ಕೆಲವು ರೋಗಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಮತ್ತು ರೋಗ ಪತ್ತೆಯಾದ ಬಳಿಕ ಔಷಧಗಳಿಂದ ಬಹಳ ಸುಲಭವಾಗಿ ಗುಣ ಪಡಿಸಬಹುದು ಕೂಡ. ರೋಗಾಣುಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳು ಈ ಪಟ್ಟಿಯಲ್ಲಿ ಬರುತ್ತವೆ. ನಿಗದಿತ ರಕ್ತ ಪರೀಕ್ಷೆಗಳಿಂದ ರೋಗದ ದೃಢೀಕರಣವಾದ ನಂತರ ಅವುಗಳನ್ನು ಕೆಲವೇ ಸಮಯದಲ್ಲಿ ಗುಣಪಡಿಸಲಾಗುತ್ತದೆ. ರಕ್ತದೊತ್ತಡ, ಮಧುಮೇಹ, ಕ್ಷಯ, ಏಡ್ಸ್ ಮುಂತಾದ ರೋಗಗಳನ್ನು ಪತ್ತೆ ಹಚ್ಚಿ ರೋಗದ ಇರುವಿಕೆಯನ್ನು ರುಜುವಾತು ಪಡಿಸಲು ಸಮಯ ಬೇಕಾಗುತ್ತದೆ ಮತ್ತು ಅವುಗಳನ್ನು ಸುಲಭವಾಗಿ ಗುಣಪಡಿಸಲಾಗುವುದಿಲ್ಲ. ಕೆಲವು ರೋಗಗಳನ್ನು ಪತ್ತೆ ಹಚ್ಚುವುದು ಬಹಳ ಕ್ಲಿಷ್ಟಕರವಾಗಿರುತ್ತದೆ ಮತ್ತು ಅವುಗಳ ಚಿಕಿತ್ಸೆ ಕೂಡ ಬಹಳ ಸವಾಲಿನದ್ದಾಗಿರುತ್ತದೆ. ಮಕ್ಕಳಲ್ಲಿ ಕಂಡು ಬರುವ ‘ಆಟಿಸಂ’ ಈ ಗುಂಪಿಗೆ ಬರುತ್ತದೆ. ಭಾರತದಲ್ಲಿ ಪ್ರತಿ ಅರವತ್ತೈದು ಮಕ್ಕಳ ಪೈಕಿ ಒಂದು ಮಗುವಿನಲ್ಲಿ ಕಾಣಿಸಬಹುದಾದ ಆಟಿಸಂ ರೋಗವನ್ನು ಪತ್ತೆ ಹಚ್ಚುವಲ್ಲಿ ತಡವಾಗುವ ಕಾರಣ ಚಿಕಿತ್ಸೆಯಲ್ಲಿಯೂ ವಿಳಂಬವಾಗುತ್ತದೆ. ನಮ್ಮ ದೇಶದಲ್ಲಿ ಸುಮಾರು ಇಪ್ಪತ್ತು ಲಕ್ಷ ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಬೆಳೆಯುವ ಮಗುವಿನ ದೈಹಿಕ ಬೆಳವಣಿಗೆಯಲ್ಲಿ ಕುಂಠಿತವಾಗಿ ಅದು ವಯಸ್ಸಿಗೆ ಸಮರ್ಪಕವಾದ ಎತ್ತರ ದಪ್ಪವನ್ನು ಹೊಂದದಿದ್ದರೆ ಅದನ್ನು ಹೆತ್ತವರು ಮತ್ತು ವೈದ್ಯರು ಶೀಘ್ರವಾಗಿ ಪತ್ತೆಹಚ್ಚಬಲ್ಲರು. ಮಗುವು ಅಂಬೆಗಾಲಿಡಲು ಅಥವಾ ನಡೆಯಲು ತಡಮಾಡಿರೂ ವೈದ್ಯರು ಅದನ್ನು ಗಮನಿಸಬಲ್ಲರು. ಮಗು ಮಾತನಾಡಲು ತಡಮಾಡಿದರೂ ಅದನ್ನು ಮನೆಯವರು ಗಮನಿಸಬಲ್ಲರು. ಆಟಿಸಂ ಕಾಯಿಲೆಯು ಮಗುವಿನ ಸಾಮಾಜಿಕ ಸಂವಹನ ಮತ್ತು ಸಂವಾದವನ್ನು ಪ್ರಭಾವಿಸುವುದರಿಂದ ಅದನ್ನು ಪತ್ತೆಹಚ್ಚಲು ತಡವಾಗುತ್ತದೆ. ಏಕೆಂದರೆ ವಯಸ್ಕರಲ್ಲಿಯೂ ಸಾಮಾಜಿಕ ಸಂವಹನ ಮತ್ತು ಸಂವಾದದ ಕಲೆಗಳು ಎಲ್ಲರಲ್ಲಿ ವಿಭಿನ್ನವಾಗಿರುತ್ತದೆ.

ನಾವು ಜನರ ಸಾಮಾಜಿಕ ಸಂವಹನ ಮತ್ತು ಸಂವಾದದಲ್ಲಿರುವ ವ್ಯತ್ಯಾಸಗಳಿಂದ ಜನರನ್ನು ಅಂತರ್ಮುಖಿಗಳು ಮತ್ತು ಬಹಿರ್ಮುಖಿಗಳೆಂದು ಅಳೆಯುತ್ತೇವೆ. ಮನುಷ್ಯ ತನ್ನ ಪರಿಸರದೊಡನೆ ವ್ಯವಹರಿಸುತ್ತ ಹೋದಂತೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಬೆಳೆಯುತ್ತಿರುವ ಮಗು ಕೂಡ ತನ್ನ ಸಾಮಾಜಿಕ ಸಂವಹನ ಮತ್ತು ಸಂವಾದದ ಕಲೆಯನ್ನು ತನ್ನದೇ ರೀತಿಯಲ್ಲಿ ರೂಪಿಸಿಕೊಳ್ಳುತ್ತಿರುತ್ತದೆ. ವೈದ್ಯರು ಬಳಿಗೆ ಮಗು ಬಂದಾಗ ವೈದ್ಯರು ಅಪರಿಚಿತರಾಗಿರುವ ಕಾರಣ ಮಗು ಹೆಚ್ಚು ತೆರೆದುಕೊಳ್ಳುವುದಿಲ್ಲ. ಒಂದು ಮಗು ಅದರ ನೈಸರ್ಗಿಕ ಪರಿಸರವಾದ ಮನೆಯಲ್ಲಿ ಒಡನಾಡುವಂತೆ ವೈದ್ಯರ ಬಳಿ ಒಡನಾಡದ ಕಾರಣ ಆಟಿಸಂ ಕಾಯಿಲೆಯನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ. ಒಂದೇ ವಯಸ್ಸಿನ ಮಕ್ಕಳ ನಡವಳಿಕೆಗಳು ಕೂಡ ಅವರ ಮನಃಸ್ಥಿತಿಗೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ. ಹೆಣ್ಣುಮಕ್ಕಳು ಸಂವಾದದ ಕಲೆಯಲ್ಲಿ ಗಂಡುಮಕ್ಕಳಿಗಿಂತ ಹೆಚ್ಚು ಚುರುಕಾಗಿರುತ್ತಾರೆ. ಅವಿಭಕ್ತ ಕುಟುಂಬದಲ್ಲಿ ಬೆಳೆಯುತ್ತಿರುವ ಮಕ್ಕಳು ಅಥವಾ ಪ್ಲೇ ಹೋಮ್ ಸೇರಿಕೊಂಡಿರುವ ಮಕ್ಕಳು ತಮ್ಮ ಸಾಮಾಜಿಕ ಸಂವಹನವನ್ನು ಹೆಚ್ಚು ಅಭಿವೃದ್ಧಿಪಡಿಸಿಕೊಂಡಿರುತ್ತಾರೆ.

ಆರೋಗ್ಯವಾಗಿ ಬೆಳೆಯುತ್ತಿರುವ ಮಗುವು ತನ್ನ ಸುತ್ತಮುತ್ತಲಿನ ಪರಿಸರವನ್ನು ಕುತೂಹಲದಿಂದ ಗಮನಿಸುತ್ತದೆ. ಶಬ್ದಗಳನ್ನು ಆಲಿಸುತ್ತದೆ ಮತ್ತು ಅದೇ ಶಬ್ದಗಳನ್ನು ಅನುಕರಿಸಲು ಪ್ರಯತ್ನಿಸುತ್ತದೆ. ಆಕಾಶದಲ್ಲಿ ಹಾರುತ್ತಿರುವ ಪಕ್ಷಿಯನ್ನು ನೋಡಿದರೆ ಅದರತ್ತ ಬೊಟ್ಟು ಮಾಡುತ್ತದೆ. ಆದರೆ ಆಟಿಸಂ ಸಮಸ್ಯೆಯಿಂದ ಬಳಲುವ ಮಕ್ಕಳು ಸುತ್ತಮುತ್ತಲಿನ ಪರಿಸರದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಬೇರೆ ಮಕ್ಕಳ ಜೊತೆಗೆ ಒಡನಾಡುವುದಿಲ್ಲ. ಹೆತ್ತವರ ಮಾತುಗಳಿಗೆ ಮತ್ತು ನಡವಳಿಕೆಗಳಿಗೆ ಸ್ಪಂದಿಸುವುದಿಲ್ಲ. ತಮ್ಮನ್ನು ಕಾಡುತ್ತಿರುವ ಒತ್ತಡಗಳಿಂದಾಗಿ ಇಂತಹ ಮಕ್ಕಳು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತಾರೆ.

ಆಟಿಸಂ ಕಾಯಿಲೆಯ ಚಿಕಿತ್ಸೆ ಯಶಸ್ವಿಯಾಗಬೇಕಿದ್ದರೆ ಮಗುವಿನ ಸಮಸ್ಯೆಗಳನ್ನು ಚಿಕ್ಕ ವಯಸ್ಸಿನಲ್ಲಿ ಪತ್ತೆಹಚ್ಚಬೇಕಾದ್ದು ಅನಿವಾರ್ಯ. ಹೆತ್ತವರು ಮಗುವಿನ ಬೆಳವಣಿಗೆಯನ್ನು ಗಮನಿಸಿ ವೈದ್ಯರ ಬಳಿಗೆ ಕರೆತಂದರೆ, ಆಗ ಆಟಿಸಂ ಕಾಯಿಲೆಗೆ ಚಿಕಿತ್ಸೆಯನ್ನು ತಡಮಾಡದೆ ಶುರುಮಾಡಬಹುದು. ಕಾಯಿಲೆಯ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆಯು ಅವಲಂಬಿತವಾಗಿರುತ್ತದೆ.

ಮಗುವಿಗೆ ಆಟಿಸಂ ಕಾಯಿಲೆಯ ಪತ್ತೆಯಾದ ನಂತರ ಹೆತ್ತವರನ್ನು ಇಂತಹ ವಿಶೇಷ ಮಗುವಿನ ಜೊತೆಗೆ ಒಡನಾಡುವುದರ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಬೇಕಾಗುತ್ತದೆ. ಮಗುವಿನ ಸೂಕ್ತ ಬೆಳವಣಿಗೆಗಾಗಿ ಹಲವು ತಜ್ಞರ ತಂಡದ ಜೊತೆಗೆ ಹೆತ್ತವರು ಕೆಲಸ ಮಾಡಬೇಕಾಗುತ್ತದೆ. ಭಾಷಣ ಚಿಕಿತ್ಸಕರು, ಔದ್ಯೋಗಿಕ ಚಿಕಿತ್ಸಕರು, ಫಿಸಿಯೋಥೆರಪಿ ತಜ್ಞರು, ಮಕ್ಕಳ ತಜ್ಞರು ಸೇರಿಕೊಂಡು ಆಟಿಸಂ ಮಕ್ಕಳ ಜೊತೆಗೆ ಶ್ರಮಿಸಬೇಕಾಗುತ್ತದೆ. ಇಂತಹ ಸೌಲಭ್ಯಗಳು ನಗರಗಳಲ್ಲಿ ಮಾತ್ರ ದೊರಕುವುದರಿಂದ ಗ್ರಾಮೀಣ ಭಾಗದಲ್ಲಿರುವ ಆಟಿಸಂ ಮಕ್ಕಳಿಗೆ ಭಾರತದಲ್ಲಿ ಸೂಕ್ತ ಚಿಕಿತ್ಸೆ ದೊರಕುವುದು ಕಷ್ಟವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.