ಮನುಷ್ಯ ಇಂದು ಅತ್ಯಂತ ಹೆಚ್ಚಿನ ಸಮಯವನ್ನು ಡಿಜಿಟಲ್ ವಸ್ತುಗಳನ್ನು ಉಪಯೋಗಿಸುವುದರಲ್ಲಿ ಕಳೆಯುತ್ತಾನೆ. ಅವನು ತನ್ನ ಉದ್ಯೋಗದ ಕಾರಣದಿಂದಾಗಿ ಅಥವಾ ಮನೋರಂಜನೆಗಾಗಿ ದಿನದ ಹೆಚ್ಚಿನ ಸಮಯವನ್ನು ಸ್ಮಾರ್ಟ್ಫೋನ್, ಕಂಪ್ಯೂಟರ್, ಟಿ.ವಿ. ಮತ್ತು ಸಾಮಾಜಿಕ ಜಾಲತಾಣದಲ್ಲಿಯೇ ಕಳೆಯುತ್ತಿರುತ್ತಾನೆ. ಹಿಂದೆ ಅವನು ಓದುತ್ತಿದ್ದ ಪುಸ್ತಕವನ್ನು, ನೋಡುತ್ತಿದ್ದ ನಾಟಕವನ್ನು, ಕೇಳುತ್ತಿದ್ದ ಸಂಗೀತವನ್ನು, ಮಾಡುತ್ತಿದ್ದ ವ್ಯಾಪಾರವನ್ನು ಇಂದು ಅವನು ಮನೆಯಲ್ಲಿಯೇ ಕುಳಿತು ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ ಮುಂದೆ ಮಾಡುತ್ತಿದ್ದಾನೆ.

ಯಾವುದೆ ಒಂದು ಅಭ್ಯಾಸ ಅವಲಂಬನೆಯಾದಾಗ ಅದು ಅದರದೇ ಆದ ದುಷ್ಪರಿಣಾಮವನ್ನು ಬೀರುತ್ತದೆ. ಅದು ಮನುಷ್ಯನ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮವನ್ನು ಬೀರುತ್ತದೆ. ಹೆಚ್ಚಿನವರಿಗೆ ತಾವು ಡಿಜಿಟಲ್ ಉಪಕರಣಗಳ ಮುಂದೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದಿನದ ಎಷ್ಟು ಗಂಟೆಯನ್ನು ಕಳೆಯುತ್ತಿದ್ದೇವೆ ಎಂಬ ಅಂದಾಜು ಕೂಡ ಇರುವುದಿಲ್ಲ. ಈ ಅವಲಂಬನೆ ಜಾಸ್ತಿಯಾಗಿ ದೈಹಿಕ ಮತ್ತು ಮಾನಸಿಕ ಕಾಯಿಲೆಗಳು ಕಾಣಿಸಿಕೊಂಡಾಗ ಅವರು ಈ ವಿಚಾರದ ಕಡೆಗೆ ಗಮನವನ್ನು ಹರಿಸುತ್ತಾರೆ. ಯಾವುದೇ ಆರೋಗ್ಯವಂತ ವ್ಯಕ್ತಿ ಮನೋರಂಜನೆಯ ದೃಷ್ಟಿಯಿಂದ ಡಿಜಿಟಲ್ ಉಪಕರಣಗಳನ್ನು ಮತ್ತು ಸಾಮಾಜಿಕ ಮಾಧ್ಯಮಗಳನ್ನು ದಿನದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಬಳಸುವುದು ಸೂಕ್ತವಲ್ಲ.

ಡಿಜಿಟಲ್ ಉಪಕರಣಗಳ ಮೇಲೆ ಅಗತ್ಯಕ್ಕಿಂತ ಹೆಚ್ಚು ಅವಲಂಬಿತವಾಗುವುದರಿಂದ ಮನುಷ್ಯನ ಜೀವನಕ್ರಮವನ್ನು ಅದು ಬಾಧಿಸುತ್ತದೆ. ಓಡಾಟ ಮತ್ತು ವ್ಯಾಯಾಮ ಕಡಿಮೆಯಾಗಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಇದು ನಂತರದ ವರ್ಷಗಳಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಹೆಚ್ಚಿನ ಕಾಲ ಡಿಜಿಟಲ್ ಉಪಕರಣಗಳ ಮುಂದೆ ಕುಳಿತುಕೊಂಡಾಗ ದೃಷ್ಟಿದೋಷದ ಸಮಸ್ಯೆಗಳು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ಉದ್ಯೋಗದ ಕಾರಣದಿಂದ ಡಿಜಿಟಲ್ ಉಪಕರಣಗಳ ಮುಂದೆ ಹೆಚ್ಚಿನ ಕಾಲ ಕಳೆಯುವವರು ನಿಯಮಿತವಾಗಿ ವಿರಾಮವನ್ನು ತೆಗೆದುಕೊಂಡು, ಕಣ್ಣಿನ ಸ್ನಾಯುಗಳಿಗೆ ಸಂಬಂಧಿಸಿದ ಕೆಲವೊಂದು ವ್ಯಾಯಾಮಗಳನ್ನು ಮಾಡಬೇಕು. ತಮಗೆ ಬೆನ್ನುನೋವು ಕಾಣಿಸಿಕೊಳ್ಳದಂತೆ ತಾವು ಕುಳಿತಿರುವ ಭಂಗಿಯ ಕಡೆಗೆ ಗಮನಹರಿಸುವುದು ಉತ್ತಮ.

ಡಿಜಿಟಲ್ ಉಪಕರಣಗಳ ಜೊತೆ ಹೆಚ್ಚಿನ ಸಮಯ ಕಳೆಯುವುದು ಮಾನಸಿಕ ಆರೋಗ್ಯದ ಮೇಲೆ ಕೂಡ ಪ್ರಭಾವ ಬೀರಬಲ್ಲದು. ಈ ಉಪಕರಣಗಳನ್ನು ಹೆಚ್ಚು ಬಳಸುವವರಲ್ಲಿ ಖಿನ್ನತೆ, ಆತಂಕದ ಲಕ್ಷಣಗಳು ಹೆಚ್ಚಾಗಬಹುದು. ಡಿಜಿಟಲ್ ಅವಲಂಬನೆ ಹೆಚ್ಚಾಗುತ್ತಾ ಹೋದಂತೆ ಮುಖಾಮುಖಿ ಭೇಟಿಯಾಗಬಲ್ಲ ಸ್ನೇಹಿತರು ಮತ್ತು ಮನುಷ್ಯ ಸಂಬಂಧಗಳು ಕಡಿಮೆಯಾಗಬಹುದು. ಇದು ಮನುಷ್ಯನ ಮಾನಸಿಕ ಸಮತೋಲದ ಮೇಲೆಯೂ ಪ್ರಭಾವವನ್ನು ಬೀರಬಹುದು. ಅಂತರ್ಜಾಲದಲ್ಲಿ ಜೂಜಾಡುವ ಚಟದಿಂದ ಹಿಡಿದು ಆನಲೈನ್ ಮೋಸದ ಜಾಲಗಳ ತನಕ ಈ ವ್ಯಸನದ ಮನಃಸ್ಥಿತಿ ವಿಸ್ತಾರವಾಗಬಹುದು.

ಯಾವುದೇ ಚಟಗಳಿಂದ ಮತ್ತು ಅತಿಯಾದ ಅವಲಂಬನೆ ಯಿಂದ ಹೊರಬರು ವುದು ಸುಲಭ ವಲ್ಲ . ಡಿಜಿಟಲ್ ಪ್ರಪಂಚ ಮನುಷ್ಯನ ಬದು ಕನ್ನು ಕೆಟ್ಟರೀತಿಯಲ್ಲಿ ಪ್ರಭಾವಿಸುತ್ತಿದೆಯೆಂಬ ಅರಿವು ಮೂಡುವಾಗ ಹೆಚ್ಚಿನ ಸಂದರ್ಭದಲ್ಲಿ ತಡವಾಗಿರುತ್ತದೆ. ಈ ಸುಳಿಯಿಂದ ಹೊರಬರಲು ಶಿಸ್ತಿನ ಜೀವನಕ್ರಮಕ್ಕೆ ಮರಳುವ ಅಗತ್ಯವಿರುತ್ತದೆ. ನಿರ್ದಿಷ್ಟವಾದ ಸಮಯದಲ್ಲಿ ಮಾತ್ರ ಡಿಜಿಟಲ್ ಉಪಕರಣವನ್ನು ಬಳಸುವ ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಬೇಕು. ರಾತ್ರಿ ಮಲಗುವ ಎರಡು ಗಂಟೆಯ ಮೊದಲು ಅಥವಾ ನಿದ್ದೆಯಿಂದ ಎಚ್ಚರವಾದ ನಂತರ ಎರಡು ಗಂಟೆಗಳ ಕಾಲ ಎಲ್ಲಾ ಡಿಜಿಟಲ್ ಉಪಕರಣಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ಉತ್ತಮವಾಗಿ ನಿದ್ದೆಗೆ ಜಾರಲು ಕೂಡ ಈ ಅಭ್ಯಾಸ ಸಹಾಯಕಾರಿಯಾಗಬಲ್ಲದು. ಡಿಜಿಟಲ್ ಉಪಕರಣಗಳಿಂದ ಅಂತರ ಕಾಯ್ದುಕೊಳ್ಳಲು ಮನುಷ್ಯ ಇತರ ಆರೋಗ್ಯಕರ ಹವ್ಯಾಸಗಳತ್ತ ವಾಲುವುದು ಹೆಚ್ಚಿನ ಲಾಭವನ್ನು ತರಬಲ್ಲದು. ಪುಸ್ತಕಗಳು, ವ್ಯಾಯಾಮ ಮತ್ತು ಕ್ರೀಡೆಯು ಈ ಸಮಯವನ್ನು ಅತ್ಯಂತ ಹೆಚ್ಚು ಉಪಯುಕ್ತವಾಗಿ ತುಂಬಬಲ್ಲದು. ಇದರಿಂದ ಜೀವನಮಟ್ಟದ ಜೊತೆಗೆ ಆರೋಗ್ಯವೂ ಸುಧಾರಿಸುವುದು. ಡಿಜಿಟಲ್ ಉಪಕರಣಗಳಿಂದ ದೂರ ಹೋಗುವುದು ಮತ್ತು ಪರಿಸರದೊಂದಿಗೆ ಸಮಯ ಕಳೆಯುವುದು ಮನುಷ್ಯನ ಜೀವನಪ್ರೀತಿಯ ಜೊತೆಗೆ ಅವನ ಉತ್ಸಾಹವನ್ನೂ ಹೆಚ್ಚಿಸಬಲ್ಲದು. ಏಕಾಗ್ರತೆ ಮತ್ತು ಮಾನಸಿಕ ಸಮತೋಲನವನ್ನು ಹೆಚ್ಚಿಸುವಲ್ಲಿ ಕೂಡ ಇದು ಸಹಾಯಕಾರಿಯಾಗಬಲ್ಲದು.

ಡಿಜಿಟಲ್ ಪ್ರಪಂಚದ ಅವಲಂಬನೆ ಕಡಿಮೆ ಮಾಡಿಕೊಳ್ಳಲು ತಮ್ಮ ಸ್ಮಾರ್ಟ್ ಫೋನನ್ನು ನಿಶ್ಶಬ್ದದ ಮಾದರಿಯಲ್ಲಿ ಇಡುವುದರ ಜೊತೆಗೆ ತಮಗೆ ಅಗತ್ಯವಿಲ್ಲದ ವೆಬ್ಸೈಟುಗಳನ್ನು ಬ್ಲಾಕ್ ಮಾಡಬಹುದು. ಹಂತ ಹಂತವಾಗಿ ಅವಲಂಬನೆಯನ್ನು ಕಡಿಮೆ ಮಾಡುತ್ತಾ ಬಂದು ಅಗತ್ಯವಿರುವ ವಿಚಾರಗಳಿಗಷ್ಟೆ ಡಿಜಿಟಲ್ ಉಪಕರಣಗಳನ್ನು ಬಳಸಬಹುದು. ತಮ್ಮ ಮಾನಸಿಕ ಶಕ್ತಿಯನ್ನು ಬಳಸಿ ಈ ಚಟದಿಂದ ಹೊರಬರಲು ಆಗದಿದ್ದವರು ಮನೋವೈದ್ಯರ ಮತ್ತು ಆಪ್ತಸಮಾಲೋಚಕರ ಸಹಾಯವನ್ನು ಪಡೆಯಬಹುದು. ಮಾದಕ ಪದಾರ್ಥ ಮತ್ತು ಮದ್ಯಪಾನದ ಚಟಗಳಿಂದ ‘ಡಿಟಾಕ್ಸ್’ ಆಗುವಂತೆ ಡಿಜಿಟಲ್ ಚಟಗಳಿಂದಲೂ ‘ಡಿಟಾಕ್ಸ್’ ಆಗುವುದರ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.