ಗುರುವಾರ , ಜುಲೈ 29, 2021
27 °C

ಕೋವಿಡ್‌ ಮೂರನೇ ಅಲೆ: ಮಕ್ಕಳಿಗೆ ಭಯಬೇಡ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಎಲ್ಲರಿಗೂ ತಿಳಿದಿರುವಂತೆ ಕೋವಿಡ್-19 ಮಹಾಮಾರಿಯ ಮೂರನೆಯ ಅಲೆಯು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳಬಹುದು ಎಂಬುದು ಒಂದು ಊಹೆ. ಇದಕ್ಕೆ ಪೂರಕವಾದ ಯಾವುದೇ ಅಧ್ಯಯನಗಳಿಲ್ಲ. ಆದರೆ ಅಧ್ಯಯನಗಳ ಪ್ರಕಾರ ಮಕ್ಕಳಿಗೆ ತಗುಲುವ ಸೋಂಕಿನ ಸಂಕೀರ್ಣತೆಗಳು ಕಡಿಮೆ ಎನ್ನಬಹುದಾಗಿದೆ.

ಇದಕ್ಕೆ ಮುಖ್ಯ ಕಾರಣಗಳು:

* ವೈರಾಣುವು ಮೂಗಿನ ಮೂಲಕ ಒಳಹೊಕ್ಕು ಹರಡಲು ಹಾಗೂ ಬೆಳೆಯಲು ಮಕ್ಕಳಲ್ಲಿನ ಮೂಗಿನ ಸೈನಸ್ ಗಳು ಇನ್ನು ಬೆಳವಣಿಗೆಯ ಹಂತದಲ್ಲಿರುತ್ತದೆ.

* ಶ್ವಾಸಕೋಶದಲ್ಲಿನ ಎ.ಸಿ.ಇ (ACE) ಎಂಬ ಪ್ರೋಟೀನ್ ಅಂಶವು ಮಕ್ಕಳಲ್ಲಿ ಬೇರೆಯ ಆಕಾರದಲ್ಲಿರುವುದರಿಂದ ವೈರಾಣುವು ಅದಕ್ಕೆ ಜೋಡಣೆಯಾಗಿ ಶ್ವಾಸಕೋಶವನ್ನು ಸೇರಲು ಕಷ್ಟಕರವಾಗಬಹುದು.

* ಕೋವಿಡ್-19 ರ ಸಂಕೀರ್ಣತೆಗಳಿಗೆ ಹಾಗೂ ಉಸಿರಾಟದ ತೊಂದರೆಗೆ ಮುಖ್ಯ ಕಾರಣ ಸೈಟೋಕೈನ್ ಎಂಬ ಅಂಶ. ಮಕ್ಕಳ ಆಂತರಿಕ ರೋಗ ನಿರೋಧಕ ಶಕ್ತಿ ಚುರುಕಾಗಿಲ್ಲದ ಕಾರಣ ಈ ಸೈಟೋಕೈನ್ ಅಂಶವು ಶ್ವಾಸಕೋಶದ ಸಣ್ಣರಕ್ತನಾಳಗಳನ್ನು ನಾಶಪಡಿಸಲು ಕಾರಣ. ಆದುದರಿಂದ ಮಕ್ಕಳಲ್ಲಿ ಉಸಿರಾಟದ ತೊಂದರೆ ಬರುವುದು ಕಡಿಮೆ.

* ಚಿಕ್ಕ ಮಕ್ಕಳಲ್ಲಿ ಇತರೆ ವೈರಾಣೂವಿನ ಸೋಂಕು ಹೆಚ್ಚು ಆದುದರಿಂದ ಕೋವಿಡ್-19 ವೈರಾಣುವಿನೊಂದಿಗೆ ಅಡ್ಡ ಪ್ರತಿಕ್ರಿಯೆಯಾಗುವುದೆ ಹೆಚ್ಚು.

* ಮಕ್ಕಳಲ್ಲಿ ತಾಯಿ ಗರ್ಭದಿಂದ ಬರುವ ಪ್ರತಿರೋದಕಗಳು ಹೆಚ್ಚಿರುವುದರಿಂದ ಕೋವಿಡ್ ಸೋಂಕಿನ ತೀವ್ರತೆಗಳು ಕಡಿಮೆ.

* ಕೋವಿಡ್‌ನ ಸಂಕೀರ್ಣತೆಗಳಿಗೆ ಮುಖ್ಯ ಕಾರಣ ಮಧುಮೇಹ, ಶ್ವಾಸಕೋಶ ಸಂಬಂಧ ರೋಗಗಳು ಮುಂತಾದವು ಮಕ್ಕಳಲ್ಲಿ ಕಡಿಮೆ ಇರುವುದರಿಂದ ರೋಗದ ತೀವ್ರತೆ ಕಡಿಮೆ ಎನ್ನಬಹುದಾಗಿದೆ.

ಮಕ್ಕಳನ್ನು ಕೋವಿಡ್-19 ಸೋಂಕಿನ ವಿರುದ್ಧ ಹೇಗೆ ಸಂರಕ್ಷಿಸಬಹುದು?

* ಕಕೂನ್ ಲಸಿಕಾ ತಂತ್ರದ ಪ್ರಸ್ತಾವನೆಯಂತೆ ಮನೆಯಲ್ಲಿ ವಯಸ್ಕರರು ಎಲ್ಲರೂ ಲಸಿಕೆಯನ್ನು ಪಡೆದರೆ ಮಕ್ಕಳಿಗೆ ಒಂದು ರಕ್ಷಾ ಕವಚವನ್ನು ನಿರ್ಮಿಸಿ ಅವರನ್ನು ಸೋಂಕಿನಿಂದ ರಕ್ಷಿಸಬಹುದಾಗಿದೆ.

* ಮಕ್ಕಳಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳ ಸ್ವಚ್ಛತೆ ಇವುಗಳ ಬಗ್ಗೆ ಮಾಹಿತಿ ನೀಡುವುದು.

* ಮಕ್ಕಳಿಗೆ ಮನೆಯಲ್ಲೇ ಆಟ ಹಾಗೂ ಪಾಠಗಳ ವ್ಯವಸ್ಥೆಯನ್ನು ಮಾಡಿ ಸೋಂಕಿತ ವಾತಾವರಣಗಳು, ಸಾಮಾಜಿಕ ಸ್ಥಳಗಳು, ಮಾಲ್ ಗಳು, ಮಳಿಗೆಗಳು, ಅಂಗಡಿಗಳಿಗೆ ಹೋಗುವುದನ್ನು ತಪ್ಪಿಸಬೇಕು.

* ಮಕ್ಕಳಿಗೆ ಉಪಯೋಗಿಸಬಹುದಾದಂತಹ ಔಷಧಿಗಳು, ಸಲಕರಣೆಗಳು, ಮಾನವ ಸಂಪನ್ಮೂಲ ಇವುಗಳ ಉತ್ಪಾದನೆಯ ಕಡೆ ಸಂಬಂಧ ಪಟ್ಟ ಇಲಾಖೆಗಳು ತೀವ್ರಗತಿಯಲ್ಲಿ ಕೆಲಸಮಾಡಬೇಕು.

* ಆರೋಗ್ಯಕರ ಆಹಾರ ಸೇವನೆ, ಉತ್ತಮ ಜೀವನಶೈಲಿಯನ್ನು ಮಕ್ಕಳಲ್ಲಿ ರೂಢಿಸಿ ಆಂತರಿಕ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡಬೇಕು.

* ಮಕ್ಕಳಲ್ಲಿ ಶ್ವಾಸಕೋಶದಲ್ಲಿನ ಜೀವಕೋಶಗಳಲ್ಲಿ ಎ.ಸಿ.ಇ – 2 ಎಂಬ ಪ್ರೋಟೀನ್ ಅಂಶವು ಬೇರೆಯ ಆಕಾರದಲ್ಲಿದ್ದು ವೈರಾಣುವು ಈ ಪ್ರೋಟೀನ್‌ಗೆ ಜೋಡಣೆಯಾಗಿ ಒಳಸೇರಲು ಕಷ್ಟಕರವಾಗಿರುವುದರಿಂದ ವೈರಾಣುವಿನ ಸೋಂಕು ಕಡಿಮೆಯಾಗಬಹುದಾಗಿದೆ.

* ಅದಲ್ಲದೆ ಮಕ್ಕಳಲ್ಲಿ ಇತರೆ ವೈರಾಣುವಿನ ಸೋಂಕು ಸಾಮಾನ್ಯವಾಗಿರುವಿದರಿಂದ ಕೋವಿಡ್ ವೈರಾಣುವಿನೊಂದಿಗೆ ಅಡ್ಡ ಪ್ರತಿಕ್ರಿಯೆಯಾಗಬಹುದಾಗಿದೆ.

ಲೇಖಕರು: ಡಾ. ಸ್ಮಿತಾ ಜೆ.ಡಿ., ಹಿರಿಯ ದಂತ ವೈದ್ಯಾಧಿಕಾರಿ, ಗುಂಡ್ಲುಪೇಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು