದ ಈ ತೋರಿಕೆಯ ಸ್ಥಾನವು ಸ್ಥಿರವಲ್ಲ. ಅದು ಲಘುವಾಗಿ ಬದಲಾಗುತ್ತದೆ. ಏಕೆಂದರೆ, ಭೂಮಿಯ ವಾಯುಮಂಡಲದ ಭೌತಿಕ ಪರಿಸ್ಥಿತಿಗಳು ಸ್ಥಿರವಾಗಿಲ್ಲದ ಕಾರಣ ನಕ್ಷತ್ರಗಳು ತುಂಬಾ ದೂರದಲ್ಲಿರುವುದರಿಂದ ಅವು ಅಂದಾಜು ಬಿಂದು ಗಾತ್ರದ ಬೆಳಕಿನ ಮೂಲಗಳಂತೆ ಕಾಣುತ್ತವೆ. ನಕ್ಷತ್ರಗಳಿಂದ ಬರುವ ಬೆಳಕಿನ ಕಿರಣಗಳ ಹಾದಿಯು ಸ್ವಲ್ಪ ಮಟ್ಟಿಗೆ ಬದಲಾಗುವುದರಿಂದ ನಕ್ಷತ್ರಗಳ ತೋರಿಕೆಯ ಸ್ಥಾನದಲ್ಲಿ ಸ್ಥಿತ್ಯಂತರವಾಗುತ್ತದೆ ಮತ್ತು ಕಣ್ಣನ್ನು ಪ್ರವೇಶಿಸುವ ನಕ್ಷತ್ರಗಳ ಬೆಳಕು ಮಿನುಗುತ್ತದೆ. ನಕ್ಷತ್ರಗಳು ಕೆಲವೊಮ್ಮೆ ಪ್ರಕಾಶಮಾನವಾಗಿ ಮತ್ತು ಕೆಲವೊಮ್ಮೆ ಕಂದಿದಂತೆ ಕಾಣುತ್ತವೆ. ಇದೇ ನಕ್ಷತ್ರಗಳ ಮಿನುಗುವಿಕೆಯ ಪರಿಣಾಮ

43) 4.0 cm ಗಾತ್ರದ ವಸ್ತುವನ್ನು, 15 cm ಸಂಗಮ ದೂರವನ್ನು ಹೊಂದಿರುವ ನಮ್ನ ದರ್ಪಣದ ಮುಂದೆ 25 cm ದೂರದಲ್ಲಿ ಇರಿಸಿದೆ. ಸ್ಪಷ್ಟ ಪ್ರತಿಬಿಂಬವನ್ನು ಪಡೆಯಲು ಪರದೆಯನ್ನು ದರ್ಪಣದಿಂದ ಎಷ್ಟು ದೂರದಲ್ಲಿ ಇರಿಸಬೇಕು? ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರವನ್ನು ಲೆಕ್ಕ ಮಾಡಿ.

ಪರಿಹಾರ :

ವಸ್ತುವಿನ ಗ್ರಾತ್ರ h= 4.0 cm;

ವಸ್ತುವಿನ ದೂರ u=_25.0 cm;

ಸಂಗಮ ದೂರ f= _15.0 cm;

ಪ್ರತಿಬಿಂಬದ ದೂರ v=? ಪ್ರತಿಬಿಂಬದ ಗಾತ್ರ,h'=?]

ಇದನ್ನೂ ಓದಿ: SSLC| Mathematics MODEL QUESTIONS - ಗಣಿತ ಮಾದರಿ ಪ್ರಶ್ನೆಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು