ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸಿಒಎಸ್ ಸಮಸ್ಯೆಗೆ ಸುಲಭದ ಪರಿಹಾರ

Last Updated 27 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬಂ ಜೆತನದ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನಿಸಿಬಿಟ್ಟಿವೆ. ಇದಕ್ಕೆ ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಎಸ್‌) ಸಮಸ್ಯೆ ಕೂಡ ಒಂದು ಕಾರಣ. ಇದು ಅನಾರೋಗ್ಯಕರ ಜೀವನಶೈಲಿಯಿಂದ ಬರುವ ಕಾಯಿಲೆಯಾಗಿದ್ದು, ಚಿಕಿತ್ಸೆ ಹಾಗೂ ಆರೋಗ್ಯಕರ ಜೀವನಶೈಲಿಯ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

‘ಇದ್ದಕ್ಕಿದ್ದಂತೆ ತೂಕ ಹೆಚ್ಚಳ, ಮುಖದ ಮೇಲೆ ಕೂದಲು ಬರುವುದು, ಮೊಡವೆ, ತಲೆ ಕೂದಲು ಉದುರುವುದು ಈ ರೀತಿಯ ಸಮಸ್ಯೆ ಕಾಣಿಸಿಕೊಂಡಲ್ಲಿ ಪಿಸಿಓಎಸ್ ಪರೀಕ್ಷೆ ಮಾಡಿಸುವುದು ಒಳಿತು’ ಎನ್ನುತ್ತಾರೆ ಮಲ್ಲೇಶ್ವರದ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ.ವಿ. ನಾರಾಯಣಸ್ವಾಮಿ.

ವೈದ್ಯಕೀಯ ಸಂಶೋಧನೆಯ ಪ್ರಕಾರ ಶೇ 5-25ರಷ್ಟು ಮಹಿಳೆಯರಲ್ಲಿ ಪಿಸಿಓಎಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಋತುಚಕ್ರ, ಹಾರ್ಮೋನ್‍ಗಳಲ್ಲಿ ಏರುಪೇರಾಗುತ್ತಿದೆ. ಗರ್ಭಧಾರಣೆ ಸಾಮರ್ಥ್ಯದಲ್ಲೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಅವರು ಹೇಳುತ್ತಾರೆ.

ಈ ಸಮಸ್ಯೆ ಅನುವಂಶೀಯತೆಯಿಂದ ಉಂಟಾಗುವುದು. ತಾಯಿ, ಚಿಕ್ಕಮ್ಮ, ಅಕ್ಕ–ತಂಗಿ ಸೇರಿದಂತೆ ವಿವಿಧ ಸಂಬಂಧಿಗಳಲ್ಲಿ ಈ ಸಮಸ್ಯೆಗಳಿದ್ದಲ್ಲಿ ಪರೀಕ್ಷೆ ಮಾಡಿಕೊಳ್ಳುವುದು ಒಳಿತು. ಪಿಸಿಒಎಸ್ ಸಮಸ್ಯೆ ಇರುವವರಿಗೆ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವುದಿಲ್ಲ. ಅಪರಿಪಕ್ವತೆ ಇರುವ ಅಂಡಗಳು ನಿರ್ಗುಳ್ಳೆಯಾಗಿ ಅಂಡಾಶಯದ ಗೋಡೆಗಳ ಮೇಲೆ ಉಳಿದುಕೊಳ್ಳುತ್ತವೆ. ಇವುಗಳು ನೋಡುವುದಕ್ಕೆ ಮುತ್ತುಗಳ ತರಹವೇ ಕಾಣಿಸುತ್ತವೆ. ಈ ಕಾರಣದಿಂದಾಗಿ ಗರ್ಭಧಾರಣೆಯಾಗುವುದಿಲ್ಲ.

ವ್ಯಾಯಾಮ ಮಾಡದಿರುವುದು, ಅನಾರೋಗ್ಯಕರ ಜೀವನಶೈಲಿ, ಹಾರ್ಮೋನ್‌ಗಳ ಅಸಮತೋಲನ, ಅತ್ಯಧಿಕ ಮಾನಸಿಕ ಒತ್ತಡ, ಕೊಬ್ಬಿನ ಪದಾರ್ಥಗಳ ಸೇವನೆ ಪಿಸಿಒಎಸ್ ಸಮಸ್ಯೆ ಉಲ್ಬಣ ಗೊಳ್ಳಲು ಪ್ರಮುಖ ಕಾರಣ. ಈ ಸಮಸ್ಯೆ ಬರುವುದನ್ನು ಆರೋಗ್ಯಕರ ಜೀವನಶೈಲಿ ಪಾಲಿಸುವ ಮೂಲಕ ತಡೆಗಟ್ಟಬಹುದು‌‌.

ಚಿಕಿತ್ಸೆ ಲಭ್ಯ: ದೈಹಿಕ ವ್ಯಾಯಾಮ ಮತ್ತು ಆರೋಗ್ಯಕರ ಆಹಾರಕ್ರಮ ಪಾಲಿಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇಷ್ಟಾಗಿಯೂ ಸಮಸ್ಯೆ ನಿವಾರಣೆಯಾಗದಿದ್ದಲ್ಲಿ ಅಂಡಾಶಯವನ್ನು ಕೊರೆಯುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಸಣ್ಣ ಎಲೆಕ್ಟ್ರಾನಿಕ್ ಸೂಜಿ ಬಳಸಿ, ಅಂಡಾಶಯದಲ್ಲಿ ಚಿಕ್ಕರಂಧ್ರ ಮಾಡಲಾಗುತ್ತದೆ. ಈ ಮೂಲಕ ಟೆಸ್ಟೋಸ್ಟಿರೋನ್ ಉತ್ಪತ್ತಿಯನ್ನು ತಗ್ಗಿಸಿ, ಅಂಡೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ.

‘ವಿವಾಹದ ನಂತರ ಆರು ತಿಂಗಳಲ್ಲಿ ಗರ್ಭಿಣಿಯಾಗದಿದ್ದಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು. ಎಲ್ಲ ಪ್ರಯತ್ನಗಳೂ ವಿಫಲವಾದಲ್ಲಿ ಲ್ಯಾಪರೋಸ್ಕೋಪಿಯ ಮೂಲಕ ಅಂಡಾಶಯದ ಕೊರೆಯುವಿಕೆ ಮಾಡಿಸಿಕೊಳ್ಳಬಹುದು. ಇದರಿಂದ ಗರ್ಭಧರಿಸುವ ಸಾಧ್ಯತೆ ಹೆಚ್ಚಾಗುತ್ತದೆ’ ಎನ್ನುತ್ತಾರೆ ಡಾ. ನಾರಾಯಣಸ್ವಾಮಿ.

‘ಪಿಸಿಒಎಸ್ ಸಮಸ್ಯೆ ಇರುವುದು ಗೊತ್ತಾದಲ್ಲಿ ಸಮಯಕ್ಕೆ ಸರಿಯಾಗಿ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ, ಸಲಹೆ ಪಡೆಯಿರಿ. ಅಗತ್ಯ ಬಿದ್ದಲ್ಲಿ ಸಫಲಕಾರಿ ಚಿಕಿತ್ಸಾ ವಿಧಾನವನ್ನು ಪರಿಗಣಿಸಿ, ಸದುಪಯೋಗ ಪಡೆದುಕೊಳ್ಳಬೇಕು. ಹದಿಹರೆಯದವರು, ವಿವಾಹೋತ್ತರ ಬಂಜೆತನದ ತೊಂದರೆಯಿರುವವರು, ಋತುಚಕ್ರದ ಸಮಸ್ಯೆ ಇರುವವರು ಚಿಕಿತ್ಸಾ ಸೌಲಭ್ಯ ಪಡೆಯಬಹುದು’ ಎಂದು ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ಬಿ.ಪ್ರಿಯದರ್ಶನಿ ಅಭಿಪ್ರಾಯಪಡುತ್ತಾರೆ.

l ಸಂಪರ್ಕ: ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನಂ.6, 7 & 8, 18ನೇ ಕ್ರಾಸ್, ಮಲ್ಲೇಶ್ವರ, ಬೆಂಗಳೂರು-560055

l ದೂ. 080-23084000, ಮೊ.91 9448053952

l ವೆಬ್‌ಸೈಟ್: www.narayanasuperspecialityhospitals.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT