ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಣ್ಣಿನ ಆರೋಗ್ಯಕ್ಕಿರಲಿ ಮೀನು, ಹಸಿರು ತರಕಾರಿ

Last Updated 23 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಕೊರೊನಾ ಕಾರಣದಿಂದ ಮಕ್ಕಳು ಹೊರಗಡೆ ಕಾಲಿಡುವುದೂ ಕಷ್ಟವಾಗಿದೆ. ಹಾಗಾಗಿ ಕಂಪ್ಯೂಟರ್, ಮೊಬೈಲ್‌ ಹಾಗೂ ಟಿ.ವಿ ನೋಡುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಈಗಂತೂ ಆನ್‌ಲೈನ್‌ ತರಗತಿಗಳು ಆರಂಭವಾದ ಕಾರಣ ಸ್ಕ್ರೀನ್ ನೋಡುವುದು ಅನಿವಾರ್ಯವಾಗಿದೆ. ಮಕ್ಕಳ ಈ ‘ಸ್ಕ್ರೀನ್‌ ಟೈಮ್‌’ ಪೋಷಕರನ್ನು ಚಿಂತೆಗೀಡು ಮಾಡಿದೆ. ಇದರಿಂದ ಕಣ್ಣಿಗೆ ಸಮಸ್ಯೆಯಾಗಬಹುದು.

ಭವಿಷ್ಯದ ದಿನಗಳಲ್ಲಿ ದೃಷ್ಟಿದೋಷದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬುದು ಪೋಷಕರ ಅಳಲು. ಆದರೆ, ಕಣ್ಣಿನ ಆರೋಗ್ಯಕ್ಕೆ ಹೊಂದುವಂತಹ ಆಹಾರ‍ಪ‍ದಾರ್ಥಗಳನ್ನು ನೀಡುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಬಹುದು.

ಬಾಯಿಗೂ ರುಚಿ, ಕಣ್ಣಿನ ಆರೋಗ್ಯಕ್ಕೂ ಉತ್ತಮ ಎನ್ನಿಸುವ ಕೆಲವು ಆಹಾರಗಳ ವಿವರ ಇಲ್ಲಿದೆ.ಈ ಆಹಾರಗಳಲ್ಲಿ ಪೌಷ್ಟಿಕಾಂಶ ಅಧಿಕವಾಗಿದ್ದು, ಕಣ್ಣಿನ ಆರೋಗ್ಯದ ಜೊತೆಗೆ ದೇಹರೋಗ್ಯಕ್ಕೂ ಒಳ್ಳೆಯದು.

ಚೀಸ್ ಹಾಗೂ ಮೊಟ್ಟೆ

ಸಾಮಾನ್ಯವಾಗಿ ಚೀಸ್ ಹಾಗೂ ಮೊಟ್ಟೆ ಎರಡನ್ನೂ ಮಕ್ಕಳು ಇಷ್ಟಪಡುತ್ತಾರೆ. ಈ ಎರಡರಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿದೆ. ಇವು ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಸಹಕಾರಿ. ಮೊಟ್ಟೆಯ ಹಳದಿ ಭಾಗದಲ್ಲಿರುವ ಲ್ಯೂಟಿನ್ ಅಂಶ ಕಣ್ಣಿನ ಆರೋಗ್ಯಕ್ಕೆ ಉತ್ತಮ.ಆಮ್ಲೆಟ್‌, ಹಾಫ್ ಬಾಯಿಲ್ಡ್‌ ಮೊಟ್ಟೆಯಂತಹ ಖಾದ್ಯವನ್ನು ಮಕ್ಕಳು ಇಷ್ಟಪಡುವ ರೀತಿ ಮಾಡಿಕೊಡಿ ಹಾಗೂ ಅದರ ಮೇಲೆ ಸ್ವಲ್ಪ ಚೀಸ್ ಹಾಕಿ ತಿನ್ನಲು ಕೊಡಿ.

ಮೀನು

ಮೀನು ತಿನ್ನುವವರಲ್ಲಿ ಕಣ್ಣಿನ ದೋಷ ಕಡಿಮೆ ಎಂಬ ಮಾತಿದೆ.ಮೀನಿನಲ್ಲಿರುವ ಕೊಬ್ಬಿನಾಂಶ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೇ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಅದರಲ್ಲೂ ಸ್ಯಾಮನ್‌ನಂತಹ ಮೀನಿನಲ್ಲಿಒಮೆಗಾ– 3 ಕೊಬ್ಬಿನಂಶ ಹೆಚ್ಚಿರುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ಉತ್ತಮ.

ಚಾಕೊಲೇಟ್ ಹಾಗೂ ಬಾದಾಮಿ

ಚಾಕೊಲೇಟ್ ಎಂದಾಕ್ಷಣ ಮಕ್ಕಳು ಕಣ್ಣರಳಿಸುತ್ತವೆ. ಚಾಕೊಲೇಟ್ ಇಷ್ಟವಿಲ್ಲ ಎಂದು ಹೇಳುವ ಮಕ್ಕಳು ಕಡಿಮೆ. ಆ ಕಾರಣಕ್ಕೆ ಚಾಕೊಲೇಟ್‌ನೊಂದಿಗೆ ಬಾದಾಮಿ ಜೊತೆ ಮಾಡಿಕೊಡಿ. ಬಾದಾಮಿಯಲ್ಲಿ ವಿಟಮಿನ್ ಇ ಅಂಶ ಅಧಿಕವಾಗಿದೆ. ಆ ಕಾರಣಕ್ಕೆ ಬೆಳಗಿನ ಉಪಾಹಾರ ಅಥವಾ ಹಗಲಿನ ವೇಳೆ ಚಾಕೊಲೇಟ್‌ನೊಂದಿಗೆ ಬಾದಾಮಿ ಸೇರಿಸಿಕೊಡಿ.

‌ತರಕಾರಿ

ತರಕಾರಿಗಳಲ್ಲಿ ಪೌಷ್ಟಿಕಾಂಶ ಹಾಗೂ ಮಿಟಮಿನ್‌ ಎ, ಸಿ ಹಾಗೂ ಕೆ ಅಂಶಗಳು ಅಧಿಕವಾಗಿವೆ. ಈ ಎಲ್ಲಾ ಪೌಷ್ಟಿಕಾಂಶಗಳ ಸೇವನೆ ಕಣ್ಣಿಗೆ ಉತ್ತಮ. ಜೊತೆಗೆ ಒಟ್ಟಾರೆ ಆರೋಗ್ಯಕ್ಕೂಒಳ್ಳೆಯದು. ಸುಮ್ಮನೆ ತರಕಾರಿ ಬೇಯಿಸಿಕೊಟ್ಟರೆ ಅಥವಾ ಹಸಿ ತರಕಾರಿ ತಿನ್ನುವುದಿಲ್ಲ ಎಂದಾದರೆ ಪರೋಟ, ಚಟ್ನಿ, ಬರ್ಗರ್‌, ಪಲಾವ್ಮುಂತಾದ ತಿಂಡಿಗಳೊಂದಿಗೆ ತರಕಾರಿ ಸೇರಿಸಿ ಕೊಡಬಹುದು.

ಬೇಯಿಸಿದ ಸಾಲ್ಮನ್ ಮತ್ತು ತರಕಾರಿಗಳು

ಹಣ್ಣುಗಳು

ಮಕ್ಕಳು ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಮಾವಿನಹಣ್ಣು, ಕರ್ಬೂಜದಂತಹ ಹಣ್ಣುಗಳಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿದೆ. ಮಕ್ಕಳು ಸ್ನ್ಯಾಕ್ಸ್ ಕೇಳಿದಾಗ ಮಿಶ್ರ ಹಣ್ಣುಗಳ ಫ್ರೂಟ್ ಬೌಲ್ ನೀಡುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT