ದೇಹದ ಸೂಕ್ಷ್ಮ ಅಂಗಳಲ್ಲಿ ಕಣ್ಣು ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಆಹಾರ, ಜೀವನಶೈಲಿಯ ಬದಲಾವಣೆಗಳಿಂದ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕಣ್ಣಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ಸಲಹೆಗಳು.

ಆಹಾರ ಪದ್ಧತಿ

ಸಮತೋಲನ ಆಹಾರದ ಮೂಲಕ ಕಣ್ಣಿನ ಆರೈಕೆ ಮಾಡಿಕೊಳ್ಳಬಹುದು. ಉತ್ತಮ ಪ್ರಮಾಣ ಪ್ರೋಟೀನ್ಯುಕ್ತ ಆಹಾರಗಳು, ಆರೋಗ್ಯಕರ ಕೊಬ್ಬಿನ ಅಂಶ, ಕಡಿಮೆ ಕಾರ್ಬೋಹೈಡ್ರೇಡ್ ಆಹಾರಗಳ ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಲಿದೆ.

ವಿಟಮಿನ್ಯುಕ್ತ ಆಹಾರ ಸೇವನೆ

ವಿಟಮಿನ್ ಎ, ಸಿ ಮತ್ತು ಇ ಪೋಷಕಾಂಶಗಳು ಕಣ್ಣಿಗೆ ಸಂಬಂಧಿಸಿದ ಕಾಯಿಲೆ ಬಾರದಂತೆ ರಕ್ಷಿಸುತ್ತವೆ. ಸಿಟ್ರಸ್ ಜಾತಿಯ ಹಣ್ಣುಗಳು, ಅಂದರೆ, ನಿಂಬೆ, ಕಿತ್ತಳೆ, ಮೂಸಂಬಿ, ಕಿವಿ ಮೊದಲಾದ ಹುಳಿ ರುಚಿಯ ಹಣ್ಣುಗಳು ಹಾಗೂ ಒಮೆಗಾ 3 ಕೊಬ್ಬಿನ ಆಮ್ಲಯುಕ್ತ ಮೀನು, ಹಸಿರು ತರಕಾರಿಗಳು, ಕ್ಯಾರೆಟ್, ಸಿಹಿ ಆಲೂಗಡ್ಡೆ ಕಣ್ಣಿನ ಆರೋಗ್ಯಕ್ಕೆ ಬೇಕಾದ ವಿಟಮಿನ್ ಒದಗಿಸಲಿವೆ.

ನಿಯಮಿತ ನೀರು ಸೇವನೆ

ಬಾಯಾರಿಕೆ ಆಗುವವರೆಗೂ ಕಾಯದೇ ಆಗಾಗ ನೀರು ಕುಡಿಯುತ್ತಿರಬೇಕು. ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆಯಾದರೆ ಕಣ್ಣಿಗೂ ತೊಂದರೆಯಾಗಬಹುದು. ಆದ್ದರಿಂದ ನಿಯಮಿತ ನೀರು ಕುಡಿಯುವುದರಿಂದ ಕಣ್ಣಿನ ಆರೈಕೆಗೆ ಉಪಯುಕ್ತವಾಗಿದೆ.

ಕಣ್ಣಿಗೆ ವಿಶ್ರಾಂತಿ

ಹೆಚ್ಚು ಹೊತ್ತು ಮೊಬೈಲ್, ಕಂಪ್ಯೂಟರ್ ನೋಡುವುದರಿಂದ ಕಣ್ಣಿಗೆ ದಣಿವಾಗುತ್ತದೆ. ಆದ್ದರಿಂದ ಕನಿಷ್ಠ 5 ನಿಮಿಷವಾದರೂ ಕಣ್ಣು ಮಿಟುಕಿಸಬಹುದು ಅಥವಾ ಕಣ್ಣಿಗೆ ಸಂಬಂಧಿಸಿದ ಸಣ್ಣ ಪುಟ್ಟ ವ್ಯಾಯಾಮಗಳನ್ನು ಮಾಡುತ್ತಿದ್ದರೆ ನರಗಳನ್ನು ಉತ್ತಮವಾಗಿರಿಸಿ ದೃಷ್ಟಿ ಸಮಸ್ಯೆ ನಿವಾರಣೆಗೆ ಸಹಕರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.